ನವದೆಹಲಿ : ಬ್ಲಾಕ್ ಫಂಗಸ್ ಗೆ ಸಂಭಂದಪಟ್ಟ ಹಾಗೆ ದೇಶದ ಜನತೆಗೆ ಉಚಿತ ಔಷಧ ನೀಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿ ಪತ್ರ ಬರೆದಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಇಂದು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ಸೋನಿಯಾ ಗಾಂಧಿ(Sonia Gandhi), ಪ್ರಸ್ತುತ ದೇಶದಲ್ಲಿ ಕಂಡು ಬಂದಿರುವ ಬ್ಲಾಕ್ ಫಂಗಸ್ ತುಂಬಾ ಆತಂಕಕಾರಿಯಾಗಿದ್ದು, ಇದನ್ನು 'ಸಾಂಕ್ರಾಮಿಕ ರೋಗ'  ಎಂದು ಘೋಷಿಸಿ, ಅಗತ್ಯವಿರುವವರಿಗೆ ಉಚಿತ ಔಷಧಿ ನೀಡಿ. ಮತ್ತೆ ಕೊರೋನಾದಿಂದ ತಂದೆ ತಾಯಿಯನ್ನ ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.


ಇದನ್ನೂ ಓದಿ : 7th Pay Commission :ಕೇಂದ್ರ ನೌಕರರೇ ಗಮನಿಸಿ‌ : ಏ.1ರಿಂದ ಹೆಚ್ಚಳವಾಗಿದೆ ನಿಮ್ಮ 'DA'


ಬ್ಲಾಕ್ ಫಂಗಸ್ ಚಿಕಿತ್ಸೆಗೆ ನೀಡುವ ಆಂಫೋಟೆರಿಸಿನ್-ಬಿ(Amphotericin-B) ಔಷಧಿಯ ಕೊರತೆಹೆಚ್ಚಾಗಿ ಕೇಳಿ ಬರುತ್ತಿದೆ. ಈ ಔಷಧಿಯನ್ನು ಉಚಿತವಾಗಿ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.


Amazon : ಭಾರತದಲ್ಲಿ ಸ್ಥಗಿತಗೊಂಡಿದೆ 'Prime Now' ಸೇವೆ; ಗ್ರಾಹಕರ ಮುಂದಿರುವ ಆಯ್ಕೆ ತಿಳಿಯಿರಿ


ಇನ್ನೊಂದೆಡೆ ದೇಶದಲ್ಲಿ ಬ್ಲಾಕ್ ಫಂಗಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕೊರೋನಾ(Corona)ದಿಂದ ಬಳಲುತ್ತಿರುವ ಹಾಗೂ ಚೇತರಿಸಿಕೊಂಡವರಲ್ಲಿ ಕೂಡ ಬ್ಲಾಕ್ ಫಂಗಸ್ ಕಂಡು ಬರುತ್ತಿದೆ. ಈಗಾಗಲೇ ಈ ರೋಗಕ್ಕೆ ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಕೆಲ ರಾಜ್ಯ ಸರ್ಕಾರಗಳು ಹೇಳಿವೆ.


ಇದನ್ನೂ ಓದಿ : ಕರೋನಾ ಕಾಲದಲ್ಲೊಂದು ಅಪರೂಪದ ಮದುವೆ ; ವಿಮಾನದಲ್ಲೇ ನೆರವೇರಿತು ವಿವಾಹ


ಸೋನಿಯಾ ಗಾಂಧಿ ಅವರು ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರವನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ(Rahul Gandhi) ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.