Beauty Tips: ಅರಿಶಿಣ ಈ ಫೆಸ್ ಪ್ಯಾಕ್ ನಿಂದ ಮುಖದಲ್ಲಿ ಕಾಂತಿ ಹೆಚ್ಚಾಗುತ್ತದೆ, ಈ ರೀತಿ ಮನೆಯಲ್ಲಿಯೇ ತಯಾರಿಸಿ
Beauty Tips: ಅರಿಶಿಣ ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ನಮ್ಮ ತ್ವಚೆಯ ಕಾಂತಿ ಹೆಚ್ಚಿಸುವ ಕೆಲಸ ಮಾಡುತ್ತದೆ. ಹಾಗಾದರೆ ಬನ್ನಿ ಅರಿಶಿಣದಿಂದ ತಯಾರಿಸಲಾಗುವ ಒಂದು ಫೇಸ್ ಪ್ಯಾಕ್ ಕುರಿತು ತಿಳಿದುಕೊಳ್ಳೋಣ.
Turmeric Face Pack - ಇತ್ತೀಚಿನ ದಿನಗಳಲ್ಲಿ ನಮ್ಮ ಚರ್ಮವು ಮಾಲಿನ್ಯ ಮತ್ತು ಓಡಾಟದಿಂದ ಕೂಡಿದ ಜೀವನಶೈಲಿಯಿಂದಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತದೆ. ಈ ಕಾರಣದಿಂದಾಗಿ ನಮ್ಮ ಚರ್ಮವು ನಿರ್ಜೀವ ಮತ್ತು ಮಂದವಾಗುತ್ತದೆ. ಇದೇ ವೇಳೆ, ಆಯುರ್ವೇದದಲ್ಲಿ ನಿಮ್ಮ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸಬಹುದಾದ ಅನೇಕ ಸಂಗತಿಗಳ ಕುರಿತು ಉಲ್ಲೇಖಿಸಲಾಗಿದೆ. ಹೌದು, ಅರಿಶಿನವು ನಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ . ಇದು ನಮ್ಮ ಮೈಕಾಂತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಹೀಗಾಗಿ ಇಂದು ನಾವು ನಿಮಗೆ ಅರಿಶಿಣದಿಂದ ತಯಾರಿಸಲಾಗುವ ಒಂದು ಫೇಸ್ ಪ್ಯಾಕ್ (Face Pack) ಕುರಿತು ಹೇಳಲಿದ್ದೇವೆ. ಅದನ್ನು ನೀವು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ, ನಂತರ ನಿಮ್ಮ ಮುಖವು ಹೊಳಪನ್ನು (Skin Care Tips) ಪಡೆಯುವುದರ ಜೊತೆಗೆ ನೀವು ಅನೇಕ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದಲೂ ಕೂಡ ಮುಕ್ತಿ ಪಡೆಯಬಹುದು. ಈ ಫೇಸ್ ಪ್ಯಾಕ್ ಬಗ್ಗೆ ಮತ್ತು ಅವುಗಳನ್ನು ಹೇಗೆ ತಯಾರಿಸುವುದು ಎಂದು ತಿಳಿಯೋಣ.
1. Cream ಹಾಗೂ Turmeric ಫೇಸ್ ಪ್ಯಾಕ್ (Cream-Turmeric Face Pack)
>> ಬೇಕಾಗುವ ಸಾಮಗ್ರಿ - 1 ಚ. ಹಾಲಿನ ಕೆನೆ, 2 ಚ ಕಡ್ಲೆ ಹಿಟ್ಟು, 1ಚ. ಅರಿಶಿಣ
>> ತಯಾರಿಸುವ ವಿಧಾನ - ಎಲ್ಲಕ್ಕಿಂತ ಮೊದಲು ಕೆನೆ, ಕಡ್ಲೆ ಹಿಟ್ಟು ಹಾಗೂ ಅರಿಶಿನವನ್ನು ಬೆರೆಸಿಕೊಳ್ಳಿ. ಒಂದು ವೇಳೆ ನಿಮ್ಮ ಚರ್ಮ ಒಣಚರ್ಮವಾಗಿದ್ದರೆ ನೀವೂ ಈ ಮಿಶ್ರಣಕ್ಕೆ ತೆಂಗಿನ ಎಣ್ಣೆಯನ್ನು ಕೂಡ ಬೆರೆಸಬಹುದು. ಈ ಪೇಸ್ಟ್ ಅನ್ನು ಮುಖಕ್ಕೆ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿ. 15 ನಿಮಿಷ ಹಾಗೆಯೇ ಬಿಟ್ಟು, ತೊಳೆದುಕೊಳ್ಳಿ. ಇದರಿಂದ ನಿಮ್ಮ ಚರ್ಮಕ್ಕೆ ಕಾಂತಿ ಬರಲಿದೆ ಹಾಗೂ ಮುಖ ಹೊಳೆಯಲಿದೆ. ವಾರದಲ್ಲಿ ಎರಡು ಬಾರಿ ನೀವು ಈ ಕ್ರಿಯೆಯನ್ನು ಪುನರಾವರ್ತಿಸಬಹುದು.
