'Alcohol Is Tonic' - ಮಧ್ಯಪ್ರದೇಶದ (Madhya Pradesh) ಮಂಡಲಾ ತಲುಪಿರುವ ಕೇಂದ್ರ ISPAT ರಾಜ್ಯ ಸಚಿವ ಫಗ್ಗನ್  ಸಿಂಗ್ ಕುಲಸ್ತೆ (Union ISPAT Minister For State Faggan Singh Kulaste) ಮದ್ಯದ ಕುರಿತು ಒಂದು ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, "ಮದ್ಯ (Alcohol) ಜನರ ಪಾಲಿಗೆ ಒಂದು ದೊಡ್ಡ ಟಾನಿಕ್ ಆಗಿದೆ ಹಾಗೂ ಕೊರೊನಾ (Coronavirus) ಕಾಲದಲ್ಲಿ ಇದು ತುಂಬಾ ಆವಶ್ಯಕವಾಗಿದೆ. ಹೀಗಾಗಿ ಮದ್ಯಸೇವಿಸುವ ಸಾಕಷ್ಟು  ಜನರಿದ್ದಾರೆ" ಎಂದಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ- Vaccine: ದಿನದ ಯಾವ ಸಮಯದಲ್ಲಿ ಲಸಿಕೆ ಹಾಕಿಸಿದರೆ ಉತ್ತಮ? ಅಧ್ಯಯನ ಏನ್ ಹೇಳುತ್ತೆ?


ಮದ್ಯ ಒಂದು ದೊಡ್ಡ ರೆವಿನ್ಯೂ ಮಾಧ್ಯಮ
"ಕೊರೊನಾ (Covid-19)ಕಾಲದಲ್ಲಿ ದೇಶ ಹಾಗೂ ರಾಜ್ಯಗಳಲ್ಲಿ ಲಾಕ್ ಡೌನ್ (Lockdown) ಘೋಷಣೆಯಾದಾಗ, ಎಲ್ಲ ಅಂಗಡಿ ಮುಂಗಟ್ಟುಗಳಿಗೆ ಬೀಗ ಹಾಕಲಾಯಿತು. ಅಂಗಡಿಗಳು ತೆರೆದುಕೊಳ್ಳುತ್ತಿದ್ದಂತೆ, ಜನರು ಅಂಗಡಿಗಳತ್ತ ಧಾವಿಸಿದರು. ಸಾರಾಯಿ ಜನರ ಜೊತೆಗೆ ಸರ್ಕಾರಗಳ ಆದಾಯದ ಒಂದು ದೊಡ್ಡ ರೆವಿನ್ಯೂ (Revinue) ಆಗಿದೆ.


ಇದನ್ನೂ ಓದಿ-SBI Alert! ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಈ ಎರಡು ಪ್ರಮುಖ ಸುದ್ದಿಗಳನ್ನು ಓದಲು ಮರೆಯಬೇಡಿ


ಈ ಕುರಿತಂತೆ ಎಲ್ಲ ರಾಜ್ಯ ಸರ್ಕಾರಗಳ ನಡುವೆ ಒಂದು ದೊಡ್ಡ ಸ್ಪರ್ಧೆಯೇ ಏರ್ಪಟ್ಟಿರುತ್ತದೆ. ಹೀಗಾಗಿ ರಾಜ್ಯ ಸರ್ಕಾರಗಳು (State Government) ಕೂಡ ತಮ್ಮ ತಮ್ಮ ಲೆಕ್ಕಗಳ ಆಧಾರದ ಮೇಲೆಯೇ ನಿರ್ಣಯಗಳನ್ನು ಕೈಗೊಳ್ಳುತ್ತವೆ. ಮದ್ಯ ಸೇವಿಸುವವರ ಹೆಚ್ಚಿನ ಸಂಖ್ಯೆಯೂ ಕೂಡ ಇದಕ್ಕೆ ಕಾರಣ" ಎಂದು ಫಗ್ಗನ್ ಸಿಂಗ್ ಹೇಳಿದ್ದಾರೆ.


ಇದನ್ನೂ ಓದಿ-ರೂ.ಗಳಿಗೆ ಅನಿಯಮಿತ ಕಾಲಿಂಗ್, ನಿತ್ಯ 4 ಜಿಬಿ ಡೇಟಾ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