ನವದೆಹಲಿ: AIMIM ಮುಖ್ಯಸ್ಥ ಅಸದುದ್ದೀನ್ ಒವೈಸಿ (Asaduddin Owaisi) ಹಿಂದುತ್ವವನ್ನು ಗುರಿಯಾಗಿಸಿ ಮತ್ತೊಮ್ಮೆ ವಿವಾದಾತ್ಮಕ ಟಿಪ್ಪಣಿಯೊಂದನ್ನು ಮಾಡಿದ್ದಾರೆ. ಕೇವಲ ಒಂದೇ ಸಮುದಾಯದ ಬಳಿ ರಾಜಕೀಯ ಶಕ್ತಿ ಇರಬೇಕು ಎಂಬ ಸುಳ್ಳಿನ ಆಧಾರದ ಮೇಲೆ ಹಿಂದುತ್ವ ನಿರ್ಮಾಣಗೊಂಡಿದೆ. ಅಷ್ಟೇ ಅಲ್ಲ ತಮ್ಮ ವಿವಾದಾತ್ಮಕ ಟ್ವೀಟ್ ನಲ್ಲಿ RSS ಮೇಲೂ ಕೂಡ ಟಿಪ್ಪಣಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- Babri Masjid Demolition ತೀರ್ಪಿನ ಕುರಿತು ಅಸದುದ್ದೀನ್ ಒವೈಸಿ ಹೇಳಿದ್ದೇನು?


ಆತ್ಮರಕ್ಷಣೆಯ ಪ್ರಯತ್ನ
ಈ ಕುರಿತು ಸಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡಿರುವ ಒವೈಸಿ, 'ಒಂದು ಸಮುದಾಯಕ್ಕೆ ಮಾತ್ರ ಎಲ್ಲಾ ರಾಜಕೀಯ ಶಕ್ತಿ ಇರಬೇಕು ಮತ್ತು ಮುಸ್ಲಿಮರಿಗೆ ರಾಜಕೀಯದಲ್ಲಿ ಭಾಗವಹಿಸುವ ಹಕ್ಕು ಇರಬಾರದು ಎಂಬ ಸುಳ್ಳಿನ ಆಧಾರದ ಮೇಲೆ ಹಿಂದುತ್ವವನ್ನು ನಿರ್ಮಿಸಲಾಗಿದೆ' ಎಂದು ಹೇಳಿದ್ದಾರೆ. ಸಂಸತ್ತು ಮತ್ತು ಶಾಸಕಾಂಗ ಸಭೆಗಳಲ್ಲಿ ನಮ್ಮ ಉಪಸ್ಥಿತಿಯು ಹಿಂದುತ್ವದಿಂದ ನಮ್ಮನ್ನು ರಕ್ಷಿಸಿಕೊಳ್ಳುವ ನಮ್ಮ ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದಾರೆ.


"Ram Mandir ಕುರಿತು ಬಾಯ್ಮುಚ್ಚಿ, ಇಲ್ಲದಿದ್ದರೆ ಪಾಕಿಸ್ತಾನಕ್ಕೆ ಹೊರಟು ಹೋಗಿ" ಒವೈಸಿಗೆ ತಿರುಗೇಟು ನೀಡಿದ ಶಿಯಾ ವಕ್ಫ್ ಬೋರ್ಡ್ ಮುಖ್ಯಸ್ಥ


ಟ್ವೀಟ್ ಗೆ ಪ್ರತ್ಯುತ್ತರವಾಗಿ ಟ್ವೀಟ್
ತಮ್ಮ ಟ್ವೀಟ್ ನಲ್ಲಿ ಎಐಎಂಐಎಂ ಮುಖ್ಯಸ್ಥ RSS ಅನ್ನು ಕೂಡ ಗುರಿಯಾಗಿಸಿದ್ದಾರೆ. 'ನಾವು ಸಂಸತ್ತು ಅಥವಾ ವಿಧಾನಸಭೆಯನ್ನು ಸುಲಭವಾಗಿ ತೊರೆದರೆ ಸಂಘಕ್ಕೆ ಇದರಿಂದ ತುಂಬಾ ಖುಷಿ ಸಿಗಲಿದೆ' ಎಂದು ಅವರು ಹೇಳಿದ್ದಾರೆ.ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಒವೈಸಿ ಈ ವಿವಾದಾತ್ಮಕ  ಹೇಳಿಕೆ ನೀಡಿದ್ದು, ಅದರಲ್ಲಿ ಅವರಿಗೆ ಸಂಬಂಧಿಸಿದ ಸುದ್ದಿಯನ್ನು ಉಲ್ಲೇಖಿಸಲಾಗಿದೆ. ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ ಅವರು,' ಒಂದು ಸಮುದಾಯಕ್ಕೆ ಮಾತ್ರ ರಾಜಕೀಯ ಅಧಿಕಾರ ಇರಬೇಕು ಎಂಬ ಸುಳ್ಳನ್ನು ಆಧರಿಸಿ ಹಿಂದುತ್ವವಿದೆ' ಎಂದು ಹೇಳಿದ್ದಾರೆ.


ಇದನ್ನು ಓದಿ- 'ಬಾಬ್ರಿ ಮಸೀದಿ ಇತ್ತು ಮತ್ತು ಇರಲಿದೆ, ಇನ್ಷಾ ಅಲ್ಲಾಹ್': Owaisi


ಯಾವ ಅವಕಾಶವನ್ನು ಬಿಡುವುದಿಲ್ಲ
ನಿಜ ಹೇಳುವುದಾದರೆ, ಅಸದುದ್ದೀನ್ ಒವೈಸ್ ಈ ರೀತಿ ಪ್ರಚೋದನಾತ್ಮಕ ಹೇಳಿಕೆ ನೀಡುವುದು ಇದೆ ಮೊದಲಲ್ಲ. ಇದಕ್ಕೂ ಮೊದಲು ಕೂಡ ಅಸದುದ್ದೀನ್ ಒವೈಸಿ ಪ್ರಚೋದನಕಾರಿ ಮತ್ತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಹಿಂದೂ ಮತ್ತು ಹಿಂದುತ್ವದ ವಿರುದ್ಧ ವಿಷವನ್ನು ಹೊರಹಾಕಲು ಅವರು ಯಾವುದೇ ಅವಕಾಶವನ್ನು ಬಿಡುವುದಿಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಇದೆ ವೇಳೆ ಅವರು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರೀಯ ಜನಸಂಖ್ಯೆಯನ್ನು ಮಾಡುವ ವೇಳಾಪಟ್ಟಿ ಅಂತಿಮವಾಗಿದೆ, ನಂತರ ಅದರ ವಿರೋಧದ ವೇಳಾಪಟ್ಟಿಯನ್ನು ಕೂಡ ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಎಐಐಎಂ ಮುಖ್ಯಸ್ಥರು ಹೇಳಿದ್ದಾರೆ.


ಇದನ್ನು ಓದಿ- CAA-NRC ಕಾಯ್ದೆಗಳಿಗೆ ವಿರೋಧ: ಶಾ-ಮೋದಿ ವಿರುದ್ಧ ಧ್ವನಿ ಎತ್ತಲು ಒವೈಸಿ ಕರೆ


ಪೌರತ್ವ ರಾಷ್ಟ್ರೀಯ ದಾಖಲಾತಿ (NRC)ಯ ಪ್ರಾಥಮಿಕ ಹಂತವೇ ಈ  ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಎಂದು ಅಸದುದ್ದೀನ್ ಒವೈಸಿ ಹೇಳಿದ್ದಾರೆ.