ನವದೆಹಲಿ : ದುರದೃಷ್ಟಕರ ಘಟನೆಯೊಂದರಲ್ಲಿ, ಬಿಹಾರದ ಲಖಿಸರಾಯ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 333 ರಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬದ 5 ಸದಸ್ಯರು ಸಾವನ್ನಪ್ಪಿದ್ದಾರೆ.


COMMERCIAL BREAK
SCROLL TO CONTINUE READING

ಹಿಂದೂಸ್ತಾನ್ ಟೈಮ್ಸ್ ವರದಿಗಳ ಪ್ರಕಾರ, ಸುಶಾಂತ್ ಸಿಂಗ್(Sushant Singh Rajput) ಅವರ ಕುಟುಂಬ ಪ್ರಯಾಣಿಸುತ್ತಿದ್ದ ವಾಹನವು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ವರದಿಯ ಪ್ರಕಾರ, ಅವರು ಗೀತಾ ದೇವಿ(Geeta Devi)ಯ ಅಂತಿಮ ವಿಧಿಗಳಲ್ಲಿ ಭಾಗವಹಿಸಿದ ನಂತರ ಪಾಟ್ನಾದಿಂದ ಹಿಂತಿರುಗುತ್ತಿದ್ದರು. ಗೀತಾ ದೇವಿ ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿ ಒಪಿ ಸಿಂಗ್ ಅವರ ಸಹೋದರಿ, ಅವರು ಸುಶಾಂತ್ ಸಿಂಗ್ ರಜಪೂತ್ ಅವರ ಸೋದರ ಮಾವ.


ಇದನ್ನೂ ಓದಿ : Kangana Ranaut:'ಭಿಕ್ಷೆಯ ಸ್ವಾತಂತ್ರ್ಯ' ಹೇಳಿಕೆಯ ಬಳಿಕ ಮತ್ತೊಮ್ಮೆ ಮಹಾತ್ಮಾ ಗಾಂಧಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕಂಗನ ರಣಾವತ್


ಘಟನೆಯ ಬಗ್ಗೆ ಮಾಹಿತಿ ನೀಡಿದ ಲಖಿಸರಾಯ್ ಪೊಲೀಸ್ ಅಧೀಕ್ಷಕ (SP) ಸುಶೀಲ್ ಕುಮಾರ್, ವಾಹನಗಳ ಮಧ್ಯ ಭಾರಿ ಡಿಕ್ಕಿಯಾಗಿದೆ. ಹತ್ತು ಜನರು ಪ್ರಯಾಣಿಸುತ್ತಿದ್ದ ಸುಮೋ (SUV) ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಸುಮೋ ಚಾಲಕ ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ. ಈಗ ಅವರನ್ನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು  ತಿಳಿಸಿದ್ದಾರೆ.


ಗಾಯಗೊಂಡಿರುವ ಬಲ್ಮುಕುಂದ್ ಸಿಂಗ್ ಮತ್ತು ದಿಲ್ ಖುಷ್ ಸಿಂಗ್ ಅವರನ್ನು ಚಿಕಿತ್ಸೆಗಾಗಿ ಪಾಟ್ನಾಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದ ಇಬ್ಬರಾದ ಬಾಲ್ಮಿಕಿ ಸಿಂಗ್ ಮತ್ತು ತೋನು ಸಿಂಗ್ ಅವರನ್ನು ಲಖಿಸಾರೈ ಜಿಲ್ಲಾಸ್ಪತ್ರೆ(Lakhisarai District Hospital)ಗೆ ದಾಖಲಿಸಲಾಗಿದ್ದು, ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.


ಲಾಲ್ಜಿತ್ ಸಿಂಗ್ (brother-in-law of OP Singh), ಅವರ ಇಬ್ಬರು ಮಕ್ಕಳಾದ ಅಮಿತ್ ಶೇಖರ್, ರಾಮ್ ಚಂದ್ರ ಸಿಂಗ್, ಬೇಬಿ ದೇವಿ, ಅನಿತಾ ದೇವಿ ಮತ್ತು ಚಾಲಕ ಪ್ರೀತಮ್ ಕುಮಾರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.


ಇದನ್ನೂ ಓದಿ : Puneet Rajkumar : ಪುನೀತ್ ರಾಜಕುಮಾರ್ ಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ!


ಕಳೆದ ವರ್ಷ ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್(Sushant Singh Rajput) ಬಾಂದ್ರಾ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರು. ಜುಲೈ 28 ರಂದು ಬಿಹಾರದಲ್ಲಿ ನಟಿ ರಿಯಾ ಚಕ್ರವರ್ತಿ ವಿರುದ್ಧ ರಜಪೂತ್ ಅವರ ತಂದೆ ಕೆಕೆ ಸಿಂಗ್ ಅವರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ ನಂತರ ಇಡಿ ಕಳೆದ ವರ್ಷ ಜುಲೈ 31 ರಂದು ದಿವಂಗತ ನಟನ ಸಾವಿನ ಪ್ರಕರಣದಲ್ಲಿ ಜಾರಿ ಪ್ರಕರಣದ ಮಾಹಿತಿ ವರದಿಯನ್ನು ದಾಖಲಿಸಿತ್ತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.