ನವದೆಹಲಿ: ಉದ್ಯೋಗ ಹುಡುಕುವ ಜನರಿಗೆ ಈ ಕಂಪನಿ ಅಪಾರ ಅವಕಾಶಗಳನ್ನು ಒದಗಿಸುತ್ತಿದೆ. ವೈನ್ ತಯಾರಿಸುವ ಕಂಪನಿಯು (Murphy Goode Winery Job Application) ತಿಂಗಳಿಗೆ 7 ಲಕ್ಷ 24 ಸಾವಿರ ರೂಪಾಯಿಗಳ ವೇತನ ನೀಡುತ್ತಿದೆ.  ಇದು ಮಾತ್ರವಲ್ಲ, ಕೆಲಸ ಮಾಡುವ ವ್ಯಕ್ತಿಗೆ ವಾಸಕ್ಕೆ ಮನೆಯನ್ನು ಕೂಡಾ ನೀಡುತ್ತಿದೆ. ಈ ಕೆಲಸದ ಅವಧಿ ಒಂದು ವರ್ಷದವರೆಗೆ ಇರುತ್ತದೆ. 


COMMERCIAL BREAK
SCROLL TO CONTINUE READING

 ಕೆಲಸಕ್ಕೆ ಸಿಗಲಿದೆ ತಿಂಗಳಿಗೆ 7 ಲಕ್ಷ ರೂ ಸಂಬಳ : 
 ಈ ಕಂಪನಿಯ ಹೆಸರು ಮರ್ಫಿ-ಗೂಡೆ ವೈನರಿ (Murphy Goode Winery) . ಕ್ಯಾಲಿಫೋರ್ನಿಯಾದ ಕ್ಯಾಲಿಫೋರ್ನಿಯಾದ ಸೋನೊಮಾದಲ್ಲಿರುವ ತನ್ನ ಕಾರ್ಖಾನೆಗಾಗಿ ಈ ಕಂಪನಿಯು (Company) ಕೆಲಸವನ್ನು ನೀಡುತ್ತಿದೆ. ಇಲ್ಲಿ ತನ್ನ ನೌಕರರ ವೇತನ (salary) ತಿಂಗಳಿಗೆ 7 ಲಕ್ಷ 24 ಸಾವಿರ ಎಂದು ನಿಗದಿ ಪಡಿಸಲಾಗಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಕೆಲಸದಲ್ಲಿ ಯಾವುದೇ ರೀತಿಯ ಒತ್ತಡವಿರುವುದಿಲ್ಲ. ಏಕೆಂದರೆ ಕೆಲಸ ಪಡೆಯುವ ವ್ಯಕ್ತಿಗೆ ವೈನರಿಯಲ್ಲಿ ಅವನ ಆಯ್ಕೆಯ ಕೆಲಸವನ್ನೇ  ನೀಡಲಾಗುತ್ತದೆ.


ಇದನ್ನೂ ಓದಿ : '18 ರಾಜ್ಯಗಳಲ್ಲಿ ಹೊಸ ಕೊರೊನಾ ತಳಿ ಸಕ್ರಿಯವಾಗಿರುವುದು ಆತಂಕದ ಸಂಗತಿ'


 ಕೆಲಸಕ್ಕೆ ಅರ್ಹತಾ ಮಾನದಂಡಗಳು :
ಕೆಲಸ ಮಾಡುವ ವ್ಯಕ್ತಿ ಮದ್ಯ ತಯಾರಿಕಾ ಕಾರ್ಖಾನೆಯ ವಿವಿಧ ಕೆಲಸದ ಬಗ್ಗೆ ತಿಳಿದುಕೊಂಡಿರಬೇಕು. ಇ-ಕಾಮರ್ಸ್ ಬಗ್ಗೆಯೂ ಜ್ಞಾನವಿರಬೇಕು.  ಬೇರೆ ಬೇರೆ ತಂಡಗಳ ಜೊತೆ ಕಮ್ಯುನಿಕೇಷನ್ (Communication) ಮಾಡಬೇಕಾಗಿರುವುದರಿಂದ ಭಾಷೆಯ ಮೇಲೆ ಹಿಡಿತವಿರಬೇಕು. ಉತ್ತಮ ಸಂವಹನ ಮತ್ತು  ಟೀಂ ಮ್ಯಾನೇಜ್ಮೆಂಟಲ್ಲಿ ಪರಿಣಿತನಾಗಿರಬೇಕು.  


ಇದಕ್ಕೂ ಮುಂಚೆಯೇ ಕಂಪನಿ ನೀಡಿತ್ತು ಆಫರ್ :
 ಅಮೇರಿಕಾದ Murphy-Goode Winery ಅನ್ನು 1985 ರಲ್ಲಿ ಸ್ಥಾಪಿಸಲಾಯಿತು. ಈ ಮೊದಲು, ಈ ಕಂಪನಿಯು 2009 ರಲ್ಲಿ ಈ ರೀತಿಯ ಕೆಲಸದ ಆಫರ್ ನೀಡಿತ್ತು.  ಆ ಸಮಯದಲ್ಲಿ,  ತಮ್ಮ ಕೆಲಸವನ್ನು  ಸೋಷಿಯಲ್ ಮೀಡಿಯಾದಲ್ಲಿ (Social media) ಪ್ರಚಾರ ಮಾಡುವಂತೆ ಅಭ್ಯರ್ಥಿಗಳಿಗೆ ಸೂಚಿಸಲಾಗಿತ್ತು.  


ಇದನ್ನೂ ಓದಿ :  Pension Plan: ವೃದ್ಧಾಪ್ಯದಲ್ಲಿ ಹಣದ ಸಹಾಯ ಬೇಕೆ? ಸರ್ಕಾರದ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ!


 ವಯಸ್ಸಿನ ಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 21 ವರ್ಷ ಅಥವಾ ಅದಕ್ಕಿಂತ ಹೆಚ್ಚಿನವರಾಗಿರಬೇಕು ಮತ್ತು US ನಲ್ಲಿ ಕೆಲಸ ಮಾಡಲು ಅನುಮೋದನೆಯನ್ನು ಹೊಂದಿರಬೇಕು. ಅಲ್ಲದೆ, ಅಭ್ಯರ್ಥಿಯು ಈ ಕೆಲಸವನ್ನು ಏಕೆ ಮಾಡಲು ಬಯಸುತ್ತಾನೆ ಎಂಬುದನ್ನು ವಿವರಿಸುವ ವೀಡಿಯೊವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. 


ಆಯ್ಕೆ ಪ್ರಕ್ರಿಯೆ :
 ಸೃಜನಶೀಲತೆ, ವಿನ್ಯಾಸ, ಕೌಶಲ್ಯ ಮತ್ತು ಅನುಭವದ ಆಧಾರದ ಮೇಲೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ (ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 30 ಆಗಿದೆ. ಹೆಚ್ಚಿನ ಮಾಹಿತಿಯನ್ನು ಕಂಪನಿಯ ವೆಬ್‌ಸೈಟ್ https://www.murphygoodewinery.com/a-really-goode-job ನಿಂದ ಪಡೆಯಬಹುದು.


ಇದನ್ನೂ ಓದಿ : Fact Check: ಗುಮಾಸ್ತ ಹುದ್ದೆಗಳಿಗೆ ಐಆರ್‌ಸಿಟಿಸಿ ಆಫರ್ ಲೆಟರ್ ನೀಡಿದೆಯೇ? ಇಲ್ಲಿದೆ ಸತ್ಯಾಸತ್ಯತೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.