ಅಮರಾವತಿ: ಸ್ಥಳೀಯ ವೈದ್ಯಕೀಯ ಉಪಕರಣಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಆಂಧ್ರಪ್ರದೇಶ ಮೆಡ್ಟೆಕ್ ವಲಯ (AMTZ) ತಯಾರಿಸಿದ ಕರೋನವೈರಸ್   (Coronavirus) ಕೋವಿಡ್ -19 ಪರೀಕ್ಷಾ ಕಿಟ್‌ಗಳನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ  (Jagan Mohan Reddy) ಅವರು ಏಪ್ರಿಲ್ 8 ಬಿಡುಗಡೆ ಮಾಡಿದರು.


COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೈಗಾರಿಕಾ ಸಚಿವ ಮೆಕಪತಿ ಗೌತಮ್ ರೆಡ್ಡಿ, AMTZ ಈಗ ದಿನಕ್ಕೆ 2000 ಪರೀಕ್ಷಾ ಕಿಟ್‌ಗಳನ್ನು ತಯಾರಿಸುತ್ತಿದೆ ಮತ್ತು ಕಂಪನಿಯು ಲೇಸರ್ ವೆಲ್ಡಿಂಗ್ ಉಪಕರಣಗಳನ್ನು ಪಡೆದ ನಂತರ ದಿನಕ್ಕೆ 25 ಸಾವಿರ ಯುನಿಟ್‌ಗಳವರೆಗೆ ಉತ್ಪಾದನೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದರು.


ಎಲ್ಲರೂ ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ: ಡಾ. ಅಶ್ವತ್ಥನಾರಾಯಣ ಮನವಿ


ಏಪ್ರಿಲ್ 15 ರಿಂದ ಭಾರತದಲ್ಲಿ ಮೊದಲ ಬಾರಿಗೆ AMTZ ವೆಂಟಿಲೇಟರ್‌ಗಳನ್ನು ಸಹ ಉತ್ಪಾದಿಸುತ್ತದೆ. ಇದು ತಿಂಗಳಿಗೆ 3000 ವೆಂಟಿಲೇಟರ್‌ಗಳೊಂದಿಗೆ ಪ್ರಾರಂಭವಾಗಲಿದೆ, ಅದು ಶೀಘ್ರದಲ್ಲೇ ತಿಂಗಳಿಗೆ 5000 ಯುನಿಟ್‌ಗಳವರೆಗೆ ಸ್ಕೇಲ್ ಆಗುತ್ತದೆ. AMTZ ಕೇವಲ ರಾಜ್ಯದ ಬೇಡಿಕೆಯನ್ನು ಪೂರೈಸುವುದು ಮಾತ್ರವಲ್ಲದೆ ರಾಷ್ಟ್ರೀಯ ಬೇಡಿಕೆಯನ್ನು ಪೂರೈಸಲಿದ್ದು ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವೆಂಟಿಲೇಟರ್‌ಗಳನ್ನು ಸರಬರಾಜು ಮಾಡುತ್ತದೆ ಎಂದರು.


'ಮಾನವೀಯತೆ ನನ್ನ ಧರ್ಮ, ಕೊಟ್ಟ ಮಾತು ಉಳಿಸಿಕೊಳ್ಳುವುದೇ ನನ್ನ ಜಾತಿ': ಸಿಎಂ ಜಗನ್ ಮೋಹನ್ ರೆಡ್ಡಿ


ಈ ಪ್ರತಿ ಕಿಟ್‌ನೊಂದಿಗೆ ಸುಮಾರು 20 ಪರೀಕ್ಷೆಗಳನ್ನು ನಡೆಸಬಹುದಾಗಿದ್ದು ಇದರ ಮೌಲ್ಯ 1200 ರೂ. ಮೇ ವೇಳೆಗೆ 7.5 ಲಕ್ಷ ಕಿಟ್‌ಗಳನ್ನು ತಯಾರಿಸಿ ಇತರ ರಾಜ್ಯಗಳಿಗೂ ತಲುಪಿಸಲಾಗುವುದು. ಇದಲ್ಲದೆ, ಕೇಂದ್ರ ಸರ್ಕಾರವು ಈಗಾಗಲೇ 3,500 ವೆಂಟಿಲೇಟರ್‌ಗಳಿಗೆ ಆದೇಶಗಳನ್ನು ನೀಡಿದೆ ಎಂದವರು ತಿಳಿಸಿದರು.


ರಾಜ್ಯದಲ್ಲಿ ದಿನಕ್ಕೆ 4,000 ಪರೀಕ್ಷೆಗಳನ್ನು ನಡೆಸಲು ಕಿಟ್‌ಗಳ ಪೂರೈಕೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಯೋಜಿಸುತ್ತಿದೆ. ಈ ಕಿಟ್‌ಗಳನ್ನು ಬಳಸಿಕೊಂಡು ಡಿಎನ್‌ಎ, ಆರ್‌ಎನ್‌ಎ, ಪಿಸಿಆರ್ ಪರೀಕ್ಷೆಗಳನ್ನು ಸಹ ಮಾಡಬಹುದು ಮತ್ತು ಫಲಿತಾಂಶವನ್ನು 55 ನಿಮಿಷಗಳಲ್ಲಿ ಕಾಣಬಹುದು ಎಂದು ಅವರು ಮಾಹಿತಿ ಒದಗಿಸಿದರು.