BabriZindaHai viral : ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದೆ. ರಾಮಲಲ್ಲಾ ಮಂದಿರ ಲೋಕಾರ್ಪಣೆಗೊಳಿಸಲಾಗಿದೆ. ಹೀಗಿರುವಾಗ ಭಾರತದಲ್ಲಿ ಕೋಮು ಉದ್ವಿಗ್ನತೆ ಎಬ್ಬಿಸಲು ಯೋಜನೆ ರೂಪಿಸಿರುವ ಪಾಕಿಸ್ತಾನದ ಷಡ್ಯಂತ್ರ ಬಯಲಾಗಿದೆ. ಅಲ್ಲದೆ, ಸೋಷಿಯಲ್‌ ಮೀಡಿಯಾದಲ್ಲಿ ಬಾಬ್ರಿ ಮಸೀದ್‌ ಕುರಿತ ಕೂಗು ಹೆಚ್ಚುತ್ತಿದೆ. 


COMMERCIAL BREAK
SCROLL TO CONTINUE READING

ಹೌದು.. ಜನವರಿ 22, 2024, ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮ ದೇವಾಲಯ ಉದ್ಘಾಟನೆ ಮತ್ತು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆದಿದೆ. ಈ ದಿನ ಭಾರತೀಯ ಇತಿಹಾಸದಲ್ಲಿ ಸುರ್ವಣ ಗಳಿಗೆ. ಅಂದು ಶ್ರೀರಾಮನನ್ನು ಸ್ವಾಗತಿಸಲು ಮನೆಗಳಲ್ಲಿ ದೀಪಗಳನ್ನು ಬೆಳಗಿಸಲಾಯಿತು. ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಅನೇಕ ದೇಶಗಳಲ್ಲಿ ದಶರಥ ಪುತ್ರನನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. 


ಇದನ್ನೂ ಓದಿ:ರಾಮನ ಎದುರು ಭಾವುಕರಾಗಿ ಸಾಷ್ಟಾಂಗ ನಮಸ್ಕಾರ ಹಾಕಿದ ಪ್ರಧಾನಿ ಮೋದಿ‌


ಆದರೆ ನೆರೆಯ ಪಾಕಿಸ್ತಾನಕ್ಕೆ ಲಕ್ಷಾಂತರ ಭಾರತೀಯರ ಸಂತೋಷವನ್ನು ಸಹಿಸಲಾಗಲಿಲ್ಲ ಅನಿಸುತ್ತೆ. ಅದಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿ ಲಿಖಿತ ಹೇಳಿಕೆಯನ್ನು ನೀಡಿದೆ. ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿ ದೇವಾಲಯ ನಿರ್ಮಿಸಲಾಗಿದೆ ಎಂದು ಪಾಕಿಸ್ತಾನವು ಬಾಬರಿ ಮಸೀದಿ ವಿವಾದವನ್ನು ಮತ್ತೆ ಕೆಣಕಿದೆ.


ರಾಮ ಜನ್ಮ ಭೂಮಿಯಲ್ಲಿ ಕ್ರಿಕೆಟರ್ ಗಳು !ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಸ್ಟಾರ್ ಆಟಗಾರರು


ಈ ಪೋಸ್ಟ್‌ಗಳನ್ನು ನೋಡಿದ್ರೆ, ದೇಶದಲ್ಲಿ ಧಾರ್ಮಿಕ ಸಾಮರಸ್ಯವನ್ನು ಕದಡುವ ಸಂಚನ್ನು ರೂಪಿಸಲಾಗಿತ್ತಾ ಎನ್ನುವ ಅನುಮಾನಗಳನ್ನು ಹುಟ್ಟುಹಾಕಿದೆ. ಹಾಗಾಗಿ, #BabriZindaHai ಎಂಬ ಹ್ಯಾಶ್‌ಟ್ಯಾಗ್ ಹಿಂದೆ ಯಾರಿದ್ದಾರೆ, ನಿಜವಾದ ಉದ್ದೇಶವೇನು ಮತ್ತು ವಿಶೇಷವಾಗಿ ದೇವಾಲಯದ ತೆರೆಯುವ ದಿನದಂದೇ ಏಕೆ ಈ ರೀತಿ ಮಾಡಲಾಯಿತು..? ಎಂಬ ತನಿಖೆ ಶುರುಮಾಡಲಾಯಿತು. 


ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಹೊಸ ಆಪ್ ಬಿಡುಗಡೆ ಮಾಡಿದ ಡಾ.ಸುಭಾಷ್ ಚಂದ್ರ


ಎಕ್ಸ್ ಸೈಟ್‌ನಲ್ಲಿ #BabriZindaHai ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಭಾರತದಲ್ಲಿನ ಮುಸ್ಲಿಮರ ಭಾವನೆಗಳನ್ನು ಕೆರಳಿಸುವ ಪ್ರಯತ್ನವಾಗಿ ಕಂಡುಬಂದಿದೆ. ಅದೇ ಸಮಯದಲ್ಲಿ ರಾಮಮಂದಿರ ಧ್ವಂಸವನ್ನು ಎತ್ತಿ ಹಿಡಿಯುವ ಮೂಲಕ ಹಿಂದೂಗಳನ್ನು ಪ್ರಚೋದಿಸುವ ಪಿತೂರಿಯಾಗಿ ಕಂಡುಬರುತ್ತದೆ. ಪಾಕಿಸ್ತಾನದ ಷಡ್ಯಂತ್ರ ಗೊತ್ತಿಲ್ಲದ ಅನೇಕರು ಇದನ್ನು ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.