Afghanistan Crisis:ತಾಲಿಬಾನಿಗಳ (Taliban) ಪ್ರತಿ ಭಾರತದ ಧೋರಣೆಯಲ್ಲಿ ಮೃದುತ್ವ ಕಂಡುಬಂದಂತೆ ತೋರುತ್ತಿದೆ ಹಾಗೂ ತಾಲಿಬಾನ್ ಜೊತೆಗೆ ಮಾತುಕತೆಯ ಸಂಕೇತ ನೀಡಿದೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಭಾರತ ಸರ್ಕಾರ (Governmernment Of India) ತಾಲಿಬಾನ್ ಜೊತೆಗೆ ಮಾತುಕತೆ ನಡೆಸಲಿದೆ ಎನ್ನಲಾಗಿದೆ. ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಾತುಕತೆ ನಡೆಸುವ ಅವಶ್ಯಕತೆ ಇದೆ ಮತ್ತು ತಾಲಿಬಾನ್ ಅನ್ನು ಸಂಪರ್ಕಿಸಲಾಗುವುದು ಎನ್ನಲಾಗಿದೆ. ಈ ಮೊದಲು ಕೂಡ ತಾಲಿಬಾನ್ ಅನ್ನು ಸಂಪರ್ಕಿಸಿ ಮಾತುಕತೆ ನಡೆಸುವುದನ್ನು ಅಲ್ಲಗಳೆಯಲಾಗಿರಲಿಲ್ಲ.


COMMERCIAL BREAK
SCROLL TO CONTINUE READING

ಆದರೆ, ಈ ಸಂಪರ್ಕವು ಯಾವ ರೀತಿ ಇರಲಿದೆ ಇದು ಭವಿಷ್ಯದಲ್ಲಿ ತಾಲಿಬಾನ್ ಮೇಲೆ ಅವಲಂಭಿಸಿದೆ. ಭಾರತದ ಬಗ್ಗೆ ತಾಲಿಬಾನ್ ಯಾವ ನಿಲುವು ತೆಗೆದುಕೊಳ್ಳುತ್ತದೆ ಮತ್ತು ಅದು ಭಾರತದ ಹಿತಾಸಕ್ತಿಗಳನ್ನು ಹೇಗೆ ರಕ್ಷಿಸುತ್ತದೆ ಎಂಬುದು ತುಂಬಾ ಮಹತ್ವದ್ದಾಗಿದೆ. ಇದೇ ವೇಳೆ  ತಾಲಿಬಾನ್ ತನ್ನ ಸರ್ಕಾರವನ್ನು ಅಫ್ಘಾನಿಸ್ತಾನದಲ್ಲಿ (Afghanistan) ನಡೆಸಲು ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಇದಕ್ಕಾಗಿ, ಪ್ರತ್ಯೇಕ ಇಲಾಖೆಗಳನ್ನು ರಚಿಸುವ ಮೂಲಕ ಜವಾಬ್ದಾರಿಯನ್ನು ನಿಯೋಜಿಸಲಾಗುತ್ತಿದೆ.


ಇದನ್ನೂ ಓದಿ-Afghanistan Crisis: ಅಫ್ಘಾನಿಸ್ತಾನದಲ್ಲಿ ಇನ್ನುಂದೆ ಹಾಡುವಂತಿಲ್ಲ, ಕುಣಿಯುವಂತಿಲ್ಲ..!


ಪ್ರಧಾನಿ ಮೋದಿ, ಅಧ್ಯಕ್ಷ ಪುಟಿನ್ ಮಾತುಕತೆ
ಇದಕ್ಕೂ ಒಂದು ದಿನ ಮುನ್ನ ಭಾರತದ (India) ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi)ಅವರು ರಷ್ಯಾದ ಅಧ್ಯಕ ವ್ಲಾಡಿಮೀರ್ ಪುಟಿನ್ (Vladimir Putin) ಜೊತೆಗೆ ಸುಮಾರು 45 ನಿಮಿಶಗಳ ಸಂಭಾಷಣೆ ನಡೆಸಿ, ಆಫ್ಘಾನಿಸ್ಥನದಲ್ಲಿನ ಪರಿಸ್ಥಿತಿಯ ಕುರಿತು ಚರ್ಚೆ ನಡೆಸಿದ್ದರು .


ಇದನ್ನೂ ಓದಿ-Taliban Warns US: ಅಫ್ಘಾನಿಸ್ತಾನ್ ಜನರನ್ನು ರಕ್ಷಿಸಬೇಡಿ, ದೇಶ ತೊರೆಯಿರಿ, ವಿಶ್ವದ ದೊಡ್ಡಣ್ಣನಿಗೆ ತಾಲಿಬಾನ್ ಅಲ್ಟಿಮೆಟಮ್


ಆಫ್ಥಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆಗೆ ಮಾನ್ಯತೆ ನೀಡುವುದರ ಕುರಿತು ಭಾರತ ಕಾಡು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಕಟ್ಟರ್ ಪಂತಿ ಸಂಘಟನೆ  ಹೇಗೆ ವರ್ತಿಸುತ್ತದೆ ಮತ್ತು ಇತರ ಪ್ರಜಾಪ್ರಭುತ್ವ ರಾಷ್ಟ್ರಗಳು ಅದರ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತವೆ ಎಂಬುದನ್ನು ನೋಡುವುದಾಗಿ ಭಾರತ ಹೇಳಿದೆ. . ಸೋಮವಾರ, ಪ್ರಧಾನಿ ಮೋದಿ ಅವರು ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ (Angela Merkel) ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಅಫ್ಘಾನಿಸ್ತಾನ ಸೇರಿದಂತೆ ದ್ವಿಪಕ್ಷೀಯ, ಬಹುಪಕ್ಷೀಯ ಮತ್ತು ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. 


ಇದನ್ನೂ ಓದಿ-Taliban: ಪಂಜಶೀರ್ ಅನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದ ತಾಲಿಬಾನ್‌ಗೆ ದೊಡ್ಡ ಹಿನ್ನಡೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.