ಭಾರತದ ಬಲ ಹೆಚ್ಚಿಸಿದ ಡಿಆರ್ಡಿಒದ ಪಿನಾಕಾ ರಾಕೆಟ್ ಯಶಸ್ವಿ ಪರೀಕ್ಷೆ
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನಿರ್ಮಿಸಿದ ಪಿನಾಕಾ ರಾಕೆಟ್ ಶತ್ರುಗಳ ಮೇಲೆ ಸಾಕಷ್ಟು ದೂರದವರೆಗೆ ದಾಳಿ ಮಾಡಲು ಸಾಧ್ಯವಾಗುತ್ತದೆ. ಪಿನಾಕಾ ಹಾರಿಸಿದ ಎಲ್ಲಾ ರಾಕೆಟ್‌ಗಳು ನಿಖರವಾದ ಗುರಿ ತಲುಪುವಲ್ಲಿ ಯಶಸ್ವಿಯಾಗಿವೆ.
ನವದೆಹಲಿ: ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಪಿನಾಕಾ ರಾಕೆಟ್‌ನ್ನು ಬುಧವಾರ ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಪರೀಕ್ಷೆಯ ನಂತರ ಭಾರತದ ಮಿಲಿಟರಿ ಸಾಮರ್ಥ್ಯ ಹೆಚ್ಚಾಗಿದೆ. ಪಿನಾಕಾ ಕ್ಷಿಪಣಿಯ ಪರೀಕ್ಷೆಯನ್ನು ಒಡಿಶಾದ ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಲ್ಲಿ ಮಾಡಲಾಗಿದೆ. ಈ ಪರೀಕ್ಷೆಯ ಸಮಯದಲ್ಲಿ ಡಿಆರ್‌ಡಿಆರ್ 6 ರಾಕೆಟ್‌ಗಳನ್ನು ಹಾರಿಸಿತು ಮತ್ತು ಕ್ಷಿಪಣಿ ತನ್ನ ಕಾರ್ಯಾಚರಣೆಯಲ್ಲಿ ಯಶಸ್ವಿಯಾಯಿತು ಎಂದು ಹೇಳಲಾಗಿದೆ.
ಭಾರತದ ಹೆಚ್ಚುತ್ತಿರುವ ಶಕ್ತಿ ಕಂಡು ಬೆಚ್ಚಿಬಿದ್ದ ಚೀನಾ-ಪಾಕ್, 35 ದಿನಗಳಲ್ಲಿ 10 ಕ್ಷಿಪಣಿ ಪರೀಕ್ಷೆ
ಪಿನಾಕಾ ಹಾರಿಸಿದ ಎಲ್ಲಾ ರಾಕೆಟ್‌ಗಳು ನಿಖರವಾಗಿ ಗುರಿ ತಲುಪುವಲ್ಲಿ ಯಶಸ್ವಿಯಾಗಿವೆ. ಪಿನಾಕಾ ಶತ್ರುಗಳ ಮೇಲೆ ಸಾಕಷ್ಟು ದೂರದವರೆಗೆ ದಾಳಿ ಮಾಡಲು ಸಾಧ್ಯವಾಗುತ್ತದೆ. ಈ ರಾಕೆಟ್ ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನಿರ್ಮಿಸಿದೆ. ವರದಿಗಳ ಪ್ರಕಾರ ಈ ಪಿನಾಕಾ ವ್ಯವಸ್ಥೆಯನ್ನು ಹಿಂದಿನ ಪಿನಕಾದಿಂದ ನವೀಕರಿಸಲಾಗಿದೆ. ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಪಿನಾಕಾ ಪರೀಕ್ಷೆಯ ವೀಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ನೀವು ರಾಕೆಟ್‌ನ ಶಕ್ತಿಯನ್ನು ನೋಡಬಹುದು.
'ಚೈನೀಸ್ ಟ್ಯಾಂಕ್'ನ ಬಲದ ಮೇಲೆ ಬಜ್ವಾ, ಆದರೆ ನಮ್ಮ' ಅರ್ಜುನ್ 'ಮುಂದೆ ನಿಲ್ಲಲೂ ಸಾಧ್ಯವಿಲ್ಲ
ಚೀನಾದೊಂದಿಗಿನ ಉದ್ವಿಗ್ನತೆ ನಡುವೆ ಭಾರತದ ಮಿಲಿಟರಿ ಶಕ್ತಿ ಹೆಚ್ಚಳ :
ಭಾರತ-ಚೀನಾ (India China) ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ತನ್ನ ಮಿಲಿಟರಿ ಬಲವನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ, ರಕ್ಷಣಾ ಸಚಿವಾಲಯವು ದೇಶದ ಸೇನೆಗಳ ಬಲವನ್ನು ಹೆಚ್ಚಿಸುತ್ತಿದೆ. ಪರ್ವತ ಪ್ರದೇಶಗಳಲ್ಲಿ ಯುದ್ಧದ ಸಮಯದಲ್ಲಿ ಗುಪ್ತ ಶತ್ರುಗಳ ಮೇಲೆ ದಾಳಿ ಮಾಡಲು ಪಿನಾಕಾ ಕ್ಷಿಪಣಿ ವ್ಯವಸ್ಥೆಯು ಅತ್ಯಂತ ಪರಿಣಾಮಕಾರಿ ಅಸ್ತ್ರವೆಂದು ಸಾಬೀತುಪಡಿಸುತ್ತದೆ. ಇದು ಪಾಕಿಸ್ತಾನ ಮತ್ತು ಚೀನಾದ ಎದೆಯ ನಡುಕ ಹೆಚ್ಚಿಸಿದೆ.