7th Pay Commission :ಕೇಂದ್ರ ನೌಕರರೇ ಗಮನಿಸಿ‌ : ಏ.1ರಿಂದ ಹೆಚ್ಚಳವಾಗಿದೆ ನಿಮ್ಮ 'DA'

ತಿಂಗಳಿಗೆ 105 ರಿಂದ 210 ರೂ.ರವರೆಗೆ ತುಟ್ಟಿತ್ವ ಹೆಚ್ಚಳವಾಗಿದೆ. ವೇರಿಯಬಲ್ ತುಟ್ಟಿಭತ್ಯೆ ಅಥವಾ ವಿಡಿಎ ಪರಿಷ್ಕೃತ ದರವು 1.5 ಕೋಟಿ ಕೇಂದ್ರ ನೌಕರರಿಗೆ ಪ್ರಯೋಜನ

Last Updated : May 24, 2021, 03:11 PM IST
  • ಕೊರೋನಾ 2ನೇ ಅಲೆಯ ನಡುವೆ ಕೇಂದ್ರ ಸರ್ಕಾರಿ ನೌಕರರಿಗೆ ಸ್ವಲ್ಪ ಪರಿಹಾರ
  • ಕೇಂದ್ರವು ಇತ್ತೀಚೆಗೆ ವೇರಿಯಬಲ್ ತುಟ್ಟಿಭತ್ಯೆ (VDA) ದರವನ್ನು ಹೆಚ್ಚಿಸಿದೆ
  • ತಿಂಗಳಿಗೆ 105 ರಿಂದ 210 ರೂ.ರವರೆಗೆ ತುಟ್ಟಿತ್ವ ಹೆಚ್ಚಳ
7th Pay Commission :ಕೇಂದ್ರ ನೌಕರರೇ ಗಮನಿಸಿ‌ : ಏ.1ರಿಂದ ಹೆಚ್ಚಳವಾಗಿದೆ ನಿಮ್ಮ 'DA' title=

ನವದೆಹಲಿ :  ಕೊರೋನಾ 2ನೇ ಅಲೆಯ ನಡುವೆ ಕೇಂದ್ರ ಸರ್ಕಾರಿ ನೌಕರರಿಗೆ ಸ್ವಲ್ಪ ಪರಿಹಾರ ನೀಡುವ ಪ್ರಯತ್ನದಲ್ಲಿ, ಕೇಂದ್ರವು ಇತ್ತೀಚೆಗೆ ವೇರಿಯಬಲ್ ತುಟ್ಟಿಭತ್ಯೆ (VDA) ದರವನ್ನು ಹೆಚ್ಚಿಸಿದೆ.  ತಿಂಗಳಿಗೆ 105 ರಿಂದ 210 ರೂ.ರವರೆಗೆ ತುಟ್ಟಿತ್ವ ಹೆಚ್ಚಳವಾಗಿದೆ. ವೇರಿಯಬಲ್ ತುಟ್ಟಿಭತ್ಯೆ ಅಥವಾ ವಿಡಿಎ ಪರಿಷ್ಕೃತ ದರವು 1.5 ಕೋಟಿ ಕೇಂದ್ರ ನೌಕರರಿಗೆ ಪ್ರಯೋಜನವಾಗಲಿದೆ. ಏಪ್ರಿಲ್ 1, 2021ರಿಂದ ಜಾರಿಗೆ ಬರುವಂತೆ ಡಿಎ ದರವನ್ನ ಸೂಚಿಸಿದೆ ಮತ್ತು ಹೆಚ್ಚಿಸಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.

ಇದು ಕೇಂದ್ರ ವಲಯದಲ್ಲಿ ನಿಗದಿತ ಉದ್ಯೋಗಕ್ಕಾಗಿ ಮತ್ತು ಕೇಂದ್ರ ಸರ್ಕಾರ(Central Govt), ರೈಲ್ವೆ ಆಡಳಿತ, ಗಣಿಗಳು, ತೈಲ ಕ್ಷೇತ್ರಗಳು, ಪ್ರಮುಖ ಬಂದರುಗಳು ಅಥವಾ ಕೇಂದ್ರ ಸರ್ಕಾರ ಸ್ಥಾಪಿಸಿದ ಯಾವುದೇ ನಿಗಮದ ಅಧಿಕಾರದ ಅಡಿಯಲ್ಲಿನ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಈ ದರಗಳು ಗುತ್ತಿಗೆ ಮತ್ತು ಸಾಂದರ್ಭಿಕ ಉದ್ಯೋಗಿಗಳು/ಕಾರ್ಮಿಕರಿಗೆ ಸಮಾನವಾಗಿ ಅನ್ವಯವಾಗಿವೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ : Amazon : ಭಾರತದಲ್ಲಿ ಸ್ಥಗಿತಗೊಂಡಿದೆ 'Prime Now' ಸೇವೆ; ಗ್ರಾಹಕರ ಮುಂದಿರುವ ಆಯ್ಕೆ ತಿಳಿಯಿರಿ

ಕೊರೋನಾ ಎರಡನೇ ಅಲೆಯ ಈ ಸಮಯದಲ್ಲಿ ಕೇಂದ್ರ ಸರ್ಕಾರಿ ನೌಕರರಿ(Central Govt Employees)ಗೆ ಇದು ಸ್ವಾಗತಾರ್ಹ ಸುದ್ದಿಯಾಗಿದೆ. ಇದು ಭವಿಷ್ಯ ನಿಧಿ, ಗ್ರಾಚ್ಯುಯಿಟಿ ಮತ್ತು ಡಿಎಯೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವ ಇತರ ಪ್ರಯೋಜನಗಳ ಹೆಚ್ಚಳಕ್ಕೂ ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಕರೋನಾ ಕಾಲದಲ್ಲೊಂದು ಅಪರೂಪದ ಮದುವೆ ; ವಿಮಾನದಲ್ಲೇ ನೆರವೇರಿತು ವಿವಾಹ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News