Tata Tigor EV Launch:ದೇಶೀಯ ಮಾರುಕಟ್ಟೆಗೆ Tata Tigor EV ಬಿಡುಗಡೆ ಮಾಡಿದ ಟಾಟಾ ಮೋಟರ್ಸ್, 60 ನಿಮಿಷದಲ್ಲಿ ಫುಲ್ ಚಾರ್ಜ್

Tata Tigor EV Launch: ದೇಶದ ಅತಿದೊಡ್ಡ ವಾಹನ ತಯಾರಕ ಟಾಟಾ ಮೋಟಾರ್ಸ್ (Tata Motors) ಇಂದು ತನ್ನ ಹೊಸ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಸೆಡಾನ್ (Electric Compact Sedan Car) ಕಾರು Tigor EV ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಎಲೆಕ್ಟ್ರಿಕ್ ಕಾರು ಕಂಪನಿಯ Ziptron ತಂತ್ರಜ್ಞಾನವನ್ನು ಆಧರಿಸಿದೆ. 

Written by - Nitin Tabib | Last Updated : Aug 18, 2021, 07:34 PM IST
  • ತನ್ನ ಹೊಸ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಸೆಡಾನ್ ಕಾರು Tigor EV ಅನ್ನು ದೇಶೀಯ ಮಾರುಕಟ್ಟೆ ಟಾಟಾ ಮೋಟರ್ಸ್.
  • ಕೇವಲ 60 ನಿಮಿಷಗಳಲ್ಲಿ ಈ ಕಾರು ಫುಲ್ ಚಾರ್ಜ್ ಆಗುತ್ತದೆ.
  • ಈ ಕಾರಿನ ಬೆಲೆ ಎಷ್ಟು ಮತ್ತು ಇದರ ವೈಶಿಷ್ಟ್ಯಗಳ ಕುರಿತು ತಿಳಿದುಕೊಳ್ಳೋಣ ಬನ್ನಿ
Tata Tigor EV Launch:ದೇಶೀಯ ಮಾರುಕಟ್ಟೆಗೆ Tata Tigor EV ಬಿಡುಗಡೆ ಮಾಡಿದ ಟಾಟಾ ಮೋಟರ್ಸ್, 60 ನಿಮಿಷದಲ್ಲಿ ಫುಲ್ ಚಾರ್ಜ್ title=
Tata Tigor EV Launch (File Photo)

Tata Tigor EV Launch: ದೇಶದ ಅತಿದೊಡ್ಡ ವಾಹನ ತಯಾರಕ ಟಾಟಾ ಮೋಟಾರ್ಸ್ (Tata Motors) ಇಂದು ತನ್ನ ಹೊಸ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಸೆಡಾನ್ (Electric Compact Sedan Car) ಕಾರು Tigor EV ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಎಲೆಕ್ಟ್ರಿಕ್ ಕಾರು ಕಂಪನಿಯ Ziptron ತಂತ್ರಜ್ಞಾನವನ್ನು ಆಧರಿಸಿದೆ. ಈ ಕಾರಿನ ಅಧಿಕೃತ ಬುಕಿಂಗ್ ಆರಂಭವಾಗಿದ್ದು, ಇದಕ್ಕಾಗಿ ಗ್ರಾಹಕರು ಬುಕ್ಕಿಂಗ್ ಮೊತ್ತವಾಗಿ 21,000 ರೂ. ಪಾವತಿಸಬೇಕು. ಇದನ್ನು ಅಧಿಕೃತ ವೆಬ್‌ಸೈಟ್ ಹಾಗೂ ಡೀಲರ್‌ಶಿಪ್‌ಗಳ ಮೂಲಕ ಬುಕ್ ಮಾಡಬಹುದು.

Nexon EV ನಂತರ ಕಂಪನಿಯು ಪರಿಚಯಿಸುತ್ತಿರುವ ಎರಡನೇ ಎಲೆಕ್ಟ್ರಿಕ್ ಕಾರು ಇದಾಗಿದೆ. ಇಲ್ಲಿಯವರೆಗೆ ಟಿಗೋರ್ ಎಲೆಕ್ಟ್ರಿಕ್ ಸರ್ಕಾರಿ ಕಚೇರಿಗಳು ಮತ್ತು ಫ್ಲೀಟ್ ಆಪರೇಟರ್‌ಗಳಿಗೆ ಮಾತ್ರ ಲಭ್ಯವಿತ್ತು, ಆದರೆ ಇದೀಗ ಈ ಕಾರನ್ನು ಖಾಸಗಿ ಗ್ರಾಹಕರಿಗೂ ಪರಿಚಯಿಸಲಾಗಿದೆ. ಪ್ರಸ್ತುತ, ಕಂಪನಿಯು ಈ ಕಾರನ್ನು ಮಾತ್ರ ಪ್ರದರ್ಶಿಸಿದೆ, ಇದನ್ನು ಆಗಸ್ಟ್ 31 ರಂದು ಮಾರಾಟಕ್ಕೆ ಬಿಡುಗಡೆ ಮಾಡಲಾಗುತ್ತಿದೆ. 

