ಲಕ್ನೋ: ಭಗವಾನ್ ಶ್ರೀರಾಮ(Lord Ram)ನಿಲ್ಲದೆ ಅಯೋಧ್ಯೆಯಲ್ಲಿ ಏನೂ ಇಲ್ಲವೆಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್(Ram Nath Kovind) ಹೇಳಿದ್ದಾರೆ. ಉತ್ತರಪ್ರದೇಶಕ್ಕೆ 4 ದಿನಗಳ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ಕೋವಿಂದ್, ಭಾನುವಾರ(ಆಗಸ್ಟ್ 29) ಅಯೋಧ್ಯೆಯಲ್ಲಿರುವ ರಾಮ ಲಲ್ಲಾಗೆ ವಂದನೆ ಸಲ್ಲಿಸಿದರು. ನಿರ್ಮಾಣ ಹಂತದಲ್ಲಿರುವ ರಾಮಮಂದಿರಕ್ಕೆ ಭೇಟಿ ನೀಡಿದ ಅವರು ವಿಶೇಷ ಪೂಜೆ ಸಲ್ಲಿಸಿದರು.   


COMMERCIAL BREAK
SCROLL TO CONTINUE READING

ಇದೇ ವೇಳೆ ಆಯೋಜಿಸಿದ್ದ ರಾಮಾಯಣ ಸಮಾವೇಶ(Ramayan Conclave)ಉದ್ಘಾಟಿಸಿ ಮಾತನಾಡಿದ ಅವರು ‘ಪ್ರಭು ಶ್ರೀರಾಮನಿಲ್ಲದ ಅಯೋಧ್ಯೆ ಅಯೋಧ್ಯೆಯಲ್ಲ(Ayodhya Ram Temple). ರಾಮ ಇಲ್ಲಿರುವುದರಿಂದಲೇ ಅಯೋಧ್ಯೆ ಅಸ್ತಿತ್ವದಲ್ಲಿದೆ. ಈ ನಗರದಲ್ಲಿ ಭಗವಾನ್ ಶ್ರೀರಾಮನು ಶಾಶ್ವತವಾಗಿ ನೆಲೆಸಿದ್ದಾನೆ, ಆದ್ದರಿಂದ ನಿಜವಾದ ಅರ್ಥದಲ್ಲಿ ಈ ಸ್ಥಳವು ಅಯೋಧ್ಯೆಯಾಗಿದೆ’ ಎಂದು ಹೇಳಿದರು.


ಇದನ್ನೂ ಓದಿ: Viral Video: ಮದುವೆ ಮಂಟಪದಲ್ಲಿಯೇ ವರನಿಗೆ ಬಿತ್ತು ವಧುವಿನಿಂದ ಏಟು!: ಕಾರಣವೇನು ಗೊತ್ತಾ?


2019ರಲ್ಲಿ ಸುಪ್ರೀಂಕೋರ್ಟ್(Supreme Court) ನೀಡಿದ ಐತಿಹಾಸಿಕ ತೀರ್ಪಿನ ನಂತರ ರಾಷ್ಟ್ರಪತಿ ಕೋವಿಂದ್ ಅವರು ದೇವಾಲಯ ನಿರ್ಮಾಣವಾಗುತ್ತಿರುವ ರಾಮ ಜನ್ಮಭೂಮಿ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಭಾಷಣದ ವೇಳೆ ತಮ್ಮ ಹೆಸರು ಉಲ್ಲೇಖಿಸಿ, ‘ನನ್ನ ಕುಟುಂಬ ಸದಸ್ಯರು ನನಗೆ ಹೆಸರಿಟ್ಟಾಗ ಅವರು ರಾಮಕಥಾ ಹಾಗೂ ಭಗವಾನ್ ಶ್ರೀರಾಮನ ಬಗ್ಗೆ ಗೌರವ ಮತ್ತು ಪ್ರೀತಿಯ ಭಾವನೆ ಹೊಂದಿದ್ದರು. ಇದು ಇಲ್ಲಿನ ಸಾಮಾನ್ಯ ಜನರಲ್ಲಿಯೂ ಕಂಡುಬರುತ್ತದೆ’ ಎಂದು ಹೇಳಿದರು.


Ayodhya)ಯ ಮೂಲ ಅರ್ಥವೆಂದರೆ ಯಾರೊಂದಿಗೂ ಯುದ್ಧ ಮಾಡುವುದು ಅಸಾಧ್ಯ ಎಂಬುದು. ರಘುವಂಶಿ ರಾಜರಾದ ರಘು, ದಿಲೀಪ್, ಅಜ್, ದಶರಥ ಮತ್ತು ರಾಮನ ಧೈರ್ಯ ಮತ್ತು ಶಕ್ತಿಯಿಂದಾಗಿ ಅವರ ರಾಜಧಾನಿ ಜಯಿಸಲಾಗದು ಎಂದು ಪರಿಗಣಿಸಲಾಗಿದೆ. ಆದ್ದರಿಂದ ಈ ನಗರದ ಹೆಸರು ‘ಅಯೋಧ್ಯೆ’ ಎಂದೆಂದಿಗೂ ಪ್ರಸ್ತುತವಾಗಿದೆ’ ಎಂದು ವಿವರಿಸಿದರು.


ಇದನ್ನೂ ಓದಿ: RBI Alert : ಹಳೆಯ ನಾಣ್ಯ ಅಥವಾ ನೋಟು ಮಾರಾಟ ಮಾಡುವ ಮುನ್ನ ಎಚ್ಚರ..! ಆರ್‌ಬಿಐ ನೀಡಿದೆ ಮಹತ್ವದ ಸಂದೇಶ


ಆದಿವಾಸಿಗಳ ಮೇಲಿನ ಶ್ರೀರಾಮನ ಪ್ರೀತಿ ಎತ್ತಿ ತೋರಿಸಿದ ಅವರು, ‘ತನ್ನ ವನವಾಸದ ದಿನಗಳಲ್ಲಿ ರಾಮನು ಅಯೋಧ್ಯೆ ಮತ್ತು ಮಿಥಿಲೆಯ ಸೈನ್ಯವನ್ನು ಯುದ್ಧಕ್ಕೆ ಕರೆಸಲಿಲ್ಲ. ಜಟಾಯು (ರಣಹದ್ದು) ಸೇರಿ ಕೋಲ್ಸ್, ಭೀಲ್ಸ್, ವಾಣರನ್ನು ಒಟ್ಟುಗೂಡಿಸಿ ತನ್ನ ಸೈನ್ಯವನ್ನು ರೂಪಿಸಿದ್ದನು. ಅವರು ಆದಿವಾಸಿಗಳೊಂದಿಗೆ ಪ್ರೀತಿ ಮತ್ತು ಸ್ನೇಹವನ್ನು ಬಲಪಡಿಸಿದರು’ ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ರಾಮಾಯಣ(Ramayana) ಸಮ್ಮೇಳನದ ‘ಪೋಸ್ಟಲ್ ಕವರ್’ಅನ್ನು ರಾಷ್ಟ್ರಪತಿಗಳು ಅನಾವರಣಗೊಳಿಸಿದರು. ಉತ್ತರಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಡಿಸಿಎಂಗಳಾದ ಕೇಶವ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ, ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವ ದರ್ಶನ್ ವಿಕ್ರಮ್ ಜರ್ದೋಷ್ ಉಪಸ್ಥಿತರಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.