PM Kisan Yojana: ಕೇಂದ್ರದ ಮೋದಿ ಸರ್ಕಾರವು ದೇಶದ ಬಡ ವರ್ಗದವರಿಗೆ ಸರ್ಕಾರದಿಂದ ಆರ್ಥಿಕ ನೆರವು ಪಡೆಯಲು ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ. ಈ ಸರಣಿಯಲ್ಲಿ, ಮೋದಿ ಸರ್ಕಾರವು ದೇಶದ ಅನ್ನದಾತ ಎಂದು ಕರೆಯಲ್ಪಡುವ ರೈತರಿಗಾಗಿ 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ' ಅನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ರೈತರಿಗೆ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಈ ಮೂಲಕ ರೈತ ಯಾವುದೇ ಭಯವಿಲ್ಲದೆ ಕೃಷಿಯನ್ನು ಪ್ರಾರಂಭಿಸಬಹುದು.
ಇದನ್ನೂ ಓದಿ: Shani Ast 2023: ಕುಂಭ ರಾಶಿಯಲ್ಲಿ ಸಂಪೂರ್ಣ ಅಸ್ತನಾದ ಶನಿ, ಈ ರಾಶಿಗಳ ಸಂಕಷ್ಟದಲ್ಲಿ ಹೆಚ್ಚಳ!
ಪ್ರಧಾನಿ ಕಿಸಾನ್ ಯೋಜನೆ ಎಂದರೇನು?
ಈ ಯೋಜನೆಯಡಿ ರೈತರಿಗೆ ವಾರ್ಷಿಕ 6 ಸಾವಿರ ರೂ. ನೀಡಲಾಗುತ್ತದೆ. 2 ಸಾವಿರ ರೂಪಾಯಿಗಳ ಕಂತಿನ ರೂಪದಲ್ಲಿ ವರ್ಷದಲ್ಲಿ ಮೂರು ಬಾರಿ ನೀಡಲಾಗುತ್ತದೆ. ಈ ಮೊತ್ತ ನೇರವಾಗಿ ರೈತರ ಖಾತೆಗೆ ಬರುವುದು ಯೋಜನೆಯ ವಿಶೇಷ. ಇಲ್ಲಿಯವರೆಗೆ ರೈತರು 12 ಕಂತುಗಳನ್ನು ಸ್ವೀಕರಿಸಿದ್ದಾರೆ. ಈಗ ಯೋಜನೆಯ ಅಡಿಯಲ್ಲಿ ಬರುವ 13 ನೇ ಕಂತಿಗಾಗಿ ಕಾಯುತ್ತಿದ್ದಾರೆ.
ಈ ದಿನಾಂಕದವರೆಗೆ ಬರಬಹುದು 13 ನೇ ಕಂತು:
ಪಿಎಂ ಕಿಸಾನ್ ಯೋಜನೆ 13 ನೇ ಕಂತು ಜನವರಿ ತಿಂಗಳಲ್ಲೇ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಈ ಮೊತ್ತವು ಆ ಸಮಯದಲ್ಲಿ ಬರಲು ಸಾಧ್ಯವಾಗಲಿಲ್ಲ. ಆದರೆ ಕೆಲವು ಮಾಧ್ಯಮ ವರದಿಗಳ ಪ್ರಕಾರ ಮಾರ್ಚ್ 8 ರ ಮೊದಲು ಫಲಾನುಭವಿಗಳು ಯೋಜನೆಯು 13 ನೇ ಕಂತನ್ನು ಸಹ ಪಡೆಯುತ್ತಾರೆ ಎನ್ನಲಾಗಿದೆ.
ಇದನ್ನೂ ಓದಿ: Nothing Phone 1 ಮೇಲೆ ಭಯಂಕರ ಡಿಸ್ಕೌಂಟ್! ನೀವು ನಿಮ್ಮ ಕನಸಲ್ಲೂ ಊಹಿಸಿರಲಿಕ್ಕಿಲ್ಲ...
KYC ಕಡ್ಡಾಯ:
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ರೈತರು 13 ನೇ ಕಂತಿನ ಮೊದಲು KYC ಅನ್ನು ಮಾಡಬೇಕು. ನೀವು KYC ಮಾಡದಿದ್ದರೆ PM ಕಿಸಾನ್ ಅಡಿಯಲ್ಲಿ ಕಂತುಗಳ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ, ನಿಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಹೋಗುವ ಮೂಲಕ ನೀವು ಇ-ಕೆವೈಸಿಯನ್ನು ಮಾಡಬಹುದು. ಅಲ್ಲಿ ರೂ.15 ಪಾವತಿಸಬೇಕಾಗುತ್ತದೆ. ಇದಲ್ಲದೇ, ಆಧಾರ್ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯಿಂದ ಒಟಿಪಿ ಮೂಲಕ ಪಿಎಂ ಕಿಸಾನ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ನೀವು ಇ-ಕೆವೈಸಿ ಪರಿಶೀಲನೆಯನ್ನು ಸಹ ಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.