ಉಖ್ರುಲ್: ಪೂರ್ವ ಲೇಹ್ ನಂತರ ಮಣಿಪುರ (Manipur)ದಲ್ಲಿ ಇಂದು (ಬುಧವಾರ) ಭೂಕಂಪ ತಲ್ಲಣ ಸೃಷ್ಟಿಸಿದೆ. ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಮುಂಜಾನೆ 3.32ರ ಸುಮಾರಿಗೆ ಭೂಕಂಪದ (Earthquake) ಅನುಭವವಾಗಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ ಭೂಕಂಪದ ತೀವ್ರತೆಯನ್ನು ರಿಕ್ಟರ್ ಪ್ರಮಾಣದಲ್ಲಿ 4.3 ಎಂದು ಅಳೆಯಲಾಗಿದೆ.


Leh)ನಲ್ಲಿ ಮಂಗಳವಾರ ಲಡಾಕ್‌ನಲ್ಲಿ ಭೂಕಂಪ ಸಂಭವಿಸಿದೆ. ಬೆಳಿಗ್ಗೆ 5.13ಕ್ಕೆ ಪೂರ್ವ ಲೇಹ್‌ನಲ್ಲಿ ನಡುಕದ ಅನುಭವವಾಯಿತು. ಭೂಕಂಪದ ಕೇಂದ್ರಬಿಂದು ಲೇಹ್‌ನಿಂದ ಪೂರ್ವಕ್ಕೆ 174 ಕಿಲೋಮೀಟರ್ ದೂರದಲ್ಲಿತ್ತು. ತೀವ್ರತೆಯನ್ನು 5.1 ಎಂದು ಅಳೆಯಲಾಗಿದೆ. 


Earthquake: ನೇಪಾಳದಲ್ಲಿ ಕಂಪಿಸಿದ ಭೂಮಿ, ಬಿಹಾರದ ಹಲವು ಜಿಲ್ಲೆಗಳಲ್ಲಿಯೂ ಕೂಡ ಭೂಕಂಪದ ಅನುಭವ


COMMERCIAL BREAK
SCROLL TO CONTINUE READING

ಇದಕ್ಕೂ ಮುನ್ನ ಸೆಪ್ಟೆಂಬರ್ 28ರಂದು ಜಮ್ಮು ಮತ್ತು ಕಾಶ್ಮೀರ (Jammu and Kashmir)ದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಸೆಪ್ಟೆಂಬರ್ 8 ರಂದು ಲೇಹ್‌ನಲ್ಲಿ ಭೂಕಂಪನವೂ ಉಂಟಾಯಿತು. ಆ ಸಮಯದಲ್ಲಿ ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 4.4 ರಷ್ಟಿತ್ತು.