ನಿಷೇಧಿತ ಕೆಮ್ಮು ಸಿರಪ್ ಪತ್ತೆ: ಇದರ ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ!
ತನಿಖೆ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇದೀಗ ಬಾದರ್‌ಪುರ ಪೊಲೀಸ್ ಠಾಣೆಯ ಪೊಲೀಸರು ಈ ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದು, ಪರಾರಿಯಾಗಿರುವ ಚಾಲಕನನ್ನು ಹಿಡಿಯಲು ಬಲೆ ಬೀಸಿದ್ದಾರೆ.
ಅಸ್ಸಾಂನ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇಧಿತ ಕೆಮ್ಮು ಸಿರಪ್ ಪತ್ತೆಯಾಗಿದ್ದು, ಒಟ್ಟು 9900 ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ. ಇಲ್ಲಿನ ಕರೀಂಗಂಜ್ ಜಿಲ್ಲೆಯ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಇನ್ನು ಈ ಸಿರಪ್‌ನ ಬೆಲೆ ಕೇಳಿದ್ರೆ ದಂಗಾಗೋದು ಗ್ಯಾರಂಟಿ.
ಇದನ್ನೂ ಓದಿ: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆಗಿದೆ 'ಚರ್ಚ್' ನಂಟು! ಮಹತ್ವದ ತಿರುವು ಪಡೆದ ಕೇಸ್
ಈ ನಿಷೇಧಿತ ಕೆಮ್ಮಿನ ಸಿರಪ್‌ನ ಬೆಲೆ 50 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಈ ಪ್ರದೇಶವು ಇಂತಹ ಅಕ್ರಮ ಔಷಧಗಳ ಕಳ್ಳಸಾಗಣೆಗೆ ಕುಖ್ಯಾತವಾಗಿದೆ. ಕರೀಂಗಂಜ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮನಾಭ್ ಬರುವಾ ಸಮ್ಮುಖದಲ್ಲಿ ನಿಖರ ಸುಳಿವಿನ ಆಧಾರದ ಮೇಲೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಪೊಲೀಸರು, ಬಾದರ್‌ಪುರ ಪ್ರದೇಶದ ಹೆದ್ದಾರಿಯಲ್ಲಿ AS-11EC-0919 ನೋಂದಣಿ ಸಂಖ್ಯೆಯ ಟ್ರಕ್ ಅನ್ನು ತಡೆದು ಅದರೊಳಗಿಂದ ಸರಕುಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಓರ್ವವನ್ನು ಸದ್ಯ ಬಂಧಿಸಲಾಗಿದೆ.
ತನಿಖೆ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇದೀಗ ಬಾದರ್‌ಪುರ ಪೊಲೀಸ್ ಠಾಣೆಯ ಪೊಲೀಸರು ಈ ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದು, ಪರಾರಿಯಾಗಿರುವ ಚಾಲಕನನ್ನು ಹಿಡಿಯಲು ಬಲೆ ಬೀಸಿದ್ದಾರೆ.
ಈಶಾನ್ಯ ರಾಜ್ಯಗಳಾದ ಅಸ್ಸಾಂ-ತ್ರಿಪುರಾ ಗಡಿಯಲ್ಲಿಯೂ ನಿಷೇಧಿತ ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಕರಣಗಳು ಕಂಡು ಬರುತ್ತಲೇ ಇವೆ. ಗಡಿ ಜಿಲ್ಲೆಗಳತ್ತ ಔಷಧ ವ್ಯಾಪಾರಿಗಳ ಗಮನ ಹೆಚ್ಚಾಗಿರುವುದೇ ಇಂತಹ ಪ್ರಕರಣ ಕಂಡುಬರೋದಕ್ಕೆ ಕಾರಣ. ಅದಕ್ಕಾಗಿಯೇ ಇಲ್ಲಿ ಆಗಾಗ್ಗೆ ಡ್ರಗ್ಸ್ ವಿರೋಧಿ ಕಾರ್ಯಾಚರಣೆಗಳು ನಡೆಯುತ್ತವೆ.
ಇದನ್ನೂ ಓದಿ: ಅರ್ಜುನ್ ಜನ್ಯ ಆಕ್ಷನ್ ಕಟ್ ಹೇಳಲಿರುವ ಶಿವಣ್ಣನ ಚಿತ್ರದ ಟೈಟಲ್ ಅನೌನ್ಸ್
ಸ್ಥಳೀಯ ಆಡಳಿತದ ಅಧಿಕಾರಿಗಳ ಪ್ರಕಾರ, ಇಂತಹ ಮಾದಕ ದ್ರವ್ಯಗಳನ್ನು ಅಮಲು ಪದಾರ್ಥವಾಗಿ ಬಳಸಲಾಗುತ್ತದೆ. ನಿಷೇಧಿತ ಮಾತ್ರೆಗಳು ಮತ್ತು ಕೆಮ್ಮಿನ ಸಿರಪ್‌ಗಳ ರವಾನೆಗಳನ್ನು ಹೆಚ್ಚಾಗಿ ಅಸ್ಸಾಂ ಮತ್ತು ಪಕ್ಕದ ರಾಜ್ಯಗಳ ಗಡಿ ಜಿಲ್ಲೆಗಳಿಗೆ ಕಳುಹಿಸಲಾಗುತ್ತದೆ. ಆದರೆ ಪೊಲೀಸರು ಮತ್ತು ಆಡಳಿತಾಧಿಕಾರಿಗಳ ಮುಂಜಾಗೃತೆಯಿಂದ ಡ್ರಗ್ ಡೀಲರ್‌ಗಳ ಯೋಜನೆಗಳು ಯಶಸ್ವಿಯಾಗುತ್ತಿಲ್ಲ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