Beauty Tips: 20 ರಿಂದ 30ನೇ ವಯಸ್ಸಿನಲ್ಲಿ ಈ ಸಲಹೆಗಳನ್ನು ಅನುಸರಿಸಿ, ಲೈಫ್ ಲಾಂಗ್ ಯಂಗ್ ಆಗಿರಿ

ಈ ಸರಳ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಅದರಲ್ಲೂ ಮುಖ್ಯವಾಗಿ ಬೇಗನೆ ವಯಸ್ಸಾದಂತೆ ಕಾಣುವ ಚರ್ಮದ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

Written by - Yashaswini V | Last Updated : Aug 30, 2021, 12:25 PM IST
  • 20 ರಿಂದ 30ನೇ ವಯಸ್ಸಿನಲ್ಲಿ ಕೆಲವು ಸಿಂಪಲ್ ಸಲಹೆಗಳನ್ನು ಮೈಗೂಡಿಸಿಕೊಂಡರೆ ಜೀವನದುದ್ದಕ್ಕೂ ಹೊಳೆಯುವ ಮತ್ತು ಯಂಗ್ ಆದ ತ್ವಚೆ ನಿಮ್ಮದಾಗುತ್ತದೆ
  • ಜೀವನದುದ್ದಕ್ಕೂ ಯಂಗ್ ಆಗಿ ಕಾಣಲು 20 ರಿಂದ 30ನೇ ವಯಸ್ಸಿನಲ್ಲಿ ಈ ಸಿಂಪಲ್ ಟಿಪ್ಸ್ ಅನುಸರಿಸಿ
  • ನಿಮ್ಮ ಚರ್ಮವು ಶುಷ್ಕವಾಗಿರಲಿ ಅಥವಾ ಎಣ್ಣೆಯುಕ್ತವಾಗಿರಲಿ ಅಥವಾ ಸಾಮಾನ್ಯವಾಗಿರಲಿ ಮಾಯಿಶ್ಚರೈಸರ್ ಎಲ್ಲರಿಗೂ ಅತ್ಯಗತ್ಯ
Beauty Tips: 20 ರಿಂದ 30ನೇ ವಯಸ್ಸಿನಲ್ಲಿ ಈ ಸಲಹೆಗಳನ್ನು ಅನುಸರಿಸಿ,  ಲೈಫ್ ಲಾಂಗ್ ಯಂಗ್ ಆಗಿರಿ title=
How To Get Glowing Skin

ಬೆಂಗಳೂರು:  ಯಂಗ್ ಏಜ್ ಎಂದರೆ 20 ರಿಂದ 30ನೇ ವಯಸ್ಸಿನಲ್ಲಿ ನಾವು ಬಹುತೇಕ ಆರೋಗ್ಯದಿಂದ ಇರುತ್ತೇವೆ. ಹಾಗಾಗಿ ನಮ್ಮ ತ್ವಚೆ ಕೂಡ ಆರೋಗ್ಯದಿಂದ ಇರುತ್ತದೆ. ಆದರೆ ಈ ಸಮಯದಲ್ಲಿ ತ್ವಚೆಯ ಬಗ್ಗೆ ಗಮನ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂಬುದನ್ನು ನಾವು ಮರೆಯುತ್ತೇವೆ. ಅಂದರೆ ಈ ವಯಸ್ಸಿನಲ್ಲಿ ನಾವು ಚರ್ಮದ ಬಗ್ಗೆ ಸರಿಯಾಗಿ ಕೇರ್ ತೆಗೆದುಕೊಳ್ಳದಿದ್ದರೆ ನಂತರ ಸಡಿಲವಾದ ಚರ್ಮ, ನಿರ್ಜೀವ ಮತ್ತು ಒಣ ಚರ್ಮದಂತಹ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ನಾವು ಮರೆಯುತ್ತೇವೆ. 20 ರಿಂದ 30ನೇ ವಯಸ್ಸಿನಲ್ಲಿ ಕೆಲವು ಸಿಂಪಲ್ ಸಲಹೆಗಳನ್ನು ಮೈಗೂಡಿಸಿಕೊಂಡರೆ ಜೀವನದುದ್ದಕ್ಕೂ ಹೊಳೆಯುವ ಮತ್ತು ಯಂಗ್ ಆದ ತ್ವಚೆ ನಿಮ್ಮದಾಗುತ್ತದೆ.

