ನವದೆಹಲಿ: ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಪಕ್ಷ  ತೊರೆದ ಸಂಗತಿ ನಿಮ್ಮೆಲ್ಲರಿಗೂ ತಿಳಿದೇ ಇದೆ. ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇದೆ. ಮಹಾರಾಜ ಹರಿಸಿಂಗ್ ಪುತ್ರ ಹಾಗೂ ಮಾಜಿ ಕೇಂದ್ರ ಸಚಿವ ಕರಣ್ ಸಿಂಗ್ ಕೂಡ ಕಾಂಗ್ರೆಸ್ ತೊರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ. 1967ರಲ್ಲಿ ಕಾಂಗ್ರೆಸ್ ಸೇರಿದ್ದೆ, ಆದರೆ ಇಂದು ಪಕ್ಷದ ಜತೆಗಿನ ಸಂಬಂಧ ನಗಣ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಕರಣ್ ಸಿಂಗ್, 'ನಾನು 1967ರಲ್ಲಿ ಕಾಂಗ್ರೆಸ್ ಸೇರಿದ್ದೆ. ಆದರೆ ಕಳೆದ 8 ರಿಂದ 10 ವರ್ಷಗಳಿಂದ ನಾನು ಸಂಸದ ಸದಸ್ಯನಾಗಿಲ್ಲ. ನನ್ನನ್ನು ಕಾರ್ಯಕಾರಿಣಿ ಸಮಿತಿಯಿಂದಲೂ ಹೊರಗಿಡಲಾಗಿದೆ. ಹೌದು, ನಾನು ಕಾಂಗ್ರೆಸ್‌ನಲ್ಲಿದ್ದೇನೆ, ಆದರೆ ನನಗೆ ಯಾವುದೇ ಸಂಪರ್ಕವಿಲ್ಲ. ಯಾರೂ ನನ್ನೊಂದಿಗೆ ಯಾವುದರ ಬಗ್ಗೆಯೂ ಚರ್ಚಿಸುವುದಿಲ್ಲ. ನಾನು ನನ್ನ ಕೆಲಸವನ್ನು ಮಾಡುತ್ತೇನೆ ಪಕ್ಷದೊಂದಿಗೆ ನನ್ನ ಸಂಬಂಧ ನಗಣ್ಯ' ಎಂದು ಹೇಳಿದ್ದಾರೆ.


Video : ಟೋಲ್ ಗೇಟ್ ನಲ್ಲಿ ಮಹಿಳೆಯರಿಬ್ಬರ ಹೊಡೆದಾಟ .! ನೋಡುತ್ತಾ ನಿಂತ ಪುರುಷರು


COMMERCIAL BREAK
SCROLL TO CONTINUE READING

ಕರಣ್ ಸಿಂಗ್ ನೀಡಿರುವ ಈ ಹೇಳಿಕೆಯು ಅವರು ಕಾಂಗ್ರೆಸ್ ತೊರೆಯುವ ಸೂಚನೆ ಎಂಬಂತೆ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ ರಾಜಪ್ರಭುತ್ವದ ಕೊನೆಯ ಮಹಾರಾಜ ಹರಿ ಸಿಂಗ್ ಅವರ ಪುತ್ರ ಕರಣ್ ಸಿಂಗ್ ಅವರು 1967 ರಿಂದ 1973 ರವರೆಗೆ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ, ಕಳೆದ ಹಲವು ವರ್ಷಗಳಿಂದ ಅವರನ್ನು ನಿರ್ಲಕ್ಷಿಸಲಾಗಿದೆ. ಗುಲಾಂ ನಬಿ ಆಜಾದ್ ಅವರಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರಣ್ ಸಿಂಗ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಇತ್ತೀಚೆಗೆ ಅವರು ಪುಸ್ತಕವೊಂದನ್ನು  ಬರೆದಿದ್ದಾರೆ, ಅವರ ಪುಸ್ತಕವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಬಿಡುಗಡೆ ಮಾಡಿದ್ದರು ಮತ್ತು ಈ ಸಂದರ್ಭದಲ್ಲಿ ಕರಣ್ ಸಿಂಗ್ ಅವರನ್ನು ಶ್ಲಾಘಿಸಿದ್ದರು. ಕರಣ್ ಸಿಂಗ್ ತಮ್ಮ ಮುಂದಿನ ಯೋಜನೆ ಬಗ್ಗೆ ಏನನ್ನೂ ಹೇಳದೇ ಇದ್ದರೂ ಕೂಡ ಅವರು ಶೀಘ್ರದಲ್ಲಿಯೇ ಪಕ್ಷ ತೊರೆಯುವ ಬಗ್ಗೆ ಊಹಾಪೋಹಗಳು ಸೃಷ್ಟಿಯಾಗಿರುವುದಂದು ನಿಜ.


ಇದನ್ನೂ ಓದಿ-ʼಭಾರತ್‌ ಜೋಡೊ ಯಾತ್ರೆʼಗೆ ದೇಣಿಗೆ ನೀಡದ ತರಕಾರಿ ವ್ಯಾಪಾರಿ ಮೇಲೆ ಹಲ್ಲೆ..!


ಕಾಂಗ್ರೆಸ್ ತೊರೆದ ನಂತರ ಗುಲಾಂ ನಬಿ ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮದೇ ಆದ ಪಕ್ಷವನ್ನು ರಚಿಸುವುದಾಗಿ ಘೋಷಣೆ ಮಾಡಿದ್ದು ಇಲ್ಲಿ ಗಮನಾರ್ಹ. ಅವರು ನಿರಂತರವಾಗಿ ಜಾಥಾಗಳನ್ನು ನಡೆಸುತ್ತಿದ್ದಾರೆ ಮತ್ತು ನೇರವಾಗಿ ರಾಹುಲ್ ಗಾಂಧಿಯವರ ಮೇಲೂ ವಾಗ್ದಾಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್‌ಗೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಗುಲಾಂ ನಬಿ ಆಜಾದ್ ಅವರು ರಾಹುಲ್ ಗಾಂಧಿ ರಾಜಕೀಯಕ್ಕೆ ಬಂದ ನಂತರ ಕಾಂಗ್ರೆಸ್‌ನ ಹಲವು ದಶಕಗಳ ಹಳೆಯ ವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದ್ದರು. ಈ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಅವರು ಬಿಜೆಪಿ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿತ್ತು. ಅಷ್ಟೇ ಅಲ್ಲ ಆರ್ಟಿಕಲ್ 370  ಜಮ್ಮು ಮತ್ತು ಕಾಶ್ಮೀರಕ್ಕೆ ಮರಳಿ ಸಿಗಲು ಸಾಧ್ಯವಿಲ್ಲ ಎಂದೂ ಕೂಡ ಗುಲಾಂ ನಬಿ ಆಜಾದ್ ಕೂಡ ಈ ಹಿಂದೆ ಹೇಳಿದ್ದರು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.