ಬಳಕೆದಾರರ ಸ್ನೇಹಿ ಆರೋಗ್ಯ ಸೇತು ಅಪ್ಲಿಕೇಶನ್‌ನಲ್ಲಿ ಈ ಜನರಿಗೆ ಸಿಗಲಿದೆ ವಿಶೇಷ ವೈಶಿಷ್ಟ್ಯ
ಕರೋನಾವೈರಸ್ ಅಪಾಯವನ್ನು ಅರ್ಥಮಾಡಿಕೊಳ್ಳಲು, ಈ ಮೊಬೈಲ್ ಅಪ್ಲಿಕೇಶನ್ ಅನ್ನು ಕೇಂದ್ರ ಸರ್ಕಾರವು ಸಿದ್ಧಪಡಿಸಿದೆ.
ನವದೆಹಲಿ: ಕೊರೊನಾವೈರಸ್ ಕಾಂಟಾಕ್ಟ್ ಬಗ್ಗೆ ಮಾಹಿತಿ ನೀಡುವ ಆರೋಗ್ಯ ಸೇತು ಅಪ್ಲಿಕೇಶನ್ (AAROGYA SETU APP) ಇನ್ನೂ ಸುಲಭವಾಗಲಿದೆ. ಆರೋಗ್ಯ ಸೇತು ಆ್ಯಪ್ ಅನ್ನು ವಿಕಲಚೇತನರಿಗೆ ಯೋಗ್ಯವಾಗಿಸಲು ಐಟಿ ಸಚಿವಾಲಯ ಕೆಲಸ ಮಾಡುತ್ತಿದೆ. ಸುದ್ದಿ ಸಂಸ್ಥೆ ಪಿಟಿಐ ಸಚಿವಾಲಯವನ್ನು ಉಲ್ಲೇಖಿಸಿ ಈ ಮಾಹಿತಿಯನ್ನು ನೀಡಿದೆ.
ವಿಕಲಚೇತನರ ಬಗ್ಗೆ ಕೆಲಸ ಮಾಡುತ್ತಿರುವ ಇಲಾಖೆಯ ಜಂಟಿ ಕಾರ್ಯದರ್ಶಿ ಪ್ರಬೋಧ್ ಸೇಠ್ ಇದು ನಿಜಕ್ಕೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಕ್ಷೇತ್ರವಾಗಿದೆ ಎಂದು ಇಂಡಸ್ಟ್ರಿ ಚೇಂಬರ್ ಅಸ್ಸೋಚಾಮ್‌ನ ಬೆವಿನಾರ್‌ನಲ್ಲಿ ತಿಳಿಸಿದ್ದಾರೆ. ಆರೋಗ್ಯ ಸೇತು ಆ್ಯಪ್ ವಿಕಲಚೇತನರಿಗೆ ಕೆಲಸ ಮಾಡುವಂತೆ ನಾವು ಈಗಾಗಲೇ ಎರಡು ಬಾರಿ ಐಟಿ ಸಚಿವಾಲಯಕ್ಕೆ ಬರೆದಿದ್ದೇವೆ. ಅವರು ಅದರಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಈ ಅಪ್ಲಿಕೇಶನ್ ಬರಲಿದೆ ಎಂದು ಆಶಿಸುತ್ತೇವೆ ಎಂದಿದ್ದಾರೆ.
ಆರೋಗ್ಯ ಸೇತು ಆ್ಯಪ್‌ನ್ನು ಸುಲಭವಾಗಿ ಜನರಿಗೆ ತಲುಪಿಸಲು ಸರ್ಕಾರದ ಕೈಗೊಂಡಿದೆ ಈ ಕ್ರಮ
ಸೇಠ್ ಪ್ರಕಾರ ಇಲಾಖೆಯ ಜಂಟಿ ಕಾರ್ಯದರ್ಶಿ ಮಟ್ಟದಲ್ಲಿಯೂ ಕೆಲಸ ನಡೆಯುತ್ತಿದೆ. ಆದರೆ ಐಟಿ ಸಚಿವಾಲಯವಿಲ್ಲದೆ ಇದು ಸಾಧ್ಯವಿಲ್ಲ. ಅಸ್ಸೋಚಾಮ್ ಪ್ರಕಾರ Quarantine ಕೇಂದ್ರಗಳ ಪ್ರವೇಶದ ಬಗ್ಗೆಯೂ ಇದರಲ್ಲಿ ಮಾರ್ಗದರ್ಶನ ನೀಡಲಾಗುವುದು ಎನ್ನಲಾಗಿದೆ.
