TMC ಶಾಸಕರ ರಾಜೀನಾಮೆ ಪರ್ವದ ಬೆನ್ನಲ್ಲೇ ಪಶ್ಚಿಮ ಬಂಗಾಳಕ್ಕೆ ಅಮಿತ್ ಶಾ ಭೇಟಿ
ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಎದ್ದಿರುವ ಭಿನ್ನಮತದ ಲಾಭ ಪಡೆಯಲು ಬಿಜೆಪಿ ಭಾರೀ ಕಸರತ್ತು ನಡೆಸುತ್ತಿದೆ. ಇದೇ ಹಿನ್ನಲೆಯಲ್ಲಿ ಅಮಿತ್ ಶಾ ಎರಡು ದಿನಗಳ ಪ್ರವಾಸಕ್ಕಾಗಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿಯ ಮಾಜಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಎರಡು ದಿನಗಳ ಪ್ರವಾಸಕ್ಕಾಗಿ ಶುಕ್ರವಾರ ರಾತ್ರಿ ಕೋಲ್ಕತ್ತಾಗೆ ಆಗಮಿಸಿದ್ದಾರೆ. ಆಡಳಿಯಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ನಾನಾ ಬೆಳವಣಿಗೆಗಳ ನಡುವೆ ಅಮಿತ್ ಶಾ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ.
Trinamool Congress) ಪಕ್ಷದ ಬಗ್ಗೆ ಅಸಮಾಧಾನಗೊಂಡು ಪಕ್ಷ ಮತ್ತು ಶಾಸಕ, ಸಚಿವ ಸ್ಥಾನಗಳನ್ನು ತೊರೆದಿರುವ ಸುವೇಂದು ಅಧಿಕಾರಿ, ಶೀಲ್ಭದ್ರ ದತ್ತ ಮತ್ತು ಜಿತೇಂದ್ರ ತಿವಾರಿ ಅವರು ಅಮಿತ್ ಶಾ ಬಂಗಾಳ ಭೇಟಿಯ ಸಮಯದಲ್ಲಿ ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹಗಳಿವೆ.
ಇದನ್ನೂ ಓದಿ: ಬಿಜೆಪಿಗೆ ಸೆಡ್ಡು ಹೊಡೆಯಲು ದೀದಿಯಿಂದ 'ಹೊಸ ಆಸ್ತ್ರ'..!
ಅಮಿತ್ ಶಾ (Amit Shah) ಎರಡು ದಿನಗಳಲ್ಲಿ ಬಹಳ ಕಾರ್ಯಕ್ರಮಗಳನ್ನೊಳಗೊಂಡ ವೇಳಾಪಟ್ಟಿ ಹೊಂದಿದ್ದಾರೆ. ರಾಜಕೀಯ ಚಟುವಟಿಕೆಗಳ ಜೊತೆಗೆ 'ಟೆಂಪಲ್ ರನ್' ಯೋಜನೆ ಹೊಂದಿದ್ದಾರೆ. ಎರಡು ದೇವಾಲಯಗಳಲ್ಲಿ ಪೂಜೆ ನಡೆಸಲಿದ್ದಾರೆ. ರೈತ ಮತ್ತು ಜಾನಪದ ಗಾಯಕನ ಮನೆಯಲ್ಲಿ ಊಟ ಮಾಡಲಿದ್ದಾರೆ. ಅಲ್ಲದೆ ರೋಡ್ ಶೋಗಳು ಮತ್ತು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
Assembly Election) ದೃಷ್ಟಿಯಿಂದ ಹಲವಾರು ಸಭೆಗಳನ್ನು ನಡೆಸುವ ಮೂಲಕ ಪಕ್ಷದ ಮುಖಂಡರಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ಮತ್ತು ರಾಜ್ಯಸಭಾ ಸಂಸದ ಅನಿಲ್ ಬಲೂನಿ ಗೃಹ ಸಚಿವ ಅಮಿತ್ ಶಾ ಭೇಟಿಯ ಬಗ್ಗೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದ್ದಾರೆ.
ಕೊಲ್ಕತ್ತಾದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಶನಿವಾರ ಬೆಳಿಗ್ಗೆ 10:45ಕ್ಕೆ ಗೃಹ ಸಚಿವ ಅಮಿತ್ ಶಾ ಅವರು ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸಲಿದ್ದಾರೆ. ಅದಾದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಲಿದ್ದಾರೆ.
