ಅಯೋಧ್ಯೆ: ರಾಮ ಭಕ್ತರಿಗೆ ಇದು ಸಿಹಿ ಸುದ್ದಿ. ಪ್ರಪಂಚದ ಯಾವುದೇ ಮೂಲೆಯಿಂದಲೂ ರಾಮಭಕ್ತರು ಇನ್ನು ವಿಮಾನದಲ್ಲಿ ಅಯೋಧ್ಯೆಗೆ ಬರಬಹುದು. ಅಸಂಖ್ಯ ಭಕ್ತರು ಕಾತರಿಸುತ್ತಿರುವ ಆ ದಿನಗಳು ಶೀಘ್ರದಲ್ಲೇ ನನಸಾಗಲಿವೆ.  ಅಂದರೆ, ಅಯೋಧ್ಯೆಗೆ (Ayodhya) ಇನ್ನು ಎಲ್ಲರೂ ವಿಮಾನದಲ್ಲಿ ಬರಬಹುದು. ಶೀಘ್ರದಲ್ಲೇ ಇಲ್ಲಿ ವಿಮಾನ ಯಾನ ಸಂಚಾರ ಆರಂಭವಾಗಲಿದೆ. ಈಗ ಅಯೋಧ್ಯೆಯಲ್ಲಿ ವಿವಿಐಪಿ (VVIP) ವಿಮಾನಗಳಿಗೆ ಮಾತ್ರ ಅವಕಾಶಗಳಿವೆ.


COMMERCIAL BREAK
SCROLL TO CONTINUE READING

ಮರ್ಯಾದಾ ಪುರುಷೋತ್ತಮ ಶ್ರೀರಾಮ ವಿಮಾನ ನಿಲ್ದಾಣ :
ಅಯೋಧ್ಯೆಯ (Ayodhya) ವಿಮಾನ ನಿಲ್ದಾಣಕ್ಕೆ ಈಗಾಗಲೇ ಮರ್ಯಾದಾ ಪುರುಷೋತ್ತಮ ಶ್ರೀರಾಮ ವಿಮಾನ ನಿಲ್ದಾಣ (Maryada Purushottam Sriram Airport) ಎಂದು ಮರು ನಾಮಕರಣ ಮಾಡಲಾಗಿದೆ. ಜೊತೆಗೆ ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಕೇಂದ್ರ ಸರ್ಕಾರ (Central government)ಈಗಾಗಲೇ ಅನುಮೋದನೆ ನೀಡಿದೆ. ಇಷ್ಟೇ ಅಲ್ಲದೆ, ಯೋಗಿ ಸರ್ಕಾರ ಈಗಾಗಲೇ 250 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ಮೊತ್ತದಲ್ಲಿ ಈ ನಿಲ್ದಾಣದಲ್ಲಿ ಎಟಿಆರ್ 72 ರೀತಿಯ ವಿಮಾನಗಳ ಹಾರಾಟ ಮೂಲಸೌಕರ್ಯ ಹೆಚ್ಚಿಸಲು ಬಳಸಲಾಗುವುದು. 


 ಇದನ್ನೂ ಓದಿ : New guidelines: ಅಂತಹದ್ದೇನಾಗಿದೆ.? ವಿದೇಶಿ ವಿಮಾನಗಳ ಹಾರಾಟಕ್ಕೆ ಭಾರತ ಬ್ರೇಕ್ ಹಾಕಿದ್ದು ಯಾಕೆ?


