ನವದೆಹಲಿ: ರಾಮ ಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು AIMIM ಮುಖ್ಯಸ್ಥಾ ಅಸದುದ್ದೀನ್ ಒವೈಸಿಗೆ ಭಾರಿಯಾಗಿ ಪರಿಣಮಿಸಿದೆ. ಪ್ರಸ್ತುತ ಶಿಯಾ ವಕ್ಫ್ ಬೋರ್ಡ್ ನ ಚೆರ್ ಮನ್ ಸಯ್ಯದ್ ವಸೀಮ್ ರಿಜ್ವಿ, ಒವೈಸಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಒವೈಸಿ ಹೇಳಿಕೆಗೆ ತಿರುಗೇಟು ನೀಡಿರುವ ರಿಜ್ವಿ, ಒವೈಸಿ ಪಾಕಿಸ್ತಾನಕ್ಕೆ ಹೋಗಬೇಕು ಹಾಗೂ ಈ ದೇಶದ ಮುಸ್ಲಿಮರಿಗೆ ಶಾಂತಿಯಿಂದ ಇರಲು ಬಿಡಬೇಕು ಎಂದಿದ್ದಾರೆ.
ವಿಡಿಯೋ ಸಂದೇಶ ಜಾರಿಗೊಳಿಸಿದ ರಿಜ್ವಿ
ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ರಿಜ್ವಿ, ರಾಮ್ ಮಂದಿರದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಮೌನವಾಗಿರಲು ರಿಜ್ವಿ ಒವೈಸಿಗೆ ಸೂಚನೆ ನೀಡಿದ್ದಾರೆ. ಎಲ್ಲರೂ ಭಾರತೀಯ ಸಂವಿಧಾನದ ನಿಯಮಗಳಿಗೆ ಬದ್ಧರಾಗಿದ್ದಾರೆ ಎಂದು ರಿಜ್ವಿ ಹೇಳಿದ್ದಾರೆ.ಶತಮಾನಗಳಿಂದ ಹಿಂದುಗಳಿಗಾಗಿದ್ದ ರಾಮ್ ದೇವಾಲಯ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ನಿಜಾರ್ಥದಲ್ಲಿ ದಾರಿ ಮಾಡಿಕೊಟ್ಟಿದೆ ಎಂದು ಅವರು ಹೇಳಿದ್ದಾರೆ.
"ಹಿಂದೂ-ಮುಸ್ಲಿಂ ರಾಜಕೀಯ ಬಂದ್ ಮಾಡಿ ಒವೈಸಿ"
ಅಷ್ಟೇ ಅಲ್ಲ ಹಿಂದೂ-ಮುಸ್ಲಿಂ ರಾಜಕೀಯವನ್ನು ನಿಲ್ಲಿಸುವಂತೆ ರಿಜ್ವಿ ಒವೈಸಿಗೆ ಸಲಹೆ ನೀಡಿದ್ದಾರೆ. ಇದರಿಂದ ರಕ್ತಪಾತದ ಹೊರತು ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂದು ರಿಜ್ವಿ ಹೇಳಿದ್ದರೆ. "ತಾಲಿಬಾನ್ ನಾಯಕರಾದ ಮುಲ್ಲಾ ಮೊಹಮ್ಮದ್ ಒಮರ್ ಮತ್ತು ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಹತ್ಯೆಯಾಗಿದ್ದಾರೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಂತಹ ದೇಶಗಳಿಗೆ ನಿಮ್ಮ ಅವಶ್ಯಕತೆ ಇದೇ. ಭಾರತದ ಮುಸ್ಲಿಮರಿಗೆ ಶಾಂತಿಯಿಂದ ಬದುಕಲು ಬಿಡಿ" ಎಂದು ರಿಜ್ವಿ ಹೇಳಿದ್ದಾರೆ.
ಒವೈಸಿ ಹೇಳಿದ್ದೇನು?
ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮವನ್ನು ಮುಂದಿಟ್ಟು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿದ್ದ ಒವೈಸಿ, ಮೋದಿ ಭೂಮಿ ಪೂಜೆಗೆ ಹೋಗಬಾರದಿತ್ತು. ಪ್ರಧಾನಿ ಯಾವುದೇ ಒಂದು ವಿಶೇಷ ಸಮುದಾಯಕ್ಕೆ ಸೇರಿದವರಾಗಿಲ್ಲ. ಆಗಸ್ಟ್ 15ನ್ನು ಪ್ರಧಾನಿಗಳು ಆಗಸ್ಟ್ 5ಕ್ಕೆ ಸೇರಿಸಿದ್ದಾರೆ ಎಂದು ಒವೈಸಿ ಆರೋಪಿಸಿದ್ದರು,