ಇದನ್ನೂ ಓದಿ: ಪರೋಕ್ಷವಾಗಿ ಬಂಗಾಳದಲ್ಲಿ ತುರ್ತುಪರಿಸ್ಥಿತಿ ಹೇರಲು ಅಮಿತ್ ಶಾ ಯತ್ನ- ಟಿಎಂಸಿ
ಮಧ್ಯಾಹ್ನ 12: 30ಕ್ಕೆ ಮದಿನಿಪುರದ ಪ್ರಸಿದ್ಧ ಮಾ ಸಿದ್ಧೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಪಶ್ಚಿಮ ಬಂಗಾಳ ಸೇರಿದಂತೆ ಇಡೀ ದೇಶದ ಏಳಿಗೆಗಾಗಿ ಹಾರೈಸುತ್ತಾರೆ. ಇದರ ನಂತರ ಖುದಿರಾಮ್ ಬೋಸ್‌ನ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಇಲ್ಲಿಂದ ಸುಮಾರು 12 ಕಿ.ಮೀ ದೂರದಲ್ಲಿ, ದೇವತೆ ಮಹಾಮಾಯ ದೇವಸ್ಥಾನದಲ್ಲಿ, ಅವರು 13:25ಕ್ಕೆ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಪ್ರವಾಸದ ಮೊದಲ ದಿನವಾದ ಶನಿವಾರ, ಗೃಹ ಸಚಿವರು ಮದಿನಿಪುರದ ಬೆಲಿಜುರಿ ಗ್ರಾಮಕ್ಕೆ ಭೇಟಿ ನೀಡಲಿದ್ದು, ಮಧ್ಯಾಹ್ನ ಅರ್ಧ ಘಂಟೆಯ ಹೊತ್ತಿಗೆ ರೈತರ ಕುಟುಂಬದಲ್ಲಿ ಊಟ ಮಾಡಲಿದ್ದಾರೆ. ಮಧ್ಯಾಹ್ನ 2: 30ಕ್ಕೆ ಮದಿನಿಪುರ ಕಾಲೇಜು ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ 07: 30ಕ್ಕೆ ಅವರು 'ದಿ ವೆಸ್ಟಿನ್' ಕೋಲ್ಕತ್ತಾದ ಚುನಾವಣಾ ನಿರ್ವಹಣಾ ಕಾರ್ಯಗಳನ್ನು ಕೇಂದ್ರ ಸಚಿವರು, ಸಂಘಟನಾ ಕಾರ್ಯದರ್ಶಿಗಳು, ವಲಯ ಮೇಲ್ವಿಚಾರಕರು ಮತ್ತು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಪರಿಶೀಲಿಸಲಿದ್ದಾರೆ.
ಮರುದಿನ (ಡಿಸೆಂಬರ್ 20) ಗೃಹ ಸಚಿವ ಅಮಿತ್ ಶಾ ಅವರು ವಿಶ್ವ ಭಾರತಿ ವಿಶ್ವವಿದ್ಯಾಲಯ, ಶಾಂತಿ ನಿಕೇತನ್ ಗೆ ಭೇಟಿ ನೀಡಲಿದ್ದಾರೆ ಮತ್ತು ಅಲ್ಲಿನ ರವೀಂದ್ರ ಭವನದಲ್ಲಿ ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರಿಗೆ ಗೌರವ ಸಲ್ಲಿಸಲಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ಅನಿಲ್ ಬಲೂನಿ ತಿಳಿಸಿದ್ದಾರೆ.
ಅಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ನಂತರ ಅವರು ವಿಶ್ವ ಭಾರತೀಯ ವಿಶ್ವವಿದ್ಯಾಲಯದ ಸಂಗೀತ ಭವನಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ವಿಶ್ವ ಭಾರತಿ ವಿಶ್ವವಿದ್ಯಾಲಯದ ಬಾಂಗ್ಲಾದೇಶ ಭವನ ಸಭಾಂಗಣದಲ್ಲಿ ಭಾಷಣ ಮಾಡಲಿದ್ದಾರೆ. ನಂತರ ಅವರು ಬೌಲ್ ಗಾಯಕ ಕುಟುಂಬದೊಂದಿಗೆ ಮಧ್ಯಾಹ್ನ 12: 50ಕ್ಕೆ ಶ್ಯಾಂಬತಿ, ಪರುಲ್ದಂಗ (ಬಿರ್ಭುಮ್) ನಲ್ಲಿ ಊಟ ಮಾಡುತ್ತಾರೆ.