ಅಂಬಾಲಾ: ಹರಿಯಾಣಾ ಗೃಹ ಸಚಿವ ಅನಿಲ್ ವಿಜ್ ಮತ್ತೊಮ್ಮೆ ಕರೋನಾ ಸೋಂಕಿಗೆ ಗುರಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ, ಕೊರೊನಾವೈರಸ್  ಲಸಿಕೆ ಹಾಕಿಸಿಕೊಂಡಿರುವ ಸಚಿವರು ಮತ್ತೊಮ್ಮೆ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಖುದ್ದು ಅವರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೋವಿಡ್ -19 ತನಿಖೆಯಲ್ಲಿ ನನ್ನ ಕರೋನಾ ವರದಿ ಪಾಸಿಟಿವ್ ಎಂದು ಕಂಡುಬಂದಿದೆ ಎಂದು ಅನಿಲ್ ವಿಜ್ ಟ್ವೀಟ್ ಮಾಡಿದ್ದಾರೆ. ನನ್ನನ್ನು ಸಿವಿಲ್ ಆಸ್ಪತ್ರೆ ಅಂಬಾಲಾ ಕ್ಯಾಂಟ್‌ನಲ್ಲಿ ದಾಖಲಿಸಲಾಗಿದೆ. ನಾನು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ.  ಇದೇ ವೇಳೆ  ನನ್ನೊಂದಿಗೆ ನಿಕಟ ಸಂಪರ್ಕಕ್ಕೆ ಬಂದವರೆಲ್ಲರೂ ಕರೋನಾ ತನಿಖೆ ನಡೆಸಬೇಕೆಂದು ಅವರು ವಿನಂತಿಸಿದ್ದಾರೆ.


Watch: ಖುದ್ದು Covaxin ಪ್ರಯೋಗಕ್ಕೆ ಒಳಪಟ್ಟ ಹರಿಯಾಣ ಅರೋಗ್ಯ ಸಚಿವ ಅನಿಲ್ ವಿಜ್


COMMERCIAL BREAK
SCROLL TO CONTINUE READING

ಕೊರೊನಾ ವ್ಯಾಕ್ಸಿನ್ ಮೇಲೆ ಕಾರ್ಯನಿರ್ವಹಿಸಲಾಗುತ್ತಿದೆ
ಬಳಿಕ ಮಾತನಾಡಿದ್ದ ಪಿಜಿಐ ಉಪಕುಲಪತಿ ರೋಹ್ಟಕ್ ಅವರು ಮೂರನೇ ಹಂತದ ಸಹ-ಲಸಿಕೆ ಪ್ರಯೋಗವನ್ನು ಶುಕ್ರವಾರದಿಂದ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದರು. ಕರೋನಾ ಲಸಿಕೆಯ ಮೊದಲ ಡೋಸ್ ಅನ್ನು 200 ಸ್ವಯಂಸೇವಕರಿಗೆ ನೀಡಲಾಗುತ್ತಿದೆ ಎಂಬ ಮಾಹಿತಿ ನೀಡಿದ್ದರು. ಪ್ರತಿ ಸ್ವಯಂಸೇವಕರಿಗೆ ಎರಡು ಡೋಸ್ ಲಸಿಕೆ ನೀಡಲಾಗುವುದು ಎಂದು ಅವರು ತಿಳಿಸಿದ್ದರು. ಮೊದಲ ಡೋಸ್ ನೀಡಿದ 28 ದಿನಗಳ ನಂತರ ಎರಡನೇ ಡೋಸ್ ನೀಡಲಾಗುವುದು. ಭಾರತ ಬಯೋಟೆಕ್ ಭಾರತೀಯ ಕಂಪನಿಯಾಗಿದ್ದು, ಕೊವಾಕ್ಸಿನ್ (Covaxin) ಹೆಸರಿನಲ್ಲಿ ಕರೋನಾ ಲಸಿಕೆಯನ್ನು ತಯಾರಿಸುತ್ತಿದೆ.


ಇದನ್ನು ಓದಿ- ಮೂರನೇ ಹಂತದ ಕೋವಾಕ್ಸಿನ್ ಕ್ಲಿನಿಕಲ್ ಪ್ರಯೋಗಗಳಿಗೆ ಡಿಸಿಜಿಐ ಅನುಮೋದನೆ


ಟ್ರಯಲ್ ನ ಮೂರನೇ ಹಂತದಲ್ಲಿ 200 ವಾಲೆಂಟೀಯರ್ ಗಳಿಗೆ ಕೊವಿಡ್ ಲಸಿಕೆ
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಉತ್ಪಾದಿಸುತ್ತಿದೆ. ಪಿಜಿಐ ರೋಹ್ಟಕ್ ಕೂಡ ದೇಶದ ಮೂರು ಕೇಂದ್ರಗಳಲ್ಲಿ ಒಂದಾಗಿದ್ದು, ಅಲ್ಲಿ ಮೂರನೇ ಹಂತದಲ್ಲಿ 200 ಸ್ವಯಂಸೇವಕರಿಗೆ ಕರೋನಾ ಲಸಿಕೆ ಅನ್ವಯಿಸಲಾಗುತ್ತದೆ. ಸ್ವಯಂಸೇವಕರಿಗೆ ಲಸಿಕೆ ಅನ್ವಯಿಸಿದ ನಂತರ, ಅವರಲ್ಲಿನ ಪ್ರತಿಕಾಯಗಳ ಸ್ಥಿತಿಯನ್ನು ಅಧ್ಯಯನ ಮಾಡಲಾಗುತ್ತದೆ. ಕಂಪನಿಯ ಪ್ರಕಾರ, ಅವರ ಲಸಿಕೆ ಶೇಕಡಾ 90 ರಷ್ಟು ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ ಎನ್ನಲಾಗಿದೆ.