ಆಂಧ್ರಪ್ರದೇಶ: ‘ನಿಜವಾದ ಪ್ರೀತಿಗೆ ಎಂದಿಗೂ ಸಾವಿಲ್ಲ’ ಎಂಬುದಕ್ಕೆ ಆಂಧ್ರಪ್ರದೇಶ(Andhra Pradesh)ದ ಪ್ರಕಾಶಂ ಜಿಲ್ಲೆಯ ಮಹಿಳೆಯೊಬ್ಬರು ನಿದರ್ಶನವಾಗಿದ್ದಾರೆ. ತನ್ನ ಮೃತ ಪತಿಯ ನೆನಪಿಗಾಗಿ ಇವರು ದೇವಸ್ಥಾನವನ್ನೇ ನಿರ್ಮಿಸಿದ್ದು, ಪ್ರತಿದಿನವೂ ಗಂಡನ ಪ್ರತಿಮೆಗೆ ಪೂಜೆ ನೆರವೇರಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಮಹಿಳೆಯೊಬ್ಬರು ಅಮೃತಶಿಲೆಯಲ್ಲಿ ಪತಿಯ ಪ್ರತಿಮೆ(Husband Idol) ಸ್ಥಾಪಿಸಿ ಅದಕ್ಕೆ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ವರದಿಗಳ ಪ್ರಕಾರ ಪ್ರಕಾಶ್ ಅಂಕಿರೆಡ್ಡಿ ಮತ್ತು ಪದ್ಮಾವತಿ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ಕಳೆದ 13 ವರ್ಷಗಳಿಂದ ಸ್ಥಳೀಯ ದೇವಸ್ಥಾನವೊಂದರಲ್ಲಿ ಪ್ರಕಾಶ್ ಪೂಜಾರಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ದುರಾದೃಷ್ಟವಶಾತ್ ಕಳೆದ 4 ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಅವರು ಸಾವನ್ನಪ್ಪಿದ್ದರು. ಪತಿ ಕಳೆದುಕೊಂಡ ಪತ್ನಿ ಪದ್ಮಾವತಿಯವರಿಗೆ ದಿಕ್ಕೇ ತೋಚದಂತಾಗಿದೆ.


ಇದನ್ನೂ ಓದಿ: Covishield: ಕೋವಿಶೀಲ್ಡ್‌ನ ಬೂಸ್ಟರ್ ಡೋಸ್ ಅನ್ನು ಯಾವಾಗ ತೆಗೆದುಕೊಳ್ಳಬೇಕು?


ಭಾರತದ ಈ ರಾಜ್ಯದಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುವುದಿಲ್ಲ: ಕಾರಣ ಇಲ್ಲಿದೆ…


ಶಾಶ್ವತವಾದ ಪ್ರೀತಿ ಮತ್ತು ಭಕ್ತಿಯ ಈ ಸಂಗತಿ ಅನೇಕ ನೆಟಿಜನ್‌ಗಳ ಮನಕಲಕಿದೆ. ಅನೇಕರು ಭಾವುಕರಾಗಿ ಕಾಮೆಂಟ್ ಮಾಡಿದ್ದಾರೆ. ಇಂತಹ ಆದರ್ಶ ದಂಪತಿಯ ಪುತ್ರನಾಗಿ ಜನಿಸಿದ್ದು ನನ್ನ ಪುಣ್ಯ ಅಂತಾ ಪದ್ಮಾವತಿಯವರ ಪುತ್ರ ಶಿವಶಂಕರ್ ರೆಡ್ಡಿ ಹೇಳಿಕೊಂಡಿದ್ದಾರೆ. ಇದೇ ರೀತಿಯ ಘಟನೆಯಲ್ಲಿ ಕರ್ನಾಟಕ(Karnataka) ಮೂಲದ ಉದ್ಯಮಿಯೊಬ್ಬರು ತಮ್ಮ ದಿವಂಗತ ಪತ್ನಿಯ ಸವಿನೆನಪಿಗಾಗಿ ಮೇಣದ ಪತ್ರಿಮೆ ನಿರ್ಮಿಸಿ ಸುದ್ದಿಯಾಗಿದ್ದರು. ಹೊಸದಾಗಿ ನಿರ್ಮಿಸಿದ ಮನೆಯ ಗೃಹಪ್ರವೇಶ ಸಮಾರಂಭಕ್ಕೆ ತನ್ನಿಬ್ಬರು ಹೆಣ್ಣುಮಕ್ಕಳಿಗೆ ಅಮ್ಮನಿಲ್ಲದ ಕೊರಗು ಕಾಡಬಾರದೆಂದು ಪತ್ನಿಯ ಮೇಣದ ಪ್ರತಿಮೆಯನ್ನು ಸ್ಥಾಪಿಸಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