Afghanistan Crisis:ರಷ್ಯಾ ಅಧ್ಯಕ್ಷ Vladimir Putin ಜೊತೆಗೆ PM Modi ಚರ್ಚೆ, 45 ನಿಮಿಷಗಳ ಮಾತುಕತೆ

Afghanistan Crisis- ಅಫ್ಘಾನಿಸ್ತಾನ ಇದೀಗ ತಾಲಿಬಾನ್ (Taliban) ನಿಯಂತ್ರಣದಲ್ಲಿದೆ. ಅಫಘಾನ್ ಬಿಕ್ಕಟ್ಟು (Afghanistan Crisis) ಇಡೀ ಪ್ರಪಂಚದ ಮೇಲೆ ಪ್ರಭಾವ ಬೀರಿದೆ. ಎಲ್ಲಾ ದೇಶಗಳು ತಮ್ಮ ನಾಗರಿಕರನ್ನು ಅಲ್ಲಿಂದ ಸುರಕ್ಷಿತವಾಗಿ ಹಿಂದಕ್ಕೆ ಕರೆಯಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿವೆ. ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ (PM Narendra Modi), ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin)ಅವರೊಂದಿಗೆ ಸುಮಾರು 45 ನಿಮಿಷಗಳ ಕಾಲ ದೂರವಾಣಿಯಲ್ಲಿ ಮಾತನಾಡಿದ್ದಾರೆ. 

Written by - Nitin Tabib | Last Updated : Aug 24, 2021, 04:44 PM IST
  • ಅಫ್ಘಾನಿಸ್ತಾನ್ ಬಿಕ್ಕಟ್ಟಿನ ಕುರಿತು ಪ್ರಧಾನಿ ಮೋದಿ- ಪುಟಿನ್ ಮಾತುಕತೆ.
  • ಆಫ್ಘಾನಿಸ್ತಾನದ ಬಿಕ್ಕಟ್ಟಿನ ಕುರಿತು 45 ನಿಮಿಷಗಳ ಸುದೀರ್ಘ ಮಾತುಕತೆ.
  • ಕೊರೊನಾ ಕಾಲದಲ್ಲಿನ ಸಹಕಾರದ ಕುರಿತು ಕೂಡ ಚರ್ಚೆ ನಡೆಸಲಾಗಿದೆ.
Afghanistan Crisis:ರಷ್ಯಾ ಅಧ್ಯಕ್ಷ Vladimir Putin ಜೊತೆಗೆ PM Modi ಚರ್ಚೆ, 45 ನಿಮಿಷಗಳ ಮಾತುಕತೆ title=
Afghanistan Crisis (File Photo)

Afghanistan Crisis - ಅಫ್ಘಾನಿಸ್ತಾನ ಇದೀಗ ತಾಲಿಬಾನ್ (Taliban) ನಿಯಂತ್ರಣದಲ್ಲಿದೆ. ಅಫಘಾನ್ ಬಿಕ್ಕಟ್ಟು (Afghanistan Crisis) ಇಡೀ ಪ್ರಪಂಚದ ಮೇಲೆ ಪ್ರಭಾವ ಬೀರಿದೆ. ಎಲ್ಲಾ ದೇಶಗಳು ತಮ್ಮ ನಾಗರಿಕರನ್ನು ಅಲ್ಲಿಂದ ಸುರಕ್ಷಿತವಾಗಿ ಹಿಂದಕ್ಕೆ ಕರೆಯಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿವೆ. ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ (PM Narendra Modi), ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin)ಅವರೊಂದಿಗೆ ಸುಮಾರು 45 ನಿಮಿಷಗಳ ಕಾಲ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಇಬ್ಬರು ರಾಷ್ಟ್ರ ನಾಯಕರು ವಿಸ್ತೃತ ಚರ್ಚೆ ನಡೆಸಿದ್ದಾರೆ. <

