ನವದೆಹಲಿ: Aap Ke Dwar Ayushman Campaign - ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ' (Aap Ke Dwar Ayushman) ಅಭಿಯಾನ ಚಲಾಯಿಸುತ್ತಿದೆ. ಈ ಅಭಿಯಾನದ ಅಡಿ ಒಂದೇ ದಿನದಲ್ಲಿ ಸುಮಾರು 9.42ಲಕ್ಷ ಜನರ ಪರೀಶೀಲನೆ ನಡೆಸಲಾಗಿದೆ. ಮಾರ್ಚ್ 25 ರಂದು ಒಂದೇ  ದಿನದಲ್ಲಿ NHA-IT ಸಿಸ್ಟಂ ದಾಖಲೆಯ ಮಟ್ಟದಲ್ಲಿ ಲಾಭಾರ್ಥಿಗಳ ಪರಿಶೀಲನೆ ನಡೆಸಿದ ಬಳಿಯ ಆ ದಿನ  AB PM-JAY ಪಾಲಿಗೆ ಐತಿಹಾಸಿಕ ದಿನವಾಗಿ ಮಾರ್ಪಟ್ಟಿದೆ.


COMMERCIAL BREAK
SCROLL TO CONTINUE READING

ಪ್ರತಿಯೊಂದು ಲಾಭಾರ್ಥಿಗಳ ಕುಟುಂಬಕ್ಕೆ ಪ್ರತಿವರ್ಷ 5 ಲಕ್ಷ ರೂ.ವರೆಗೆ ನಿಶುಲ್ಕ ಚಿಕಿತ್ಸೆ
ಫೆಬ್ರವರಿ 1 ರಿಂದ 'ಆಪ್ಕೆ ದ್ವಾರ ಆಯುಷ್ಮಾನ್' ಅಭಿಯಾನಡಿಯಲ್ಲಿ ಫಲಾನುಭವಿಗಳ ಜಾಗೃತಿ ಅಭಿಯಾನನಡೆಸಲಾಗುತ್ತಿದೆ. ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ ಇತಿಹಾಸದಲ್ಲಿ ಮೊದಲ ಬಾರಿಗೆ 9.42 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಫಲಾನುಭವಿಗಳು ತಮ್ಮನ್ನು ತಾವು ಪರಿಶೀಲಿಸಿಕೊಂಡಿದ್ದಾರೆ. ಈ ಯೋಜನೆಯಡಿ, ಪ್ರತಿ ಫಲಾನುಭವಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ.ಗಳ ಉಚಿತ ಚಿಕಿತ್ಸೆ ಪಡೆಯುವ ಹಕ್ಕಿದೆ ಎಂಬುದು ಗಮನಾರ್ಹ.


ಇದನ್ನೂ ಓದಿ- ದೇಶದ 13.5 ಕೋಟಿ ESIC ಲಾಭಾರ್ಥಿಗಳಿಗೆ ಶೀಘ್ರವೇ ಸಿಗಲಿದೆ Modi ಸರ್ಕಾರದ ಈ ಯೋಜನೆಯ ಲಾಭ


