'18 ರಾಜ್ಯಗಳಲ್ಲಿ ಹೊಸ ಕೊರೊನಾ ತಳಿ ಸಕ್ರಿಯವಾಗಿರುವುದು ಆತಂಕದ ಸಂಗತಿ'

ಕರೋನವೈರಸ್ ನ ಹೊಸ ಡಬಲ್ ರೂಪಾಂತರಿತ ತಳಿ ದೇಶದ 18 ರಾಜ್ಯಗಳಲ್ಲಿ ಪತ್ತೆಯಾಗಿರುವುದು ಕಳವಳಕಾರಿ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Last Updated : Mar 24, 2021, 04:06 PM IST
'18 ರಾಜ್ಯಗಳಲ್ಲಿ ಹೊಸ ಕೊರೊನಾ ತಳಿ ಸಕ್ರಿಯವಾಗಿರುವುದು ಆತಂಕದ ಸಂಗತಿ' title=
file photo

ನವದೆಹಲಿ: ಕರೋನವೈರಸ್ ನ ಹೊಸ ಡಬಲ್ ರೂಪಾಂತರಿತ ತಳಿ ದೇಶದ 18 ರಾಜ್ಯಗಳಲ್ಲಿ ಪತ್ತೆಯಾಗಿರುವುದು ಕಳವಳಕಾರಿ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

'ಭಾರತದಲ್ಲಿ ವಿಒಸಿಗಳು ಮತ್ತು ಹೊಸ ಡಬಲ್ ರೂಪಾಂತರಿತ ತಳಿ ಕಂಡುಬಂದರೂ, ಇವುಗಳು ನೇರ ಸಂಬಂಧವನ್ನು ಸ್ಥಾಪಿಸಲು ಅಥವಾ ಕೆಲವು ರಾಜ್ಯಗಳಲ್ಲಿ ಪ್ರಕರಣಗಳ ತ್ವರಿತ ಹೆಚ್ಚಳವನ್ನು ವಿವರಿಸಲು ಸಾಕಷ್ಟು ಸಂಖ್ಯೆಯಲ್ಲಿ ಪತ್ತೆಯಾಗಿಲ್ಲ ಎಂದು ಸಚಿವಾಲಯ ತಿಳಿಸಿದೆ. ಭಾರತದಲ್ಲಿ ಬ್ರಿಟಿಷ್ ರೂಪಾಂತರದ 736 ಮಾದರಿಗಳಲ್ಲಿ ವರದಿಯಾಗಿವೆ.ದೇಶದ 34 ಜನರಲ್ಲಿ ದಕ್ಷಿಣ ಆಫ್ರಿಕಾದ ಕೊರೊನಾವೈರಸ್ ಪತ್ತೆಯಾಗಿದೆ ಮತ್ತು ಬ್ರೆಜಿಲ್ ರೂಪಾಂತರವು ಒಂದು ಮಾದರಿಯಲ್ಲಿ ಕಂಡುಬಂದಿದೆ ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಮಾರ್ಚ್ 24 ರಿಂದ ಈ ರಾಜ್ಯದಲ್ಲಿ ಶಾಲಾ ಕಾಲೇಜುಗಳು ಬಂದ್...!

ಹತ್ತು ರಾಷ್ಟ್ರೀಯ ಪ್ರಯೋಗಾಲಯಗಳ ಸರ್ಕಾರಿ ಒಕ್ಕೂಟದಿಂದ ಮಾದರಿಗಳನ್ನು ಜೀನೋಮ್ ಅನುಕ್ರಮಕ್ಕೆ ಒಳಪಡಿಸಲಾಗಿದೆ.ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ಬರುವ ಮಾದರಿಗಳು, ಹೊಸ ತಳಿಗಳಿಗೆ ಸಕಾರಾತ್ಮಕವಾದವರ ಸಂಪರ್ಕಗಳು ಮತ್ತು 10 ರಾಷ್ಟ್ರೀಯ ಪ್ರಯೋಗಾಲಯಗಳು ಇರುವ ಹೆಚ್ಚಿನ ರಾಜ್ಯಗಳ ಸಮುದಾಯದ ಮಾದರಿಗಳ ಮೇಲೆ ಜೀನೋಮ್ ಪರೀಕ್ಷೆಗಳನ್ನು ನಡೆಸಲಾಯಿತು.

ಇದನ್ನೂ ಓದಿ: ಕೊರೊನಾವೈರಸ್ ಪ್ರಕರಣ ಹೆಚ್ಚಳ ಹಿನ್ನಲೆಯಲ್ಲಿ ಹೋಳಿ, ನವರಾತ್ರಿಗೆ ನಿಷೇಧ ಹೇರಿದ ದೆಹಲಿ ಸರ್ಕಾರ

ಭಾರತವು ಇಂದು 47,262 ಹೊಸ  ಕೊರೊನಾವೈರಸ್ ಪ್ರಕರಣಗಳನ್ನು ದಾಖಲಿಸಿದೆ, ಇದು ನವೆಂಬರ್ ಆರಂಭದಿಂದೀಚೆಗೆ ಅತಿ ಹೆಚ್ಚು ಏಕದಿನ ಏರಿಕೆಯಾಗಿದ್ದು, ರಾಷ್ಟ್ರವ್ಯಾಪಿ COVID-19 ಅನ್ನು 1.17 ಕೋಟಿಗೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.COVID-19 ಪ್ರಕರಣಗಳು ಹೆಚ್ಚುತ್ತಿರುವಾಗ, ಮುಂಬರುವ ಹಬ್ಬಗಳಾದ ಹೋಳಿ, ಶಾಬ್-ಎ-ಬರಾತ್, ಬಿಹು, ಈಸ್ಟರ್ ಮತ್ತು ಈದ್-ಉಲ್-ಫಿತರ್ ಸಮಯದಲ್ಲಿ ಕೋವಿಡ್ ಪ್ರೋಟೋಕಾಲ್ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕೆಂದು ಕೇಂದ್ರವು ಇಂದು ರಾಜ್ಯಗಳಿಗೆ ಆಗ್ರಹಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News