ಬೆಂಗಳೂರು: ಏರೋ ಇಂಡಿಯಾ ದೇಶದ ಉತ್ಪಾದನಾ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ‘ಏರೋ ಇಂಡಿಯಾ ದೇಶದ ಉತ್ಪಾದನಾ ಸಾಮರ್ಥ್ಯ ಮತ್ತು ಪ್ರಧಾನಿ ಮೋದಿಯವರ ಆಶಯದಂತೆ 'ಆತ್ಮನಿರ್ಭರ ಭಾರತ'ವನ್ನು ಸಾಕಾರಗೊಳಿಸುವಲ್ಲಿ ಸಾಧಿಸಿದ ಪ್ರಗತಿಯನ್ನು ಜಗತ್ತಿಗೆ ತೋರಿಸಲಿದೆ ಎಂದು ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

2023ನೇ ಸಾಲಿನ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವು ಏರೋಸ್ಪೇಸ್ ಮತ್ತು ವಾಯುಯಾನ ಕ್ಷೇತ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತದೆ ಎಂದು ಇದೇ ವೇಳೆ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.


ಇದನ್ನೂ ಓದಿ: Ghost village: ರಾಷ್ಟ್ರ ರಾಜಧಾನಿಯಲ್ಲಿದೆ ‘ಭೂತ ಗ್ರಾಮ’: ದೆಹಲಿಯ ಈ ಸ್ಥಳದ ಕಥೆ ಕೇಳಿದ್ರೆ ದಂಗಾಗೋದು ಖಂಡಿತ!


ತೇಜಸ್ ಸಂಪೂರ್ಣ ಸ್ವದೇಶಿಕರಣ


ಲಘು ಯುದ್ಧ ವಿಮಾನ (LCA) ತೇಜಸ್ ಅನ್ನು ಸಂಪೂರ್ಣವಾಗಿ ಸ್ವದೇಶಿಕರಣಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಪ್ರಸ್ತುತ LCA ತೇಜಸ್ ಅನ್ನು ಆಮದು ಮಾಡಿಕೊಂಡ ಎಂಜಿನ್‌ನೊಂದಿಗೆ ಸಂಯೋಜಿಸಲಾಗಿದೆ.


ವಿಮಾನವನ್ನು ಸಂಪೂರ್ಣವಾಗಿ ಸ್ವದೇಶಿಕರಣಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ನಮಗೆ ಸ್ವಲ್ಪ ಸಮಯ ಬೇಕು. ನಾವು ಈ ವಿಮಾನವನ್ನು ಶೇ.100ರಷ್ಟು ಸ್ವದೇಶಿಯನ್ನಾಗಿ ಮಾಡುತ್ತೇವೆ. ಈ ಕಾರ್ಯಕ್ರಮವು ಎಲ್ಲಾ ಭಾರತ ಸ್ನೇಹಿ ದೇಶಗಳು ಮತ್ತು ಭಾರತದ ರಕ್ಷಣಾ ಮಂತ್ರಿಗಳು ಪರಸ್ಪರ ಮಾತುಕತೆ ನಡೆಸಲು ಮತ್ತು ಸಾಮರ್ಥ್ಯ ವೃದ್ಧಿ, ತರಬೇತಿ, ಬಾಹ್ಯಾಕಾಶ, AI ಮತ್ತು ಕಡಲ ಭದ್ರತೆಗೆ ಸಂಬಂಧಿಸಿದಂತೆ ಸಹಕಾರವನ್ನು ಮತ್ತಷ್ಟು ಗಾಢವಾಗಿಸುವ ಒಂದು ಅವಕಾಶವಾಗಿದೆ ಎಂದು ಹೇಳಿದರು.


ಇದನ್ನೂ ಓದಿ: ಮುಂದಿನ ತಿಂಗಳೊಳಗೆ ಸ್ಮಾರ್ಟ್ ಸಿಟಿ ಅಡಿಯಲ್ಲಿ 22 ನಗರಗಳು ಸಿದ್ದ


ಸ್ವಾವಲಂಬನೆಯನ್ನು ಉತ್ತೇಜಿಸುವ ಭಾರತದ ಸಂಕಲ್ಪದಿಂದಾಗಿ ರಕ್ಷಣಾ ವಸ್ತುಗಳ ರಫ್ತು ಹೆಚ್ಚಾಗಿದೆ. ಏರೋ ಇಂಡಿಯಾ ಪ್ರದರ್ಶನಕ್ಕೂ ಉಕ್ರೇನ್ ಸಂಘರ್ಷಕ್ಕೂ ಯಾವುದೇ ಸಂಬಂಧವಿಲ್ಲ. ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಮತ್ತು ರಕ್ಷಣಾ ರಫ್ತುಗಳನ್ನು ಹೆಚ್ಚಿಸುವುದು ನಮ್ಮ ಸಂಕಲ್ಪವಾಗಿದೆ. ಯಾರೂ ಅದನ್ನು ಉಕ್ರೇನ್ ಸಂಘರ್ಷದೊಂದಿಗೆ ಹೋಲಿಕೆ ಮಾಡಬಾರದು ಎಂದು ಅವರು ಇದೇ ವೇಳೆ ಹೇಳಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.