ಚರ್ಚೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಈ  ಬಗ್ಗೆ ಮಾಹಿತಿ ನೀಡಿದ್ದಾರೆ. "ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ನನ್ನ ಸ್ನೇಹಿತ ಅಧ್ಯಕ್ಷ ಪುಟಿನ್ ಜೊತೆ ವಿವರವಾದ ಮತ್ತು ಉಪಯುಕ್ತವಾದ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇನೆ. ಕೋವಿಡ್ -19 ವಿರುದ್ಧ ಭಾರತ-ರಷ್ಯಾ ಸಹಕಾರ (India- Russia Cooperation) ಸೇರಿದಂತೆ ದ್ವಿಪಕ್ಷೀಯ ಕಾರ್ಯಸೂಚಿಯಲ್ಲಿನ ಸಮಸ್ಯೆಗಳ ಬಗ್ಗೆಯೂ ನಾವು ಚರ್ಚಿಸಿದ್ದೇವೆ. ಪ್ರಮುಖ ವಿಷಯಗಳ ಕುರಿತು ನಿಕಟ ಸಮಾಲೋಚನೆಗಳನ್ನು ಮುಂದುವರಿಸಲು ನಾವು ಒಪ್ಪಿಕೊಂಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಸ್ತುತ ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್ (Taliban) ಸರ್ಕಾರಕ್ಕೆ ಮಾನ್ಯತೆ ನೀಡಬೇಕೆ ಅಥವಾ ಬೇಡವೇ ಎಂಬ ಪ್ರಶ್ನೆ ಇಡೀ ವಿಶ್ವವೇ ಎದುರಿಸುತ್ತಿದೆ. ಹಲವು ದೇಶಗಳು ಇದನ್ನು ಬಹಿರಂಗವಾಗಿ ವಿರೋಧಿಸಿವೆ. ಇನ್ನೊಂದೆಡೆ ಇತರ ಕೆಲ ದೇಶಗಳು ಇದಕ್ಕೆ ಬೆಂಬಲವನ್ನು ಘೋಷಿಸಿವೆ. ತಾಲಿಬಾನಿಗಳು ಚೀನಾ ಹಾಗೂ ಪಾಕಿಸ್ತಾನದ ಹಿರಿಯ ಮಂತ್ರಿಗಳ ಜೊತೆಗೆ ವಿವಿಧ ಸಭೆಗಳನ್ನು ಕೂಡ ನಡೆಸಿದ್ದಾರೆ ಎಂಬ ಚರ್ಚೆಗಳೂ ಕೂಡ ಕೇಳಿಬಂದಿವೆ.

ಇದನ್ನೂ ಓದಿ-Taliban: ಜೀನ್ಸ್ ಧರಿಸಿದರೆ ಥಳಿತ, ನೇಲ್ ಪಾಲಿಶ್ ಹಾಕಿದರೆ ಸಿಗಲಿದೆ ಭಯಾನಕ ಶಿಕ್ಷೆ

ಇತ್ತೀಚೆಗಷ್ಟೇ ಅಫ್ಘಾನಿಸ್ತಾನದಲ್ಲಿನ ರಷ್ಯಾದ ರಾಯಭಾರಿ ಡಿಮಿಟ್ರಿ ಜಿರ್ನೋವ್, ತಾಲಿಬಾನ್ ನಡವಳಿಕೆಯನ್ನು ಶ್ಲಾಘಿಸಿದ್ದರು. ಅವರ ದೃಷ್ಟಿಕೋನದಲ್ಲಿ  "ಒಳ್ಳೆಯ, ಸಕಾರಾತ್ಮಕ ಮತ್ತು ವ್ಯವಹಾರವಾಗಿದೆ" ಎಂದು ವಿವರಿಸಲಾಗಿದೆ. ಮೂಲಭೂತವಾದಿ ಇಸ್ಲಾಮಿಸ್ಟ್ ಗುಂಪು ಮೊದಲ 24 ಗಂಟೆಗಳಲ್ಲಿ ಕಾಬೂಲ್ ಅನ್ನು ಹಿಂದಿನ ಅಧಿಕಾರಿಗಳಿಗಿಂತ ಸುರಕ್ಷಿತವಾಗಿಸಿದೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ-Taliban: ಪಂಜಶೀರ್ ಅನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದ ತಾಲಿಬಾನ್‌ಗೆ ದೊಡ್ಡ ಹಿನ್ನಡೆ

ಮಾಸ್ಕೋ ನಲ್ಲಿರುವ ಒಂದು ಮೊಸ್ಕಿವ್ ರೇಡಿಯೋ ಸ್ಟೇಷನ್ ನಿಂದ ಮಾತನಾಡಿದ್ದ ಜಿರ್ನೋವ್," ಸ್ಥಿತಿ ಶಾಂತಿಪೂರ್ಣ ಹಾಗೂ ಉತ್ತಮವಾಗಿದೆ ಹಾಗೂ ನಗರದಲ್ಲಿ ಎಲ್ಲೆಡೆ ಶಾಂತಿ ಇದೆ. ತಾಲಿಬಾನ್ ಅಡಿ ಇದೀಗ ಕಾಬೂಲ್ ನಲ್ಲಿನ ಸ್ಥಿತಿ ಇದೀಗ ಅಶ್ರಫ್ ಘನಿಗಿಂತ ಉತ್ತಮವಾಗಿದೆ" ಎಂದಿದ್ದರು. ಇನ್ನೊಂದೆಡೆ ಕಾಬೂಲ್ ನಿಂದ ಘನಿ ಪಲಾಯನಗೈದಿರುವ ಸಂಗತಿ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರ ವಿಶೇಷ ಪ್ರತಿನಿಧಿ ಜಮೀರ್ ಕಾಬುಲೋವ್ ಹೇಳಿದ್ದರು.

ಇದನ್ನೂ ಓದಿ-Why Enactment Of CAA Necessary: ಅಫ್ಘಾನಿಸ್ಥಾನದಲ್ಲಿ ಹಿಂದೂ-ಸಿಖ್ಖರ ಪಲಾಯನ ಕುರಿತು ಮೋದಿ ಸರ್ಕಾರ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News