ಈ ಹೊಸ ಎಲೆಕ್ಟ್ರಿಕ್ ಕಾರು ಕಳೆದ ವರ್ಷವಷ್ಟೇ ಕಂಪನಿ ಪರಿಚಯಿಸಿದ ಟಿಗೋರ್‌ನ ಪೆಟ್ರೋಲ್ ಫೇಸ್ ಲಿಫ್ಟ್ ಮಾದರಿ ಆಧರಿಸಿದೆ. ವಿನ್ಯಾಸಕ್ಕೆ ಸಂಬಂಧಿಸಿದಂತೆ, ಈ ಕಾರು ಪೆಟ್ರೋಲ್ ಮಾದರಿಯನ್ನು ಹೋಲುತ್ತದೆ. ಇದು ಸಾಂಪ್ರದಾಯಿಕ ಗ್ರಿಲ್ ಬದಲಿಗೆ ಹೊಸ ಹೊಳಪುಳ್ಳ ಬ್ಲಾಕ್ ಪ್ಯಾನೆಲ್ ಹೊಂದಿದೆ. ಇದರಲ್ಲಿ ಸಂಪೂರ್ಣ ಸೆಟಪ್ ಅನ್ನು ಹೈಲೈಟ್ ಮಾಡುವ ಎಲೆಕ್ಟ್ರಿಕ್ ಬ್ಲೂ ಎಕ್ಸೆಂಟ್ ಶಾಮೀಲಾಗಿದೆ. ಟಿಗೊರ್ ಇವಿನಲ್ಲಿಯೂ ಕೂಡ  ಕೂಡ ಹೆಡ್‌ಲ್ಯಾಂಪ್‌ಗಳ ಒಳಗೆ  15 ಇಂಚಿನ ಆಯಿಲ್ ವ್ಹೀಲ್ಸ್ ಮೇಲೆಯೂ ಕೂಡ ಬ್ಲೂ ಹೈಲೈಟ್‌ಗಳನ್ನು ನೀಡಲಾಗಿದೆ.

ಈ ಕಾರಿನ ಕ್ಯಾಬಿನ್ ಕೂಡ ಈಗಿರುವ Tigor ನಂತೆಯೇ ಇದೆ, ನೀಲಿ ಉಚ್ಚಾರಣೆಯನ್ನು ಕಾರಿನ ಒಳಗೂ ಚೆನ್ನಾಗಿ ಬಳಸಲಾಗಿದೆ. ಇದು ಈ ಕಾರಿಗೆ ವಿದ್ಯುತ್ ಆಕರ್ಷಣೆಯನ್ನು ನೀಡುತ್ತದೆ. ವೈಶಿಷ್ಟ್ಯಗಳು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, 4 ಸ್ಪೀಕರ್‌ಗಳು ಮತ್ತು 4 ಟ್ವೀಟರ್‌ಗಳು, iRA ಸಂಪರ್ಕಿತ ಕಾರ್ ತಂತ್ರಜ್ಞಾನ, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನೊಂದಿಗೆ 7.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಇನ್ನೂ ಹಲವು ಸಂಗತಿಗಳನ್ನು ನೀಡಲಾಗಿದೆ. ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, Tigor EV ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಹೊಂದಿದೆ, ABS ಜೊತೆಗೆ EBD, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಸೀಟ್ ಬೆಲ್ಟ್ ರಿಮೈಂಡರ್ ನೀಡಲಾಗಿದೆ.