ಜೀವನದುದ್ದಕ್ಕೂ ಯಂಗ್ ಆಗಿ ಕಾಣಲು 20 ರಿಂದ 30ನೇ ವಯಸ್ಸಿನಲ್ಲಿ ಈ ಸಿಂಪಲ್ ಟಿಪ್ಸ್ ಅನುಸರಿಸಿ:
ಜಲಸಂಚಯನ ಅತ್ಯಂತ ಮುಖ್ಯ:
ಚರ್ಮವನ್ನು ಸಂಪೂರ್ಣವಾಗಿ ದೋಷರಹಿತ ಮಾಡಲು ಹೈಡ್ರೇಶನ್ ಅತ್ಯಂತ ಮುಖ್ಯ. ಇದು ಚರ್ಮವನ್ನು ಶುಷ್ಕತೆಯಿಂದ ರಕ್ಷಿಸುತ್ತದೆ ಮತ್ತು ತೇವಾಂಶವನ್ನು ಒದಗಿಸುತ್ತದೆ. ಇದಕ್ಕಾಗಿ, 20 ರಿಂದ 30 ವರ್ಷ ವಯಸ್ಸಿನ ಜನರು ಪ್ರತಿದಿನ ಸುಮಾರು 3 ಲೀಟರ್ ನೀರನ್ನು ಕುಡಿಯಬೇಕು. ಇದರೊಂದಿಗೆ, ನೀವು ವಾರಕ್ಕೆ 1 ರಿಂದ 2 ಬಾರಿ ಮುಖಕ್ಕೆ ಹೈಡ್ರೇಶನ್ ಮಾಸ್ಕ್ ಅನ್ನು ಸಹ ಅನ್ವಯಿಸಬಹುದು.

ಮಾಯಿಶ್ಚರೈಸರ್:
ಎಣ್ಣೆಯುಕ್ತ ಚರ್ಮ ಹೊಂದಿರುವ ಜನರು ತಮಗೆ ಮಾಯಿಶ್ಚರೈಸರ್ ಅಗತ್ಯವಿಲ್ಲ ಎಂದು ಭಾವಿಸುತ್ತಾರೆ. ಆದರೆ, ನಿಮ್ಮ ಚರ್ಮವು ಶುಷ್ಕವಾಗಿರಲಿ ಅಥವಾ ಎಣ್ಣೆಯುಕ್ತವಾಗಿರಲಿ ಅಥವಾ ಸಾಮಾನ್ಯವಾಗಿರಲಿ ಮಾಯಿಶ್ಚರೈಸರ್ (Moisturizer) ಎಲ್ಲರಿಗೂ ಅತ್ಯಗತ್ಯ, ಇದು ಚರ್ಮವನ್ನು ಹೊಳೆಯುವಂತೆ ಮಾಡಲು  (Beauty Tips For Glowing Skin) ಸಹಾಯ ಮಾಡುತ್ತದೆ.

ಇದನ್ನೂ ಓದಿ- Skin Care: ಕೇವಲ 2 ಚಮಚ ಮೊಸರನ್ನು ಮುಖಕ್ಕೆ ಹಚ್ಚಿ ಚರ್ಮದ ಸಮಸ್ಯೆಗಳಿಗೆ ಹೇಳಿ ಬೈ! ಬೈ!

ನೀವು ಸನ್‌ಸ್ಕ್ರೀನ್ ಬಳಸುತ್ತೀರಾ?
ವಯಸ್ಸಾಗುವವರೆಗೂ ಚರ್ಮವನ್ನು ಹೊಳೆಯುವಂತೆ ಕಾಪಾಡಿಕೊಳ್ಳಲು ಸನ್‌ಸ್ಕ್ರೀನ್ (Sunscreen) ಅನ್ನು ಬಳಸಬೇಕು. ಏಕೆಂದರೆ, ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಣೆ ನೀಡುವುದಲ್ಲದೆ, ಚರ್ಮವನ್ನು ಪೋಷಣೆ ಮಾಡುತ್ತದೆ.