ಅಂತಾರಾಷ್ಟ್ರೀಯ ದರ್ಜೆಗೇರಲಿದೆ ವಿಮಾನ ನಿಲ್ದಾಣ.!
ಅಯೋಧ್ಯೆಯನ್ನು ವಿಶ್ವಸ್ತರದಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣವನ್ನಾಗಿಸಲು (Airport) ಎಲ್ಲಾ ಯೋಜನೆ ರೂಪಿಸಲಾಗಿದೆ. ಭಾರತದಲ್ಲಿ ಅಷ್ಟೇ ಅಲ್ಲ, ವಿಶ್ವಾದ್ಯಂತ ಅಯೋಧ್ಯೆಗೆ ಬರುವ ರಾಮ ಭಕ್ತರಿಗೆ ಯಾವುದೇ ತೊಂದರೆ ಆಗದೇ ಇರುವ ನಿಟ್ಟಿನಲ್ಲಿ ಈ ವಿಮಾನ ನಿಲ್ದಾಣವನ್ನು ರೂಪಿಸಲಾಗುತ್ತಿದೆ. ಹಾಗಾಗಿ ಮೊದಲು ಎಟಿಆರ್ 72 ಮಾದರಿಯ ವಿಮಾನಗಳು ಇಲ್ಲಿ ಹಾರಾಟ ಆರಂಭಿಸಲಿವೆ. ಆದರ ಬಳಿಕ Airbus ಮಾದರಿಯ ದೊಡ್ಡ ವಿಮಾನಗಳನ್ನೂ ಇಲ್ಲಿ ಲ್ಯಾಂಡ್ ಮಾಡಿಸುವ ಯೋಜನೆ ಸರ್ಕಾರಕ್ಕೆ ಇದೆ. 


ವಿಮಾನ ನಿಲ್ದಾಣಕ್ಕೆ ಒಂದು ಸಾವಿರ ಕೋಟಿ ಈಗಾಗಲೇ ಬಿಡುಗಡೆ :
ಯೋಗಿ ಸರ್ಕಾರ  ವಿಮಾನ ನಿಲ್ದಾಣಕ್ಕಾಗಿ ಈಗಾಗಲೇ ಒಂದು ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಇದರಿಂದ ವಿಮಾನ ನಿಲ್ದಾಣಕ್ಕೆ ಬೇಕಾದ 377 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ.  ಸಾಮಾನ್ಯ ವಿಮಾನ  ಹಾರಾಟಕ್ಕೆ ಅನುಮತಿ ಸಿಕ್ಕ ಕೂಡಲೇ ವಿಮಾನ ನಿಲ್ದಾಣ ಪ್ರಗತಿ ಕಾರ್ಯ ಕೂಡಾ ನಡೆಯಲಿದೆ. ಅಂತಾರಾಷ್ಟ್ರೀಯ ವಿಮಾನಗಳಿಗೆ (International Flight) ಅನುಕೂಲವಾಗುವ ನಿಟ್ಟಿನಲ್ಲಿ ಇಲ್ಲಿ ಮೂಲಸೌಕರ್ಯ ಬದಲಾಗುತ್ತಿದೆ. 


 ಇದನ್ನೂ ಓದಿ : DGCA Latest Update - Check-In Bag ಇಲ್ಲದೆ ವಿಮಾನ ಯಾತ್ರೆ ಕೈಗೊಳ್ಳುವವರಿಗೆ ಅಗ್ಗದ ದರದಲ್ಲಿ ಟಿಕೆಟ್


ರಾಮ ಮಂದಿರ ಮಾದರಿಯಲ್ಲಿ ವಿಮಾನ ನಿಲ್ದಾಣದ ವಿನ್ಯಾಸ :
ಅಯೋಧ್ಯೆಯಲ್ಲಿ ಮಂದಿರ (Ram mandir) ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಒಂದೆರಡು ವರ್ಷಗಳಲ್ಲಿ ಭವ್ಯ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬಹುದು. ಹಾಗಾಗಿ, ಮಂದಿರದ ಮಾದರಿಯಲ್ಲೇ ಅಯೋಧ್ಯಾ ವಿಮಾನ ನಿಲ್ದಾಣವನ್ನು ರೂಪಿಸಲಾಗುತ್ತಿದೆ. 


ಅಯೋಧ್ಯೆಯ ನೋಟವೇ ಬದಲು :
ವಿಶ್ವ ದರ್ಜೆಯ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಮನಮೋಹಕ Express ಹೆದ್ದಾರಿ ಸೇರಿದಂತೆ ಅಯೋಧ್ಯೆಯನ್ನು ಜಗತ್ತಿನ ಅತಿದೊಡ್ಡ ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸಲು ಸರ್ಕಾರ ಎಲ್ಲಾ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುತ್ತಿದೆ. ಹಾಗಾಗಿ, ಇನ್ನೆರಡು ವರ್ಷಗಳಲ್ಲಿ ಅಯೋಧ್ಯೆಯ ನೋಟವೇ ಸಂಪೂರ್ಣ ಬದಲಾದರೆ ಅಚ್ಚರಿಯೇನಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.