ನವದೆಹಲಿ: 9 ಸಿಆರ್ಪಿಎಫ್ ಯೋಧರನ್ನು ಬಳಿ ತೆಗೆದುಕೊಂಡ ಛತ್ತೀಸ್‏'ಗಢದ ಸುಕ್ಮ ಜಿಲ್ಲೆಯಲ್ಲಿ ನಡೆದ ನಕ್ಸಲ್ ದಾಳಿಯನ್ನು ಒಂದು 'ದುರಂತ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವ್ಯಾಖ್ಯಾನಿಸಿದ್ದು,  ಇದಕ್ಕೆ ಸರ್ಕಾರದ 'ದೊಷಪೂರಿತ ನೀತಿ’ಯೇ ಕಾರಣ ಎಂದಿದ್ದಾರೆ.


COMMERCIAL BREAK
SCROLL TO CONTINUE READING

"ಛತ್ತೀಸ್'‏ಗಢದಲ್ಲಿ ಮಾವೋವಾದಿಗಳು ನಡೆಸಿದ ದಾಳಿಗೆ ಸಿಆರ್ಪಿಎಫ್ 212 ಬೆಟಾಲಿಯನ್ನಿನ ಒಂಭತ್ತು ಯೋಧರು ಸಾವನ್ನಪ್ಪಿದ್ದು,ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಇದೊಂದು ದುರಂತ. ಇದು ಛತ್ತೀಸ್'‏ಗಢದಲ್ಲಿ ಆಂತರಿಕ ಭದ್ರತಾ ಪರಿಸ್ಥಿತಿ ಕ್ಷೀಣಿಸಿರುವುದಕ್ಕೆ ಉತ್ತಮ ನಿದರ್ಶನ" ಎಂದು ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.


"ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನಾನು ಸಂತಾಪ ಸಲ್ಲಿಸುತ್ತೇನೆ. ಹಾಗೆಯೇ, ದಾಳಿಯಲ್ಲಿ ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಬಯಸುತ್ತೇನೆ" ಎಂದು ರಾಹುಲ್ ಹೇಳಿದ್ದಾರೆ. 



ಛತ್ತೀಸ್‌'ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರ ತಂಡವೊಂದು ಏಕಾಏಕಿ ದಾಳಿ ನಡೆಸಿದ ಪರಿಣಾಮ ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ 9 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದು, ಕನಿಷ್ಠ 25 ಮಂದಿ ಸಿಆರ್ಪಿಎಫ್ ಯೋಧರು ಗಾಯಗೊಂಡಿದ್ದರು. ಈ ಪೈಕಿ ನಾಲ್ವರ ಪರಿಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 


ಸುಕ್ಮಾದ ಕಿಸ್ಟ್ರಂ ಪ್ರದೇಶದಲ್ಲಿ ರಕ್ಷಾ ವಾಹನದಲ್ಲಿ ಯೋಧರು ತೆರಳುತ್ತಿದ್ದಾಗ ನಕ್ಸಲರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ವಿಶೇಷ ತರಬೇತಿ ಪಡೆದಿರುವ ನಕ್ಸಲರಿಂದ ಈ ದಾಳಿ ನಡೆದಿದೆ ಎನ್ನಲಾಗಿದೆ. ಸ್ಥಳದಲ್ಲಿ ಕೂಂಬಿಂಗ್‌ ಕಾರ್ಯಾಚರಣೆ ಮುಂದುವರಿದಿದೆ.