ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಶ್ರೀ ರಾಮ್ ದೇವಾಲಯ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಬೆಳಗ್ಗೆ ಭವ್ಯ ರಾಮ್ ಮಂದಿರಕಾಗಿ ನಡೆಯಲಿರುವ ಭೂಮಿ ಪೂಜೆಗೂ ಮೊದಲು ಟ್ವೀಟ್ ಮಾಡಿದ್ದಾರೆ. "ಬಾಬ್ರಿ ಮಸೀದಿ ಇತ್ತು ಮತ್ತು ಇರಲಿದೆ, ಇನ್ಷಾ ಅಲ್ಲಾಹ್" ಎಂದು ಅವರು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ, ಜೊತೆಗೆ ಅವರು ಬಾಬರಿ ಮಸೀದಿ ಮತ್ತು ಬಾಬರಿ ಮಸೀದಿಗಳ ಧ್ವಂಸಕ್ಕೆ ಕುರಿತಾದ ಪ್ರತಿಯೊಂದು ಭಾವಚಿತ್ರಗಳನ್ನು ಹಂಚಿಕೊಂಡಿದ್ದಾರೆ.
#BabriMasjid thi, hai aur rahegi inshallah #BabriZindaHai pic.twitter.com/RIhWyUjcYT
— Asaduddin Owaisi (@asadowaisi) August 5, 2020
ವಿವಾದಾತ್ಮಕ ರಾಮ್ ಮಂದಿರ- ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 9, 2019 ರಂದು ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪು ಪ್ರಕಟಿಸಿತ್ತು. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ವಿವಾದಿತ ಭೂಮಿಯನ್ನು ರಾಮ್ ಲಲ್ಲಾಗೆ ಹಸ್ತಾಂತರಿಸಿದೆ. ಅಲ್ಲದೆ, ಮಸೀದಿ ನಿಮಾನಕ್ಕಾಗಿ ಅಯೋಧ್ಯೆಯಲ್ಲಿ ಐದು ಎಕರೆ ಭೂಮಿಯನ್ನು ನೀಡುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿತ್ತು,
ಪ್ರಿಯಾಂಕಾಗೆ ತಿರುಗೇಟು ನೀಡಿದ ಒವೈಸಿ
ಇದಕ್ಕೂ ಒಂದು ದಿನ ಮೊದಲು ಹೇಳಿಕೆ ನೀಡಿದ್ದ AIMIM ಮುಖ್ಯಸ್ಥ ಅಸದುದ್ದೀನ್ ಒವೈಸಿ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾಡ್ರಾ ಮೇಲೆ ತಮ್ಮ ಪಟ್ಟು ಬಿಗಿಗೊಳಿಸಿದ್ದರು. ಪ್ರಿಯಾಂಕಾಗೆ ತಿರುಗೇಟು ನೀಡಿದ್ದ ಒವೈಸಿ, "ಪ್ರಸ್ತುತ ಅವರು ನಾಟಕವಾಡುತ್ತಿಲ್ಲ, ಹಿಂದುತ್ವ ವಿಚಾರಧಾರೆಯನ್ನು ತನ್ನದಾಗಿಸಿಕೊಳ್ಳಲು ಬಯಸುತ್ತಿದ್ದಾರೆ. ಆದರೆ, ಭ್ರಾತೃತ್ವದ ವಿಚಾರದಲ್ಲಿ ಪೊಳ್ಳ ಹೇಳಿಕೆಗಳನ್ನು ಹೇಳುವುದು ಅವರು ಬಿಡಬೇಕು" ಎಂದಿದ್ದಾರೆ.
ರಾಮ ಜನ್ಮ ಭೂಮಿ ಪೂಜೆಯ ಕಾರ್ಯಕ್ರಮವನ್ನು ಬೆಂಬಲಿಸಿ ಹೇಳಿಕೆ ನೀಡಿದ್ದ ಪ್ರಿಯಾಂಕಾ ಗಾಂಧಿ, ಶ್ರೀರಾಮ ಎಲ್ಲರಲ್ಲೂ ಇದ್ದಾನೆ, ಶ್ರೀರಾಮ ಎಲ್ಲರ ಜೊತೆಗಿದ್ದಾರೆ. ಸರಳತೆ ಸಾಹಸ, ಸಂಯಮ, ತ್ಯಾಗ, ವಚನಬದ್ಧತೆ, ದೀನಬಂಧು ಇತ್ಯಾದಿ ರಾಮನಾಮದ ಸಾರ. ಮುಂದುವರೆದು ಮಾತನಾಡಿದ್ದ ಪ್ರಿಯಾಂಕಾ, ರಾಮಲಲ್ಲಾ ಮಂದಿರದ ಭೂಮಿಪೂಜೆಯ ಕಾರ್ಯಕ್ರಮ ರಾಷ್ಟ್ರೀಯ ಏಕತೆ, ಭ್ರಾತೃತ್ವ ಹಾಗೂ ಸಂಸ್ಕೃತಿಕ ಸಮಾಗಮದ ಸಂಗತಿಯಾಗಿದೆ ಎಂದು ಹೇಳಿದ್ದರು.
ಮಧ್ಯಾಹ್ನ 12ಗಂಟೆ 40ನಿಮಿಷಕ್ಕೆ ಭೂಮಿ ಪೂಜೆ
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ 12.40 ಕ್ಕೆ ಅಯೋಧ್ಯೆಯಲ್ಲಿ ರಾಮ್ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಸಲಿದ್ದಾರೆ. ಇಂದು ಬೆಳಿಗ್ಗೆ 6:00 ರಿಂದ ಟ್ರಾಫಿಕ್ ಡೈವರ್ಶನ್ ಜಾರಿಗೆ ತರಲಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಹೆಲಿಕಾಪ್ಟರ್ ಲಖನೌನಿಂದ ಅಯೋಧ್ಯೆಗೆ ಹೋಗದಿದ್ದರೆ ಪಿಎಂ ಮೋದಿ ರಸ್ತೆ ಮಾರ್ಗದ ಮೂಲಕ ಅಯೋಧ್ಯೆಗೆ ತಲುಪಲಿದ್ದಾರೆ ಎನ್ನಲಾಗಿದೆ.