ನವದೆಹಲಿ: ಭಾರತೀಯ ರೈಲ್ವೆ (Railway Jobs) ಉದ್ಯೋಗಗಳ ಹೆಸರಿನಲ್ಲಿ ಜನರನ್ನು ವಂಚಿಸುತ್ತಿರುವ ಬಗ್ಗೆ ಇತ್ತೀಚಿಗೆ ರೈಲ್ವೆ ಸಚಿವಾಲಯ ಎಚ್ಚರಿಕೆ ನೀಡಿದೆ. ರೈಲ್ವೆಯಲ್ಲಿ ಸರ್ಕಾರಿ ಉದ್ಯೋಗ ನೇಮಕಾತಿಗೆ ಸಂಬಂಧಿಸಿದಂತೆ ಸುಳ್ಳು ವದಂತಿಗಳಿಗೆ ಜನರು ಬಲಿಯಾಗಬಹುದು. ಈ ಬಗ್ಗೆ ಜಾಗರೂಕರಾಗಿರುವಂತೆ ರೈಲ್ವೆ ಸಚಿವಾಲಯ ಎಚ್ಚರಿಸಿದೆ.
ವಾಸ್ತವವಾಗಿ, ಸೋಷಿಯಲ್ ಮೀಡಿಯಾದಲ್ಲಿ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನ್ ಲಿಮಿಟೆಡ್ (IRCTC) ಹೆಸರಿನಲ್ಲಿ ಒಂದು ಪೋಸ್ಟ್ ವೈರಲ್ ಆಗುತ್ತಿದೆ. ಇದರಲ್ಲಿ, 'ಕಮರ್ಷಿಯಲ್ ಕ್ಲರ್ಕ್' ಹುದ್ದೆಯ ನೇಮಕಕ್ಕೆ ರೈಲ್ವೆ ಇಲಾಖೆ ನೀಡಿದೆ ಎನ್ನಲಾಗುತ್ತಿರುವ ಆಫರ್ ಲೆಟರ್ ವೈರಲ್ ಆಗುತ್ತಿದೆ. ಈ ವೈರಲ್ ಪೋಸ್ಟ್ನ ಬಗ್ಗೆ ಪಿಐಬಿ ಫ್ಯಾಕ್ಟ್ ಚೆಕ್ ತನಿಖಾ ತಂಡ ಆತಂಕಕಾರಿ ವಿಷಯವನ್ನು ಬಹಿರಂಗ ಪಡಿಸಿದೆ.
An appointment letter allegedly issued in the name of Indian Railway Catering & Tourism Corporation Ltd. is claiming that applicant is being appointed for the post of 'Commercial Clerk'#PIBFactCheck: This letter is #Fake. @IRCTCofficial has not issued this appointment letter pic.twitter.com/kRM5HnuEcj
— PIB Fact Check (@PIBFactCheck) March 22, 2021
ಭಾರತೀಯ ರೈಲ್ವೆಯಲ್ಲಿ ಕೆಲಸಕ್ಕಾಗಿ ಆಫರ್ ಲೆಟರ್ ಹಿಂದಿನ ಸತ್ಯ:
ಸಾಮಾಜಿಕ ಮಾಧ್ಯಮದಲ್ಲಿ, ಭಾರತೀಯ ರೈಲ್ವೆಯ ಈ ವೈರಲ್ ಪೋಸ್ಟ್ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿರುವ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಯ ಫ್ಯಾಕ್ಟ್ ಚೆಕ್ ತಂಡ ತನಿಖೆ ನಡೆಸುತ್ತಿರುವಾಗ, ಈ ನೇಮಕಾತಿ ಪತ್ರವನ್ನು (Appointment Letter) ನಕಲಿ ಎಂದು ಪತ್ತೆಹಚ್ಚಿದ್ದು ಈ ಸಂಬಂದ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ.
ಇದನ್ನೂ ಓದಿ - ಮತ್ತೆ ಹಳಿಗೆ ಮರಳಿದ Golden Chariot, 7 ದಿನಗಳಲ್ಲಿ ಇಡೀ ದಕ್ಷಿಣ ಭಾರತದ ಯಾತ್ರೆ
ರೈಲ್ವೆ ಸಚಿವಾಲಯದ ಟ್ವೀಟ್ :
ರೈಲ್ವೆ ಸಚಿವಾಲಯ (Ministry Of Railways) ಕೂಡ ಇದು ತಪ್ಪುದಾರಿಗೆಳೆಯುವಂತಿದೆ ಮತ್ತು ರೈಲ್ವೆ ಅಂತಹ ಯಾವುದೇ ಜಾಹೀರಾತನ್ನು ನೀಡಿಲ್ಲ ಎಂದು ಟ್ವೀಟ್ ಮಾಡಿದೆ. ಅಲ್ಲದೆ, ಉದ್ಯೋಗಕ್ಕೆ ಸಂಬಂಧಿಸಿದ ನಕಲಿ ಸುದ್ದಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ರೈಲ್ವೆ ಎಚ್ಚರಿಕೆ ನೀಡುತ್ತಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ - ರೈಲಿನಲ್ಲಿ ಆಹಾರ ಗುಣಮಟ್ಟದ ಮೇಲ್ವಿಚಾರಣೆಗೆ ಪ್ರತೀ ಬೋಗಿಯಲ್ಲಿಯೂ ಫುಡ್ ಇನ್ಸ್ ಪೆಕ್ಟರ್
ಈ ಮೊದಲೂ ಇಂತಹ ಘಟನೆಗಳು ನಡೆದಿರುವ ನಿದರ್ಶನ:
ಗಮನಿಸಬೇಕಾದ ಸಂಗತಿಯೆಂದರೆ, 2020 ರ ಆಗಸ್ಟ್ನಲ್ಲಿ ಭಾರತೀಯ ರೈಲ್ವೆ 5000 ಕ್ಕೂ ಹೆಚ್ಚು ನೇಮಕಾತಿ ಜಾಹೀರಾತುಗಳನ್ನು ನಕಲಿ ಎಂದು ನೀಡಿತ್ತು. ರೈಲ್ವೆ ಸಚಿವಾಲಯದ ಪರವಾಗಿ ಯಾವುದೇ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿಲ್ಲ ಮತ್ತು ಇಂತಹ ನೇಮಕಾತಿಗಳ ಸೋಗಿನಲ್ಲಿ ಯುವಕರು ಮೋಸ ಹೋಗಬಾರದು ಎಂದು ರೈಲ್ವೆ ಸಚಿವಾಲಯ ಎಚ್ಚರಿಕೆ ನೀಡಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.