ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆಗಿದೆ 'ಚರ್ಚ್' ನಂಟು! ಮಹತ್ವದ ತಿರುವು ಪಡೆದ ಕೇಸ್‌

ಶಿಂಜೋ ಅಬೆ ಬಗ್ಗೆ ಅಸಮಾಧಾನವಿತ್ತು. ಹೀಗಾಗಿ ಆತನನ್ನು ಕೊಲೆ ಮಾಡಲು ಬಯಸಿದೆ ಎಂದು ತನಿಖೆ ವೇಳೆ ಆರೋಪಿ ಹೇಳಿದ್ದಾನೆ. ಇನ್ನೊಂದೆಡೆ ಕೊಲೆ ಆರೋಪಿಯ ತಾಯಿ, ಶಿಂಜೋ ಅಬೆಗೆ ಹಣವನ್ನು ನೀಡಿದ್ದು, ಆತನಿಂದಲೇ ತನ್ನ ತಾಯಿ ದಿವಾಳಿಯಾದಳು ಎಂಬುದು ಆತನ ಕೋಪಕ್ಕೆ ಕಾರಣವಾಗಿದೆ. ಇದೇ ಕೊಲೆ ಮಾಡಲು ಪ್ರೇರಣೆನೀಡಿದೆ ಎಂದು ಅಲ್ಲಿನ ಕೆಲ ಮಾಧ್ಯಮಗಳು ವರದಿ ಮಾಡಿದೆ.

Written by - Bhavishya Shetty | Last Updated : Jul 12, 2022, 09:29 AM IST
  • ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಹತ್ಯೆ ಪ್ರಕರಣ
  • ಕೊಲೆ ಆರೋಪಿಯ ತಾಯಿ ಮತ್ತು ಶಿಂಜೋ ಅಬೆ ಸಾವಿಗೂ ಸಂಬಂಧವಿದೆ ಎಂದು ತಿಳಿದುಬಂದಿದೆ
  • ಜಪಾನ್‌ ಯುನಿಫಿಕೇಶನ್‌ ಚರ್ಚ್‌ನ ಸದಸ್ಯೆಯಾಗಿದ್ದ ಆರೋಪಿಯ ತಾಯಿ
ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆಗಿದೆ 'ಚರ್ಚ್' ನಂಟು! ಮಹತ್ವದ ತಿರುವು ಪಡೆದ ಕೇಸ್‌ title=
Shinzo Abe Killing

ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆಯನ್ನು ಇತ್ತೀಚೆಗೆ ಇಲ್ಲಿನ ಜಪಾನ್‌ನ ನಾರಾ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಅಲ್ಲಿನ ಇಲಾಖೆಗಳು ತೀವ್ರ ತನಿಖೆ ನಡೆಸುತ್ತಿದ್ದು ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಸದ್ಯ ಕೊಲೆ ಆರೋಪಿಯ ತಾಯಿ ಮತ್ತು ಶಿಂಜೋ ಅಬೆ ಸಾವಿಗೂ ಸಂಬಂಧವಿದೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಆಕೆ ಇಲ್ಲಿನ ಪ್ರಖ್ಯಾತ ಜಪಾನ್‌ ಯುನಿಫಿಕೇಶನ್‌ ಚರ್ಚ್‌ನ ಸದಸ್ಯೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಚರ್ಚ್‌ ಆಡಳಿತವೂ ಹೇಳಿಕೆಯನ್ನು ನೀಡಿದೆ.  

ಇದನ್ನೂ ಓದಿ: ಭಾರತ-ಇಂಗ್ಲೆಂಡ್‌ ಪಂದ್ಯ: ನಾಲ್ವರು ಆಲ್‌ರೌಂಡರ್‌ಗಳಲ್ಲಿ ಯಾರಾಗ್ತಾರೆ ಮ್ಯಾಚ್‌ ವಿನ್ನರ್‌?

ಶಿಂಜೋ ಅಬೆ ಬಗ್ಗೆ ಅಸಮಾಧಾನವಿತ್ತು. ಹೀಗಾಗಿ ಆತನನ್ನು ಕೊಲೆ ಮಾಡಲು ಬಯಸಿದೆ ಎಂದು ತನಿಖೆ ವೇಳೆ ಆರೋಪಿ ಹೇಳಿದ್ದಾನೆ. ಇನ್ನೊಂದೆಡೆ ಕೊಲೆ ಆರೋಪಿಯ ತಾಯಿ, ಶಿಂಜೋ ಅಬೆಗೆ ಹಣವನ್ನು ನೀಡಿದ್ದು, ಆತನಿಂದಲೇ ತನ್ನ ತಾಯಿ ದಿವಾಳಿಯಾದಳು ಎಂಬುದು ಆತನ ಕೋಪಕ್ಕೆ ಕಾರಣವಾಗಿದೆ. ಇದೇ ಕೊಲೆ ಮಾಡಲು ಪ್ರೇರಣೆನೀಡಿದೆ ಎಂದು ಅಲ್ಲಿನ ಕೆಲ ಮಾಧ್ಯಮಗಳು ವರದಿ ಮಾಡಿದೆ. 

