Cheapest Recharge Plan: ಕೇವಲ 11 ರೂ.ಗಳಿಗೆ ಅನಿಯಮಿತ ಕಾಲಿಂಗ್, ನಿತ್ಯ 4 ಜಿಬಿ ಡೇಟಾ!

Cheapest Recharge Plan: Vodafone Idea (Vi) ಕಂಪನಿ ಭಾರತೀಯ ದೂರ ಸಂಚಾರ ಕ್ಷೇತ್ರದಲ್ಲಿ (Telecom Sector) ಮೂರನೇ ಅತಿ ದೊಡ್ಡ ಕಂಪನಿಯಾಗಿದೆ. ಭಾರತೀಯ ಟೆಲಿಕಾಂ ಕಂಪನಿಗಳು ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯಲು ಹಲವು ವಿಶೇಷ ಕೊಡುಗೆಗಳನ್ನು ಪ್ರಸ್ತುತಪಡಿಸುತ್ತವೆ. ಈ ವಿಶೇಷ ಯೋಜನೆಗಳು ಕೈಗೆಟಕುವ ದರದಲ್ಲಿ ಉಚಿತ ಕಾಲಿಂಗ್ ಹಾಗೂ SMS ಜೊತೆಗೆ ಸಾಕಷ್ಟು ಡೇಟಾ ಸೌಲಭ್ಯವನ್ನು ನೀಡುತ್ತವೆ.

Written by - Nitin Tabib | Last Updated : Jun 6, 2021, 03:02 PM IST
  • ಕೇವಲ ರೂ.11ಕ್ಕೆ ನಿತ್ಯ 4ಜಿಬಿ ಡೇಟಾ, ಉಚಿತ ಕಾಲಿಂಗ್
  • 100 sms ಗಳ ಜೊತೆಗೆ Vi Movies And TV ಲಾಭ.
  • Binge All Night, ವೀಕೆಂಡ್ ಡೇಟಾ ರೋಲ್ ಓವರ್ ಸೌಕರ್ಯ ಕೂಡ ಸಿಗಲಿದೆ.
Cheapest Recharge Plan: ಕೇವಲ 11 ರೂ.ಗಳಿಗೆ ಅನಿಯಮಿತ ಕಾಲಿಂಗ್, ನಿತ್ಯ 4 ಜಿಬಿ ಡೇಟಾ! title=
Cheapest Recharge Plan (File Photo)

Vodafone Idea Recharge:Vodafone Idea (Vi) ಕಂಪನಿ ಭಾರತೀಯ ದೂರ ಸಂಚಾರ ಕ್ಷೇತ್ರದಲ್ಲಿ ಮೂರನೇ ಅತಿ ದೊಡ್ಡ ಕಂಪನಿಯಾಗಿದೆ. ಭಾರತೀಯ ಟೆಲಿಕಾಂ ಕಂಪನಿಗಳು (Vi Recharge Online Prepaid) ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯಲು ಹಲವು ವಿಶೇಷ ಕೊಡುಗೆಗಳನ್ನು ಪ್ರಸ್ತುತಪಡಿಸುತ್ತವೆ. ಈ ವಿಶೇಷ ಯೋಜನೆಗಳು ಕೈಗೆಟಕುವ ದರದಲ್ಲಿ ಉಚಿತ ಕಾಲಿಂಗ್ ಹಾಗೂ SMS ಜೊತೆಗೆ ಸಾಕಷ್ಟು ಡೇಟಾ ಸೌಲಭ್ಯವನ್ನು ನೀಡುತ್ತವೆ.

ಇಂತಹುದೇ ಒಂದು ಯೋಜನೆಯಲ್ಲಿ, Vi (Vi Recharge Offers Today), 4 ಜಿಬಿ ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ಅನ್ನು 11 ರೂ.ಗಿಂತ ಕಡಿಮೆ ದರದಲ್ಲಿ ನೀಡುತ್ತಿದೆ. ಟೆಲಿಕಾಂ ಕಂಪನಿ ಈ ಯೋಜನೆಯನ್ನು 299 ರೂಗಳಿಗೆ ಬಿಡುಗಡೆ ಮಾಡಿದೆ.

ರೂ.299 ಯೋಜನೆ ಸಕ್ರೀಯವಾದ ಬಳಿಕ ಗ್ರಾಹಕರಿಗೆ ನಿತ್ಯ 4 ಜಿಬಿ ಡಾಟಾ, ಅನಿಯಮಿತ ಕರೆ ಸೌಲಭ್ಯ ಹಾಗೂ 100 ಉಚಿತ SMSಗಳು ಸಿಗಲಿವೆ. ಈ ಪ್ಲಾನ್ ನ ವ್ಯಾಲಿಡಿಟಿ 28 ದಿನಗಳದ್ದಾಗಿದೆ. ಒಟ್ಟಾರೆ ಸೇರಿ ಈ ಟೆಲಿಕಾಂ ಕಂಪನಿ ಈ ಪ್ಲಾನ್ ಅಡಿ 112 ಜಿಬಿ ಹೈ ಸ್ಪೀಡ್ ಡಾಟಾ ನೀಡುತ್ತಿದೆ. 