ಕರೋನಾವೈರಸ್ (Coronavirus) ಅಪಾಯವನ್ನು ಅರ್ಥಮಾಡಿಕೊಳ್ಳಲು, ಈ ಮೊಬೈಲ್ ಅಪ್ಲಿಕೇಶನ್ ಅನ್ನು ಕೇಂದ್ರ ಸರ್ಕಾರವು ಸಿದ್ಧಪಡಿಸಿದೆ. ಇದು ನಿಯತಕಾಲಿಕವಾಗಿ ಈ ಸಾಂಕ್ರಾಮಿಕದ ಅಪಾಯಗಳ ಬಗ್ಗೆ ಎಚ್ಚರಿಸುತ್ತದೆ ಮತ್ತು ನಾವು ಅದರಿಂದ ಸುರಕ್ಷಿತವಾಗಿದ್ದೇವೆಯೇ ಎಂದು ಹೇಳುತ್ತದೆ.
ಆರೋಗ್ಯ ಸೇತು (AAROGYA SETU) ಆ್ಯಪ್ ಅನ್ನು ತಮ್ಮ ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದರು. ಆ್ಯಪ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ 10 ದಶಲಕ್ಷಕ್ಕೂ ಹೆಚ್ಚು ಜನರು ಇದನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಮೇ ತಿಂಗಳಲ್ಲಿ ಜಾಗತಿಕವಾಗಿ ಡೌನ್‌ಲೋಡ್ ಮಾಡಿದ ಟಾಪ್ 10 ಅಪ್ಲಿಕೇಶನ್‌ಗಳಲ್ಲಿ ಒಂದು Aarogya Setu
ಆರೋಗ್ಯ ಸೆತು ಅಪ್ಲಿಕೇಶನ್ ಬ್ಲೂಟೂತ್ ಮತ್ತು ಜಿಪಿಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಸರ್ಕಾರದ ಪ್ರಕಾರ ಈ ಅಪ್ಲಿಕೇಶನ್ ಕೋವಿಡ್-19 (Covid-19) ಸೋಂಕಿನ ಹರಡುವಿಕೆ, ಅಪಾಯ ಮತ್ತು ತಡೆಗಟ್ಟುವಿಕೆಗಾಗಿ ಜನರಿಗೆ ನಿಖರವಾದ ಮಾಹಿತಿಯನ್ನು ನೀಡುತ್ತದೆ. ಈ ಅಪ್ಲಿಕೇಶನ್ ಬ್ಲೂಟೂತ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮೂಲಕ ಸೋಂಕು ಅಥವಾ ಇತರರೊಂದಿಗೆ ಸಂಪರ್ಕದ ಬಗ್ಗೆ ಬಳಕೆದಾರರಿಗೆ ತಿಳಿಸುತ್ತದೆ. ಈ ಅಪ್ಲಿಕೇಶನ್ ವೈರಸ್‌ಗಳಿಂದ ರಕ್ಷಿಸಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಸಲಹೆಗಳನ್ನು ಸಹ ಒದಗಿಸುತ್ತದೆ.
ಆರೋಗ್ಯ ಸೇತು ಆಪ್ ಹಿಂದಿ, ಇಂಗ್ಲಿಷ್ ಸೇರಿದಂತೆ 11 ಭಾರತೀಯ ಭಾಷೆಗಳಲ್ಲಿದೆ. ಅದನ್ನು ಡೌನ್‌ಲೋಡ್ ಮಾಡಿದ ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ಅದರಲ್ಲಿ ನೋಂದಾಯಿಸಿಕೊಳ್ಳಬೇಕು. ಇದನ್ನು ಒಟಿಪಿ ಮೂಲಕ ಪರಿಶೀಲಿಸಲಾಗುತ್ತದೆ. ಈ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ತಮ್ಮ ಬಗ್ಗೆ ಹೆಸರು, ವಯಸ್ಸು, ಉದ್ಯೋಗ ಮತ್ತು ವಿದೇಶ ಪ್ರವಾಸದಂತಹ ಕೆಲವು ಮಾಹಿತಿಯನ್ನು ನೀಡಬೇಕಾಗುತ್ತದೆ.