ಹೈಟೆಕ್ ಆದ `Aadhaar`
ಮಳೆಯಲ್ಲಿ ಒದ್ದೆಯಾಗುವುದು, ಕಾರ್ಡ್ ಹರಿಯುವುದು ಮತ್ತು ಕರಗುವಿಕೆಯಿಂದ ಆಧಾರ್ ಕಾರ್ಡ್ ಅನ್ನು ರಕ್ಷಿಸಲು, ನೀವು ಅದನ್ನು ಸುರಕ್ಷಿತವಾಗಿ ಇರಿಸಿ, ಲ್ಯಾಮಿನೇಟ್ ಮಾಡಿಸುತ್ತಿರ. ಅದು ಫೋಲ್ಡ್ ಆಗವಾರದೆಂದು ಹಲವು ರೀತಿಯ ಕ್ರಮ ಕೈಗೊಳ್ಳುತ್ತೀರ. ಆದರೆ ಈಗ ನೀವು ಇದೆಲ್ಲವನ್ನೂ ಮಾಡುವ ಅಗತ್ಯವಿಲ್ಲ. ಕಾಲ ಕಳೆದಂತೆ ಆಧಾರ್ ಕಾರ್ಡ್ ಸಹ ಹೈಟೆಕ್ ಆಗಿ ಮಾರ್ಪಟ್ಟಿದೆ.
ನವದೆಹಲಿ: ಮಳೆಯಲ್ಲಿ ಒದ್ದೆಯಾಗುವುದು, ಕಾರ್ಡ್ ಹರಿಯುವುದು ಮತ್ತು ಕರಗುವಿಕೆಯಿಂದ ಆಧಾರ್ ಕಾರ್ಡ್ ಅನ್ನು ರಕ್ಷಿಸಲು, ನೀವು ಅದನ್ನು ಸುರಕ್ಷಿತವಾಗಿ ಇರಿಸಿ, ಲ್ಯಾಮಿನೇಟ್ ಮಾಡಿಸುತ್ತಿರ. ಅದು ಫೋಲ್ಡ್ ಆಗವಾರದೆಂದು ಹಲವು ರೀತಿಯ ಕ್ರಮ ಕೈಗೊಳ್ಳುತ್ತೀರ. ಆದರೆ ಈಗ ನೀವು ಇದೆಲ್ಲವನ್ನೂ ಮಾಡುವ ಅಗತ್ಯವಿಲ್ಲ. ಕಾಲ ಕಳೆದಂತೆ ಆಧಾರ್ ಕಾರ್ಡ್ (Aadhar Card) ಸಹ ಹೈಟೆಕ್ ಆಗಿ ಮಾರ್ಪಟ್ಟಿದೆ. ಯುಐಡಿಎಐ (UIDAI) ಇದನ್ನು ಹೊಸ ಅವತಾರದಲ್ಲಿ ಪರಿಚಯಿಸಿದೆ. ಈಗ ಆಧಾರ್ ಕಾರ್ಡ್ ಎಟಿಎಂ ಕಾರ್ಡ್‌ಗಳಂತೆ ಕಾಣಿಸುತ್ತದೆ.
ಹೊಸ ರೂಪದಲ್ಲಿ ಆಧಾರ್ ಕಾರ್ಡ್:
ಈಗ ಪಿವಿಸಿ ಕಾರ್ಡ್‌ನಲ್ಲಿ ಆಧಾರ್ ಕಾರ್ಡ್ ಮರುಮುದ್ರಣ ಮಾಡಬಹುದು ಎಂದು ಯುಐಡಿಎಐ ಟ್ವೀಟ್ ಮಾಡಿದೆ. ನಿಮ್ಮ ಎಟಿಎಂ ಅಥವಾ ಡೆಬಿಟ್ ಕಾರ್ಡ್‌ನಂತೆಯೇ ಈ ಕಾರ್ಡ್ ಅನ್ನು ಕೂಡ ನಿಮ್ಮ ವ್ಯಾಲೆಟ್ನಲ್ಲಿ ಸುಲಭವಾಗಿ ಇಡಬಹುದು. ಯುಐಡಿಎಐ ಟ್ವೀಟ್ ಮಾಡಿ, 'ನಿಮ್ಮ ಆಧಾರ್ ಈಗ ಅನುಕೂಲಕರ ಗಾತ್ರದಲ್ಲಿರುತ್ತದೆ, ಅದನ್ನು ನೀವು ಸುಲಭವಾಗಿ ನಿಮ್ಮ ಪರ್ಸ್ ನಲ್ಲಿ ಇಡಬಹುದು.' ಆದಾಗ್ಯೂ ಈ ಕಾರ್ಡ್ ಮಾಡಲು ನೀವು 50 ರೂಪಾಯಿಗಳನ್ನು ಖರ್ಚು ಮಾತ್ರ ಮಾಡಬೇಕಾಗುತ್ತದೆ.
Aadhaar for children: ನಿಮ್ಮ ಮಕ್ಕಳಿಗೆ ಆಧಾರ್ ಕಾರ್ಡ್ ಪಡೆಯುವುದು ಹೇಗೆ? ಇಲ್ಲಿದೆ ಸುಲಭ ಮಾರ್ಗ
ಆಧಾರ್‌ನಲ್ಲಿ ಮೊಬೈಲ್ ನಂಬರ್ ಅಪ್ಡೇಟ್‌ಗಾಗಿ ಡಾಕ್ಯುಮೆಂಟ್ ತೋರಿಸುವುದು ಅನಿವಾರ್ಯವಲ್ಲ
ಹೊಸ ಆಧಾರ್ ಪಿವಿಸಿ ಕಾರ್ಡ್ ತಯಾರಿಸುವುದು ಹೇಗೆ ?
1. ಮೊದಲು ನೀವು ಯುಐಡಿಎಐ ವೆಬ್‌ಸೈಟ್ https://uidai.gov.in/ ಗೆ ಹೋಗಬೇಕು
2. ಇಲ್ಲಿ, 'My Aadhaar' ವಿಭಾಗಕ್ಕೆ ಹೋಗಿ 'Order Aadhaar PVC Card' ಮೇಲೆ ಕ್ಲಿಕ್ ಮಾಡಿ.
3. ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ
4. ಭದ್ರತಾ ಕೋಡ್, ಕ್ಯಾಪ್ಚಾ ತುಂಬಿದ ನಂತರ ಒಟಿಪಿ ಕ್ಲಿಕ್ ಮಾಡಿ
5. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ಕಾಣಿಸುತ್ತದೆ, ಅದನ್ನು ನಮೂದಿಸಿ
6. ಆಧಾರ್ ಪಿವಿಸಿ ಕಾರ್ಡ್ ಪೂರ್ವವೀಕ್ಷಣೆ ನಿಮ್ಮ ಮುಂದೆ ಕಾಣಿಸುತ್ತದೆ.
7. ಇದರ ನಂತರ ನೀವು ಪಾವತಿಯ ಮೇಲೆ ಕ್ಲಿಕ್ ಮಾಡಿ, 50 ರೂ. ಪಾವತಿಸಿ
8. ಪಾವತಿ ಮಾಡಿದ ತಕ್ಷಣ ನಿಮ್ಮ ಪ್ರಕ್ರಿಯೆಯು ಪೂರ್ಣಗೊಂಡಿದೆ, ಅದು ನಿಮ್ಮ ಮನೆಗೆ ಸ್ಪೀಡ್ ಪೋಸ್ಟ್‌ನೊಂದಿಗೆ ಬರುತ್ತದೆ.