ಒಂದು ವೇಳೆ ನೀವು ಈ ಪ್ಲಾನ್ ಬಗ್ಗೆ ನಿತ್ಯದ ಲೆಕ್ಕಾಚಾರ ನಡೆಸಿದರೆ, ವಾಸ್ತವದಲ್ಲಿ ನಿಮಗೆ ನಿತ್ಯ ಕೇವಲ ರೂ.11 ಕ್ಕೂ ಕಡಿಮೆ ವೆಚ್ಚ ಮಾಡುತ್ತಿರುವಿರಿ ಎಂಬುದು ನಿಮ್ಮ ಗಮನಕ್ಕೆ ಬರಲಿದೆ. ಈ ಯೋಜನೆಯಡಿ ಎಲ್ಲಾ ಸೌಕರ್ಯಗಳ ಹೊರತಾಗಿ ಕಂಪನಿ (Vi Recharge Plan 2021 Karnataka), Binge All Night ಸೌಕರ್ಯ ನೀಡುತ್ತಿದೆ. ಈ ಸೌಕರ್ಯದ ಅಡಿ ಗ್ರಾಹಕರು ಮದ್ಯಾಹ್ನ 12 ರಿಂಗ ಬೆಳಿಗ್ಗೆ 6 ಗಂಟೆಯವರೆಗೆ ಗ್ರಾಹಕರು ಉಚಿತವಾಗಿ ಇಂಟರ್ನೆಟ್ ಮೇಲೆ ಸರ್ಫ್ ಮಾಡಬಹುದು.

ಇದನ್ನೂ ಓದಿ- G-7 Global Corporate Tax: Google, Facebook ಗಳಂತಹ ಕಂಪನಿಗಳ ಮೇಲೆ ಶೇ.15 ರಷ್ಟು ತೆರಿಗೆ, G-7 ದೇಶಗಳ ಮಧ್ಯೆ ಐತಿಹಾಸಿಕ ಒಪ್ಪಂದ

ಈ ಪ್ಯಾಕೇಜ್ ನಲ್ಲಿ ವಿಡಿಯೋ ಡಾಟಾ ರೋಲ್ ಓವರ್ ಹಾಗೂ Vi Movies And TVಯ ಉಚಿತ ಚಂದಾದಾರಿಕೆಯ ಜೊತೆಗೆ ಇತರ ಸೌಲಭ್ಯಗಳು ಸೇರಿವೆ. ಇನ್ನೊಂದೆಡೆ ಕಂಪನಿ (Vi Recharge Plan 2021) ರೂ.399ರ ಇನ್ನೊಂದು ಯೋಜನೆಯನ್ನು ಜಾರಿಗೆ ತಂದಿದೆ. ಇದು ಒಟ್ಟು 56 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಲಾನ್ (Prepaid Recharge Plan) ಅನ್ನು ಸಕ್ರೀಯಗೊಳಿಸುವ ಗ್ರಾಹಕರಿಗೆ ಅನಿಯಮಿತ ಕರೆ, ನಿತ್ಯ 1.5ಜಿಬಿ ಡೇಟಾ ಹಾಗೂ 100 SMS ಸಿಗುತ್ತಿವೆ. 

ಇದನ್ನೂ ಓದಿ- BSNL: ಬಳಕೆದಾರರಿಗೆ ಭರ್ಜರಿ ಗಿಫ್ಟ್ ನೀಡಿದ ಬಿಎಸ್ಎನ್ಎಲ್

ಈ ಪ್ಲಾನ್ ಕೂಡ Binge All Night, ವಿಕೆಂಡ್ ಡಾಟಾ ರೋಲ್ ಓವರ್ ಹಾಗೂ Vi Movies And TVಯ ಉಚಿತ ಚಂದಾದಾರಿಕೆಗಳಂತಹ ಇತರ ಸೌಕರ್ಯಗಳನ್ನು ಸಹ ಒಳಗೊಂಡಿದೆ. ಇದಲ್ಲದೆ ಮುಂದಿನ ರಿಚಾರ್ಜ್ ಮೇಲೆ ನಿಮಗೆ ರೂ.40 ರ ಡಿಸ್ಕೌಂಟ್ ಕೂಪನ್ ಕೂಡ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ-SBI Alert! ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಈ ಎರಡು ಪ್ರಮುಖ ಸುದ್ದಿಗಳನ್ನು ಓದಲು ಮರೆಯಬೇಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News