ಛತ್ತಿಸ್ಗಡ್ ದಲ್ಲಿ ಅತಿ ಹೆಚ್ಚು ಅಂದರೆ 6 ಲಕ್ಷ ಜನರು ತಮ್ಮನ್ನು ಪರಿಶೀಲಿಸಿಕೊಂಡಿದ್ದಾರೆ
ಕಳೆದ 24 ಗಂಟೆಗಳಲ್ಲಿ (25 ಮಾರ್ಚ್) 'ಆಪ್ಕೆ ದ್ವಾರ್ ಆಯುಷ್ಮಾನ್' ಅಭಿಯಾನದ ಅಡಿ ಕೇವಲ ಛತ್ತಿಸ್ಗಡ್ ದಲ್ಲಿ 6 ಲಕ್ಷಕ್ಕೂ ಅಧಿಕ ಲಾಭಾರ್ಥಿಗಳು ತಮ್ಮನ್ನು ತಾವು ಪರಿಶೀಲಿಸಿಕೊಂಡಿದ್ದರೆ, ಮಧ್ಯಪ್ರದೇಶದಲ್ಲಿ 1,23,488  ಲಾಭಾರ್ಥಿಗಳು ತಮ್ಮ ಹೆಸರನ್ನು ಪರಿಶೀಲಿಸಿಕೊಂಡಿದ್ದಾರೆ. ಇನ್ನೊಂದೆಡೆ ಉತ್ತರ ಪ್ರದೇಶದಲ್ಲಿ 80,337, ಪಂಜಾಬ್ ನಲ್ಲಿ 38,488, ಉತ್ತರಾಖಂಡ್ ನಲ್ಲಿ 7,460, ಹರಿಯಾಣಾದಲ್ಲಿ 8,247  ಹಾಗೂ ಬಿಹಾರದಲ್ಲಿ 16,070 ಲಾಭಾರ್ಥಿಗಳು ತಮ್ಮ ಪರಿಶೀಲನೆ ಕೈಗೊಂಡಿದ್ದಾರೆ.


ಇದನ್ನೂ ಓದಿ-Good News: ಇನ್ಮುಂದೆ ಬಡವರಷ್ಟೇ ಅಲ್ಲ ಇವರೂ ಕೂಡ ಈ ಯೋಜನೆಯ ಲಾಭ ಪಡೆಯಬಹುದು


ಫೆಬ್ರುವರಿ 1 ರಿಂದ ನಡೆಸಲಾಗುತ್ತಿದೆ 'ಆಪ್ ಕೆ ದ್ವಾರ್ ಆಯುಷ್ಮಾನ್' ಅಭಿಯಾನ
AB PM-JAY
ಬಗ್ಗೆ ಫಲಾನುಭವಿಗಳಿಗೆ ಅರಿವು ಮೂಡಿಸಲು 'ಆಪ್ಕೆ ದ್ವಾರ್  ಆಯುಷ್ಮಾನ್' ಅಭಿಯಾನವನ್ನು ಫೆಬ್ರವರಿ 1, 2021 ರಿಂದ ಪ್ರಾರಂಭಿಸಲಾಗಿದೆ. ಈ ಅಭಿಯಾನದಡಿಯಲ್ಲಿ, ಗ್ರಾಮೀಣ ಮತ್ತು ದೂರದ ಭಾಗಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ ಯೋಜನೆಯ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಮತ್ತು ಆಯುಷ್ಮಾನ್ ಕಾರ್ಡ್ ಪಡೆಯಲು ಅವರನ್ನು ಪ್ರೇರೆಪಿಸಲಾಗುತ್ತಿದೆ. ಪ್ರಸ್ತುತ, ಈ ಅಭಿಯಾನವನ್ನು ಬಿಹಾರ, ಛತ್ತಿಸ್ಗಡ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಉತ್ತರಾಖಂಡ್ ಮತ್ತು ಇತರ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲಾಗುತ್ತಿದೆ. ಫಲಾನುಭವಿಯ ಯಶಸ್ವಿ ಪರಿಶೀಲನೆಯ ನಂತರ, ಫಲಾನುಭವಿಗೆ ಆಯುಷ್ಮಾನ್ ಕಾರ್ಡ್ ನೀಡುವ ಪ್ರಕ್ರಿಯೆಯು ನಡೆಸಲಾಗುತ್ತಿದೆ. ಫಲಾನುಭವಿಗಳು ತಮ್ಮ ಆಯುಷ್ಮಾನ್ ಕಾರ್ಡ್ ಅನ್ನು ಆಯಾ ಸಿಎಸ್ಸಿ ಕೇಂದ್ರ ಮತ್ತು ಯುಟಿಐಐಟಿಎಸ್ಎಲ್ ಕೇಂದ್ರದಿಂದ ಉಚಿತವಾಗಿ ಪಡೆಯಬಹುದು.


ಇದನ್ನೂ ಓದಿ- ಸರ್ಕಾರದ ಈ ಯೋಜನೆಯಿಂದ 1 ಕೋಟಿ ಬಡ ಜನರಿಗೆ ಲಾಭ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.