ಮಸಾಜ್ ಕೂಡಾ ಅಗತ್ಯ: 
ಹೊಳೆಯುವ ಚರ್ಮಕ್ಕೆ ಸರಿಯಾದ ರಕ್ತ ಪರಿಚಲನೆ ಕೂಡ ಬಹಳ ಮುಖ್ಯ. ಇದರಿಂದಾಗಿ ಚರ್ಮವು ಸಾಕಷ್ಟು ಪೌಷ್ಟಿಕಾಂಶವನ್ನು ಪಡೆಯುತ್ತದೆ. 20 ರಿಂದ 30 ನೇ ವಯಸ್ಸಿನಲ್ಲಿ ನೀವು ನಿಮ್ಮ ಚರ್ಮವನ್ನು ನಿಯಮಿತವಾಗಿ ಮಸಾಜ್ ಮಾಡುವುದರಿಂದ ನಿಮ್ಮ ಚರ್ಮದ ಆರೋಗ್ಯ (Skin Care) ಚೆನ್ನಾಗಿರುತ್ತದೆ.

ನಿಮ್ಮ ಚರ್ಮದ ಪ್ರಕಾರ ಯಾವುದು?
20 ರಿಂದ 30 ವರ್ಷ ವಯಸ್ಸಿನ ಜನರು ತಮ್ಮ ಚರ್ಮದ ಪ್ರಕಾರವನ್ನು ತಿಳಿದಿರಬೇಕು. ಇದರಿಂದ ನೀವು ಅಗತ್ಯ ಮತ್ತು ಸರಿಯಾದ ಸೌಂದರ್ಯ ಉತ್ಪನ್ನಗಳನ್ನು ಬಳಸಬಹುದು. ತಪ್ಪಾದ ಸೌಂದರ್ಯ ಉತ್ಪನ್ನವನ್ನು ಬಳಸುವುದು ಚರ್ಮವನ್ನು ಹಾನಿಗೊಳಿಸುತ್ತದೆ ಮತ್ತು ಮುಖದ ಹೊಳಪು ಕೂಡ ಕಡಿಮೆಯಾಗುತ್ತದೆ.

ಇದನ್ನೂ ಓದಿ- Ice Beauty Tips: ಮುಖಕ್ಕೆ ಐಸ್ ಮಸಾಜ್ ಮಾಡುವಾಗ ಮರೆತು ಕೂಡ ಈ ತಪ್ಪುಗಳನ್ನು ಮಾಡಬೇಡಿ

ರಾತ್ರಿಯಲ್ಲಿ ಈ ಕೆಲಸವನ್ನು ಮಾಡಲು ಮರೆಯಬೇಡಿ:
ಹೊಳೆಯುವ ಚರ್ಮಕ್ಕಾಗಿ ನೀವು ದುಬಾರಿ ಸೌಂದರ್ಯ ಉತ್ಪನ್ನಗಳನ್ನು ಬಳಸಬೇಕಾಗಿಲ್ಲ. ಬದಲಾಗಿ, ಚರ್ಮವನ್ನು ಶುಚಿಗೊಳಿಸುವಿಕೆ, ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್ ಮೂಲಕವೂ ಚರ್ಮವನ್ನು ಹೊಳೆಯುವಂತೆ ಮಾಡಬಹುದು. ಹಾಗಾಗಿ ಪ್ರತಿದಿನ ರಾತ್ರಿ ಮಲಗುವ ಮುನ್ನ ನಿಮ್ಮ ಮುಖವನ್ನು ಸ್ವಚ್ಛಗೊಳಿಸಲು ಮರೆಯದಿರಿ.

ಸೂಚನೆ: ಇಲ್ಲಿ ನೀಡಲಾಗಿರುವ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಬದಲಿಯಾಗಿರುವುದಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ. ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News