ನವದೆಹಲಿ: ಟಾಟಾ ಸನ್ಸ್ 68 ವರ್ಷಗಳ ನಂತರ ಸಾಲದ ಭಾರ ಹೊಂದಿರುವ ಏರ್ ಇಂಡಿಯಾದ ನಿಯಂತ್ರಣವನ್ನು ಮರಳಿ ಪಡೆದುಕೊಂಡಿದೆ.


COMMERCIAL BREAK
SCROLL TO CONTINUE READING

ಶೇ 100 ರಷ್ಟು ಶೇರುಗಳನ್ನು ಪಡೆಯಲು ಅದು ಹರಾಜಿನಲ್ಲಿ 18,000 ಕೋಟಿ ರೂಪಾಯಿಗಳ ಬಿಡ್ ಮಾಡಿದೆ.ಟಾಟಾಸ್‌ನ 18,000 ಕೋಟಿ ಬಿಡ್‌ನಲ್ಲಿ 15,300 ಕೋಟಿ ಸಾಲವನ್ನು ತೆಗೆದುಕೊಳ್ಳುವುದು ಮತ್ತು ಉಳಿದ ಹಣವನ್ನು ನಗದು ರೂಪದಲ್ಲಿ ಪಾವತಿಸುವುದು ಒಳಗೊಂಡಿರುತ್ತದೆ ಎನ್ನಲಾಗಿದೆ.


ಜೆಹಾಂಗೀರ್ ರತಂಜಿ ದಾದಾಭೋಯ್ (ಜೆಆರ್‌ಡಿ) ಟಾಟಾ 1932 ರಲ್ಲಿ ಏರ್‌ಲೈನ್ ಅನ್ನು ಸ್ಥಾಪಿಸಿದರು. ಇದನ್ನು ಟಾಟಾ (TATA) ಏರ್‌ಲೈನ್ಸ್ ಎಂದು ಕರೆಯಲಾಯಿತು. ಆ ಸಮಯದಲ್ಲಿ ಅದು ದೇಶೀಯ ವಿಮಾನಗಳನ್ನು ಮಾತ್ರ ನಿರ್ವಹಿಸುತ್ತಿತ್ತು.1946 ರಲ್ಲಿ, ಟಾಟಾ ಸನ್ಸ್ ನ ವಾಯುಯಾನ ವಿಭಾಗವನ್ನು ಏರ್ ಇಂಡಿಯಾ ಎಂದು ಪಟ್ಟಿ ಮಾಡಲಾಯಿತು. ಅದೇ ವರ್ಷದಲ್ಲಿ, ಏರ್ಲೈನ್ ​​ತನ್ನ ವ್ಯಾಪಕವಾಗಿ ಗುರುತಿಸಲ್ಪಟ್ಟ `ಮಹಾರಾಜ  ಮ್ಯಾಸ್ಕಾಟ್ ಅನ್ನು ಅಳವಡಿಸಿಕೊಂಡಿತು. 1948 ರಲ್ಲಿ, ಏರ್ ಇಂಡಿಯಾ ಇಂಟರ್ನ್ಯಾಷನಲ್ ಅನ್ನು ಯುರೋಪಿಗೆ ವಿಮಾನಗಳೊಂದಿಗೆ ಆರಂಭಿಸಲಾಯಿತು.


ಇದನ್ನೂ ಓದಿ: Air India: 18,000 ಕೋಟಿ ರೂ.ಗೆ ಏರ್ ಇಂಡಿಯಾ ಹರಾಜು ಗೆದ್ದ ಟಾಟಾ ಸನ್ಸ್


ಅಂತಾರಾಷ್ಟ್ರೀಯ ಸೇವೆಯು ಭಾರತದ ಮೊದಲ ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳಲ್ಲಿ ಒಂದಾಗಿದೆ,  ಆಗ ಸರ್ಕಾರವು ಶೇ 49 ರಷ್ಟು ಹೊಂದಿದ್ದರೆ, ಟಾಟಾ ಶೇ  25 ರಷ್ಟು ಶೇರ್ ನ್ನು ಒಳಗೊಂಡಿತ್ತು ಮತ್ತು ಉಳಿದವುಗಳನ್ನು ಸಾರ್ವಜನಿಕರಿಗೆ ಮೀಸಲಿರಿಸಾಗಿತ್ತು.1953 ರಲ್ಲಿ, ಏರ್ ಇಂಡಿಯಾವನ್ನು ರಾಷ್ಟ್ರೀಕೃತಗೊಳಿಸಲಾಯಿತು. ಇದೆ ವೇಳೆ ಏರ್ ಲೈನ್ಸ್  ದೇಶೀಯ ವಿಮಾನಯಾನ ಮತ್ತು ಅಂತರಾಷ್ಟ್ರೀಯ ವಾಹಕ ಎಂದು ವಿಭಿಜಿಸಲಾಯಿತು.ಜವಾಹರಲಾಲ್ ನೆಹರು ಏರ್ ಇಂಡಿಯಾವನ್ನು ರಾಷ್ಟ್ರೀಕರಣಗೊಳಿಸಿದಾಗ, ಜೆಆರ್‌ಡಿ ಅದರ ವಿರುದ್ಧ ತೀವ್ರವಾಗಿ ಪ್ರತಿಭಟಿಸಿದ್ದರು.


"ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡಕ್ಕೆ ಪೂರ್ಣಾವಧಿ ಕೋಚ್ ಆಗಬಾರದು"


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.