ಜಪಾನ್‌ನ ನಾರಾ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ 11.30ರ ವೇಳೆಗೆ ತೆತ್ಸುಯ ಯಮಗಮಿ ಎಂಬಾತ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲೆ ದಾಳಿ ನಡೆಸಿದ್ದ. ಎರಡು ಬಾರಿ ಗುಂಡು ಹಾರಿಸಿದ್ದ ದುಷ್ಕರ್ಮಿಯನ್ನು ತಕ್ಷಣವೇ ಪೊಲೀಸರು ಬಂಧಿಸಿದ್ದರು. ಬೂದು ಬಣ್ಣದ ಟಿ ಶರ್ಟ್ ಧರಿಸಿದ್ದ ತೆತ್ಸುಯ ಯಮಗಮಿ ಗುಂಡು ಹಾರಿಸಿ, ಅಲ್ಲಿಂದ ಪರಾರಿಯಾಗಲ ಯತ್ನಿಸಿದ್ದ. ಇನ್ನು ಕೊಲೆ ಆರೋಪಿ ಈ ಹಿಂದೆ ಮೂರು ವರ್ಷಗಳ ಕಾಲ ನೌಕಾನೆಲೆಯಲ್ಲಿ ಕೆಲಸ ಮಾಡಿದ್ದನು ಎಂಬ ಮಾಹಿತಿಯೂ ಲಭಿಸಿದೆ.  

ತೆತ್ಸುಯ ಯಮಗಮಿಯು ಜಪಾನ್ ನೌಕಾಪಡೆಯ ಮಾಜಿ ಉದ್ಯೋಗಿ. 2005ರಿಂದ 2008ರವರೆಗೆ ಅಂದರೆ ಮೂರು ವರ್ಷ ಕಾಲ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದನು. ಇದೀಗ ಶಿಂಜೋ ಅಬೆಯನ್ನು ಕೊಲೆ ಮಾಡಿದ್ದು, ಮನೆಯಲ್ಲಿಯೇ ತಯಾರಿಸಿದ ಗನ್‌ನಿಂದ ಕೃತ್ಯ ಎಸಗಿದ್ದಾನೆ ಎನ್ನಲಾಗುತ್ತಿದೆ. 

ಇನ್ನು ಪೊಲೀಸ್‌ ತನಿಖೆ ವೇಳೆ ಮಹತ್ವದ ಮಾಹಿತಿಗಳು ಹೊರಬಿದ್ದಿದ್ದು, ಶಂಕಿತ ಕೊಲೆಗಾರ ತೆತ್ಸುಯಾ ಯಮಗಾಮಿ ತೀವ್ರಗಾಮಿ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದ ಎನ್ನಲಾಗುತ್ತಿದೆ. ಆದರೆ ಆ ಸಂಘಟನೆಗಳ ಹೆಸರು ಇನ್ನೂ ಬಹಿರಂಗವಾಗಿಲ್ಲ. 

ಜಪಾನಿನ ಮಾಧ್ಯಮ ವರದಿಗಳ ಪ್ರಕಾರ, ಆರೋಪಿಯ ತಾಯಿಯು ಅಬೆಗೆ ಭಾರಿ ದೇಣಿಗೆಯನ್ನು ನೀಡಿದ್ದು, ಅದೇ ಆಕೆಯ ದಿವಾಳಿತನಕ್ಕೆ ಕಾರಣವಾಯಿತು. ಶಿಂಜೋ ಹಣವನ್ನು ಹಿಂತಿರುಗಿಸದೇ ಇದ್ದ ಕಾರಣದಿಂದ ಕೋಪಗೊಂಡ ಈತ, ಕೊಲೆ ಮಾಡಲು ಮುಂದಾಗಿದ್ದಾನೆ. 

ಇನ್ನು ಜಪಾನ್‌ ಯುನಿಫಿಕೇಶನ್‌ ಚರ್ಚ್‌ನ ಜಪಾನ್ ಶಾಖೆಯ ಮುಖ್ಯಸ್ಥ ಟೊಮಿಹಿರೊ ತನಕಾ ಅವರು ಮಾತನಾಡಿ, ಶಂಕಿತ ಕೊಲೆಗಾರನ ತಾಯಿ ಇದೇ ಚರ್ಚ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ನೀಡಿದ ದೇಣಿಗೆ ಬಗ್ಗೆ ನಿರ್ದಿಷ್ಟವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲಎಂದರು. ಇದನ್ನೂ ಓದಿ: 

ಇದನ್ನೂ ಓದಿ: Bumper Discount on Cars: ಈ ಕಾರುಗಳ ಮೇಲೆ ಸಿಗುತ್ತಿದೆ 94,000 ರೂ.ವರೆಗಿನ ಭರ್ಜರಿ ಡಿಸ್ಕೌಂಟ್

"ದ್ವೇಷದ ಕಾರಣದಿಂದ ಒಬ್ಬ ವ್ಯಕ್ತಿಯನ್ನು ಕೊಲ್ಲಲು ಹೇಗೆ ಪ್ರೇರೇಪಿಸಬಹುದು ಎಂಬುದನ್ನು ನಾವು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಅಬೆ ಚರ್ಚ್‌ನ ಸದಸ್ಯರಲ್ಲದಿದ್ದರೂ, ಅವರು ನಮಗೆ ಸಂಬಂಧಿಸಿದ ಸಂಸ್ಥೆಗಳ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿರಬಹುದು" ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News