ಪಾಟ್ನಾ: ಬಿಹಾರ ಚುನಾವಣೆಯಲ್ಲಿ 243 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಹಂತಗಳಲ್ಲಿ ಮತದಾನದ ನಂತರ ಇಂದು ಮತ ಎಣಿಕೆ ಆರಂಭವಾಗಿದೆ. ಶಿವಸೇನೆ ಬಿಹಾರ ಚುನಾವಣೆಯ  (Bihar Assembly Elections)  ಫಲಿತಾಂಶಗಳ ಬಗ್ಗೆ ಉತ್ಸುಕವಾಗಿದ್ದು ಅವರ ಮುಖವಾಣಿ ಸಾಮ್ನಾದಲ್ಲಿ ತೇಜಶ್ವಿ ಯಾದವ್ (Tejashwi Yadav) ಅವರನ್ನು ಜೋ ಬಿಡೆನ್‌ಗೆ ಹೋಲಿಸಿ ಅವರ ವಿಜಯದ ಬಗ್ಗೆ ಭವಿಷ್ಯ ನುಡಿದಿದೆ. ಇದರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರನ್ನೂ ಶಿವಸೇನೆ ಗುರಿಯಾಗಿಸಿದೆ.


COMMERCIAL BREAK
SCROLL TO CONTINUE READING

ತೇಜಸ್ವಿ ಮತ್ತು ಬಿಡೆನ್!…  
ಶಿವಸೇನೆ (Shiv Sena) ಸಾಮ್ನಾದಲ್ಲಿ 'ತೇಜಸ್ವಿ ಮತ್ತು ಬಿಡೆನ್!…' ಎಂಬ ಲೇಖನದಲ್ಲಿ, 'ಪವರ್ ಓವರ್. ಅಮೆರಿಕಾದಂತೆ ಭಾರತದ ಬಿಹಾರದಲ್ಲಿ ಅದೇ ರೀತಿಯ ಅಧಿಕಾರದ ಸ್ಪಷ್ಟ ಲಕ್ಷಣಗಳು ಕಾಣುತ್ತಿವೆ. ಪ್ರಧಾನಿ ಮೋದಿ ಮತ್ತು ನಿತೀಶ್ ಕುಮಾರ್ ಅವರಂತಹ ಇತರ ನಾಯಕರು ಯುವ ನಾಯಕ ತೇಜಶ್ವಿ ಯಾದವ್ ಅವರ ಮುಂದೆ ನಿಲ್ಲಲು ಸಾಧ್ಯವಾಗಲಿಲ್ಲ. ಸುಳ್ಳಿನ ಆಕಾಶಬುಟ್ಟಿಗಳು ಗಾಳಿಯಲ್ಲಿ ಉಳಿದುಕೊಂಡಿವೆ, ಅವು ಗಾಳಿಯಲ್ಲಿ ಕಣ್ಮರೆಯಾಗುತ್ತವೆ ಎಂದು ಹೇಳಿದೆ.


ಇಂದು ಬಹುನಿರೀಕ್ಷಿತ ಬಿಹಾರ ಚುನಾವಣೆ ಫಲಿತಾಂಶ: ಯಾರಿಗೆ ಒಲಿಯಲಿದೆ ಮುಖ್ಯಮಂತ್ರಿ ಪಟ್ಟ!


ಪಿಎಂ ಮೋದಿ ಮತ್ತು ನಿತೀಶ್ ಕುಮಾರ್ ಅವರನ್ನು ಗುರಿಯಾಗಿಸಿರುವ ಶಿವಸೇನೆ, ಬಿಹಾರದ ಜನತೆ ಪ್ರಧಾನಿ ಮೋದಿ, ನಿತೀಶ್ ಕುಮಾರ್ ಅವರ ಮುಂದೆ ಮಂಡಿಯೂರಿರದೆ ಚುನಾವಣೆಯನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ. ಪಿಎಂ ಮೋದಿ ಮತ್ತು ನಿತೀಶ್ ಕುಮಾರ್ ಅವರಂತಹ ನಾಯಕರು ನಿರ್ಜೀವ ಮಡಕೆಗಳ ಎದುರು ಗಂಟಲು ಹರಿದುಕೊಳ್ಳುತ್ತಿದ್ದಾಗ, ತೇಜಶ್ವಿ ಯಾದವ್ ಅವರ ಸಭೆಗಳಲ್ಲಿ ಜನಸಾಗರ ಜಮಾಯಿಸುತ್ತಿತ್ತು. ದೇಶವು ಅಂತಹ ಚಿತ್ರವನ್ನು ನೋಡಿದೆ. ಬಿಹಾರದಲ್ಲಿ ಜಂಗಲ್ ರಾಜ್ ಮತ್ತೆ ಬರಲಿದ್ದಾರೆ ಎಂಬ ಭಯವನ್ನು ತೋರಿಸಲಾಗಿದೆ. ಆದರೆ ಮೊದಲು ನೀವು ಹೋಗಿ, ಜಂಗಲ್ ರಾಜ್ ಬಂದರೂ ನಾವು ವ್ಯವಹರಿಸುತ್ತೇವೆ ಎಂಬ ಸ್ಪಷ್ಟ ಸಂದೇಶವನ್ನು ಜನತೆ ನೀಡಿದ್ದಾರೆ ಎಂದು ಹೇಳಿದೆ.


ಈ ಬಾರಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿನ 5 ಪ್ರಮುಖ ವಿಷಯಗಳಿವು


ಅಮೇರಿಕಾ ಚುನಾವಣೆಯೊಂದಿಗೆ ಬಿಹಾರ ಚುನಾವಣೆಯನ್ನು ತುಲನೆ ಮಾಡಿರುವ  ಶಿವಸೇನಾ ತೇಜಶ್ವಿ ಯಾದವ್ ಅವರನ್ನು ಜೋ ಬಿಡನ್‌ಗೆ ಹೋಲಿಸಿದ್ದಾರೆ. ಸಾರ್ವಜನಿಕರು ಶ್ರೇಷ್ಠ ಮತ್ತು ಸರ್ವಶಕ್ತರು. ಬಿಡೆನ್ ಮತ್ತು ತೇಜಶ್ವಿ ಯಾದವ್ ಅವರ ಹೋರಾಟವು ಅನ್ಯಾಯ, ಅಸತ್ಯ ಮತ್ತು ಬೂಟಾಟಿಕೆಗೆ ವಿರುದ್ಧವಾಗಿತ್ತು ಮತ್ತು ಅದು ಯಶಸ್ವಿಯಾಗಿದೆ ಎಂದು ಹೇಳಿದೆ.