ಇದನ್ನೂ ಓದಿ-Beauty Tips: 20 ರಿಂದ 30ನೇ ವಯಸ್ಸಿನಲ್ಲಿ ಈ ಸಲಹೆಗಳನ್ನು ಅನುಸರಿಸಿ, ಲೈಫ್ ಲಾಂಗ್ ಯಂಗ್ ಆಗಿರಿ
2. Aloe Vera ಹಾಗೂ Turmeric ಫೇಸ್ ಪ್ಯಾಕ್ (Turmeric-Aloevera Face Pack)
>> ಬೇಕಾಗುವ ಸಾಮಗ್ರಿ - 2 ಸ್ಪೂನ್ ಮುಲ್ತಾನಿ ಮಿಟ್ಟಿ, 1 ಸ್ಪೂನ್ ಮೊಸರು ಹಾಗೂ ಅರ್ಧ ಸ್ಪೂನ್ ಎಲೋವೆರಾ ಜೆಲ್
>> ತಯಾರಿಸುವ ವಿಧಾನ - ಮುಲ್ತಾನಿ ಮಿಟ್ಟಿ, ಮೊಸರು ಮತ್ತು ಅಲೋವೆರಾ ಜೆಲ್ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ನಂತರ ಅದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. ಫೇಸ್ ಪ್ಯಾಕ್ ಅನ್ನು ಮುಖದ ಮೇಲೆ 20 ನಿಮಿಷಗಳ ಕಾಲ ಬಿಡಿ. ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಈ ಫೇಸ್ ಪ್ಯಾಕ್ ಅನ್ನು ವಾರಕ್ಕೊಮ್ಮೆ ಮಾತ್ರ ಅನ್ವಯಿಸಿ. ಇದು ಚರ್ಮವನ್ನು ನಯವಾಗಿಡಲು ಸಹಾಯ ಮಾಡುತ್ತದೆ. ಇದರ ಜೊತೆಯಲ್ಲಿ, ಇದು ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಸಹ ಕೊಲ್ಲುತ್ತದೆ.
ಇದನ್ನೂ ಓದಿ-Ice Beauty Tips: ಮುಖಕ್ಕೆ ಐಸ್ ಮಸಾಜ್ ಮಾಡುವಾಗ ಮರೆತು ಕೂಡ ಈ ತಪ್ಪುಗಳನ್ನು ಮಾಡಬೇಡಿ
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ವಿಧಿ, ಪದ್ಧತಿ ಹಾಗೂ ಔಷಧಿಯ ಕುರಿತಾದ ಮಾಹಿತಿಯನ್ನು ಝೀ ಹಿಂದುಸ್ತಾನ್ ಕನ್ನಡ ಖಚಿತಪಡಿಸುವುದಿಲ್ಲ. ಇವುಗಳನ್ನು ಕೇವಲ ಸಲಹೆ ಎಂದೇ ಭಾವಿಸಬೇಕು ಮತ್ತು ಅನುಸರಿಸುವ ಮುನ್ನ ನುರಿತ ವೈದ್ಯರ ಸಲಹೆ ಪಡೆದುಕೊಳ್ಳಬೇಕು)
ಇದನ್ನೂ ಓದಿ-Beauty Tips: ಮುಖದ ಮೇಲಿನ ಜಿಡ್ಡಿನಂಶ ತೊಲಗಿಸಲು ಇಲ್ಲಿದೆ ಒಂದು ಅದ್ಭುತ ಮನೆಮದ್ದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.