ಪಾವರ್ ಟ್ರೇನ್ ಚಾರ್ಜಿಂಗ್ 
ಹೊಸ Tigor EV ಗಾಗಿ ಅತಿದೊಡ್ಡ ಅಪ್‌ಡೇಟ್ ಪವರ್‌ಟ್ರೇನ್ ಭಾಗದಲ್ಲಿ ನೀವು  ಕಾಣಬಹುದು, ಇದು ಈಗ ಕಂಪನಿಯ Ziptron EV ಪವರ್‌ಟ್ರೇನ್‌ನೊಂದಿಗೆ ಸಜ್ಜುಗೊಂಡಿದೆ. ಈ ತಂತ್ರಜ್ಞಾನವನ್ನು ಮೊದಲು ಬಳಸಿದ್ದು Nexon ಎಲೆಕ್ಟ್ರಿಕ್ ಕಾರಿನಲ್ಲಿ. ಇದರ ಎಲೆಕ್ಟ್ರಿಕ್ ಮೋಟಾರ್ 75 ಎಚ್ ಪಿ ಪವರ್ ಮತ್ತು 170 ಎನ್ ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು ಕೇವಲ 5.7 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 60 ಕಿಲೋಮೀಟರ್ ವೇಗವನ್ನು ಪಡೆಯುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ-PM Kisan FPO Yojana: ರೈತರಿಗೆ ಸರ್ಕಾರ ನೀಡುತ್ತಿದೆ 15 ಲಕ್ಷ ರೂ. ಗಳ ನೆರವು , ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ

ಕಂಪನಿಯು ಈ ಕಾರಿನಲ್ಲಿ 26kWh ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಬಳಸಿದೆ. ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರಿನ IP67 ರೇಟಿಂಗ್ ಅನ್ನು ಸಹ ನೀಡಲಾಗಿದೆ. ಹೊಸ ಜಿಪ್ಟ್ರಾನ್ ತಂತ್ರಜ್ಞಾನದೊಂದಿಗೆ, ಟಿಗೋರ್ ಇವಿ ಇದೀಗ  ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಬರುತ್ತದೆ. ವೇಗದ ಚಾರ್ಜರ್‌ನೊಂದಿಗೆ, Tigor EV ಕೇವಲ 60 ನಿಮಿಷಗಳಲ್ಲಿ 0 ರಿಂದ 80 ಪ್ರತಿಶತದಷ್ಟು ಚಾರ್ಜ್ ಆಗಬಲ್ಲದು. ಟಾಟಾ ಮೋಟಾರ್ಸ್ ಈ ಕಾರಿನ ಬ್ಯಾಟರಿ ಮತ್ತು ಮೋಟಾರ್‌ನೊಂದಿಗೆ 8 ವರ್ಷ / 1,60,000 ಕಿಮೀ ವಾರಂಟಿ ನೀಡುತ್ತದೆ.

ಇದನ್ನೂ ಓದಿ-Bank Facility: ಖಾತೆಯಲ್ಲಿ Zero Balance ಇದ್ದರೂ ಕೂಡ ನೀವು ನಿಮ್ಮ ಸಂಬಳದ 3 ಪಟ್ಟು ಹಣ ಹಿಂಪಡೆಯಬಹುದು ಗೊತ್ತಾ?

ಬೆಲೆ ಎಷ್ಟು?
ಹೊಸ ಟಾಟಾ ಟಿಗೊರ್ ಎಲೆಕ್ಟ್ರಿಕ್ ಬೆಲೆಯ ಬಗ್ಗೆ ಕಂಪನಿಯು ಇದುವರೆಗೆ ಯಾವುದೇ ಘೋಷಣೆಯನ್ನು ಮಾಡಿಲ್ಲ. ಆದರೆ ಈ ಕಾರಿನ ಬೆಲೆ 13.99 ಲಕ್ಷದಿಂದ 16.85 ಲಕ್ಷದವರೆಗೆ ಇದ್ದರು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದು ರೂ .7.81 ಲಕ್ಷದ ಆರಂಭಿಕ ಬೆಲೆಯನ್ನು ಹೊಂದಿರುವ ಸ್ಟಾಂಡರ್ಡ್ ಪೆಟ್ರೋಲ್ ಆವೃತ್ತಿ ಟಿಗೋರ್ ಗಿಂತ ಸುಮಾರು 1.5 ಲಕ್ಷದಿಂದ 2 ಲಕ್ಷ ದಷ್ಟು ಜಾಸ್ತಿಯಾಗಿದೆ.

ಇದನ್ನೂ ಓದಿ-NPS: ಪ್ರತಿನಿತ್ಯ ₹50 ಹೂಡಿಕೆ ಮಾಡಿ ನಿವೃತ್ತಿಯ ನಂತರ ಪಡೆಯಿರಿ ₹34 ಲಕ್ಷ : ಇದು ಹೂಡಿಕೆ ಮಾಡಲು ಉತ್ತಮ ಮಾರ್ಗ! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News