ನವದೆಹಲಿ: ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ನಡೆದ 5 ಸುತ್ತು ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಇಂದು ‘ಭಾರತ ಬಂದ್’ಗೆ ಕರೆ ನೀಡಿದ್ದು ಭಾರತ ಬಂದ್ (Bharat Bandh) ಗೆ ಭಾರಿ ಬೆಂಬಲ ವ್ಯಕ್ತವಾಗಿದೆ.


COMMERCIAL BREAK
SCROLL TO CONTINUE READING

ಸಂಯುಕ್ತ ಕಿಸಾನ್ ಮೋರ್ಚಾ ಕರೆ ಕೊಟ್ಟಿರುವ ‘ಭಾರತ ಬಂದ್’ಗೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್, ಅಕಾಲಿ ದಳ, ಡಿಎಂಕೆ, ಆರ್ ಜೆಡಿ, ಆಮ್ ಆದ್ಮಿ ಪಾರ್ಟಿ, ತೃಣಮೂಲ ಕಾಂಗ್ರೆಸ್, ಟಿಆರ್ ಎಸ್, ಬಿಎಸ್ ಪಿ, ಎಸ್ ಪಿ, ಎನ್ ಸಿಪಿ, ಶಿವಸೇನಾ ಹಾಗೂ ಎಡ ಪಕ್ಷಗಳು ಬೆಂಬಲ ಘೋಷಿಸಿವೆ.


ಇನ್ನೊಂದೆಡೆ ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ, ಆಫೀಸರ್ಸ್ ಯೂನಿಯನ್, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್, ಇಂಡಿಯನ್ ಟೂರಿಸ್ಟ್ ಟ್ರಾನ್ಸ್‌ಪೋರ್ಟ್, ದೆಹಲಿ ಗೂಡ್ಸ್ ಟ್ರಾನ್ಸ್‌ಪೋರ್ಟ್ ಹಾಗೂ ಇನ್ನಿತರ ಸಂಘಟನೆಗಳೂ 'ಭಾರತ್ ಬಂದ್'ಗೆ ಬೆಂಬಲ ಸೂಚಿಸಿವೆ.‌ ರಾಜಕೀಯ ಪಕ್ಷಗಳು ಹಾಗೂ ಸಂಘ-ಸಂಸ್ಥೆಗಳು ಬೆಂಬಲಿಸುವುದರ ಜೊತೆಗೆ ಪಂಜಾಬಿನ ಕ್ರೀಡಾಪಟುಗಳು, ವೈದ್ಯರು, ಫ್ಯಾಷನ್ ಡಿಸೈನರುಗಳು, ವಿದ್ಯಾರ್ಥಿಗಳು ಕೂಡ 'ಭಾರತ್ ಬಂದ್'ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.


ಕ್ರೀಡಾಪಟುಗಳ ಪ್ರಶಸ್ತಿ ವಾಪಸ್:
ಕೇಂದ್ರ ಸರ್ಕಾರ (Central Government) ಜಾರಿಗೆ ತಂದಿರುವ ರೈತ ವಿರೋಧಿ ಕಾನೂನುಗಳ ವಿರುದ್ದ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಪಂಜಾಬ್‌ನ 30ಕ್ಕೂ ಹೆಚ್ಚು ಕ್ರೀಡಾಪಟುಗಳು ಪ್ರಶಸ್ತಿ ಹಿಂತಿರುಗಿಸಲು ನಿರ್ಧರಿಸಿದ್ದಾರೆ. ಪ್ರಶಸ್ತಿಗಳನ್ನು ವಾಪಸ್ ಮಾಡಲು ರಾಷ್ಟ್ರಪತಿ ಭವನದತ್ತ ತೆರಳಿದ್ದ ಅವರನ್ನು ಸೋಮವಾರ ರಸ್ತೆ ಮಧ್ಯೆಯೇ ದೆಹಲಿ ಪೊಲೀಸರು ತಡೆದಿದ್ದಾರೆ.


Bharat Bandh: ಏನಿರುತ್ತೆ? ಏನಿರಲ್ಲ?


ವೈದ್ಯರು, ಪ್ಯಾಷನ್ ಡಿಸೈನರ್‌ ಗಳ ಬೆಂಬಲ:
ರೈತರು (Farmers) ಕರೆ ನಿಡಿರುವ ಭಾರತ್ ಬಂದ್‌ಗೆ ಪಂಜಾನಿನ ವೈದ್ಯರು, ಪ್ಯಾಷನ್ ಡಿಸೈನರ್‌ ಕೂಡ ಬೆಂಬಲಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸುವವರು ರೈತರೇ ಆಗಿರಬೇಕಿಲ್ಲ, ನಾವು ಯಾವ ಕೆಲಸ ಮಾಡುತ್ತೇವೆ ಎನ್ನುವುದು ಮುಖ್ಯವಲ್ಲ. ನಾವೆಲ್ಲರೂ ರೈತ ಕುಟುಂಬಗಳಿಗೆ ಸೇರಿದವರೇ ಎಂದು ಹೇಳಿದ್ದಾರೆ.


ಸಂಚಾರದಲ್ಲಿ ತೊಂದರೆ ಸಾಧ್ಯತೆ:
ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ದೆಹಲಿ-ಎನ್‌ಸಿಆರ್ ಸೇರಿದಂತೆ ದೇಶಾದ್ಯಂತ ಸರಕುಗಳ ಸಾಗಣೆ ಮತ್ತು ಸರಬರಾಜನ್ನು ನಿಲ್ಲಿಸಲಾಗುವುದು ಎಂದು ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್ (All India Auto Transport Congress) ಹಾಗೂ ಇನ್ನಿತರ ಸಂಘಟನೆಗಳು ಹೇಳಿವೆ. ಇದರಿಂದ ಸರಕುಗಳ ಸಾಗಣೆ ಮತ್ತು ಸರಬರಾಜಿನಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. 


ಮತ್ತೆ ಡಿ.8 ರಂದು ರಾಜ್ಯ ರೈತರಿಂದ 'ಕರ್ನಾಟಕ ಬಂದ್ ಗೆ ಕರೆ'


ರೈತರ ಪಾಲಿಗೆ ಮರಣಶಾಸನವಾಗಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು.‌ ರೈತ ಬೆಳೆಯುವ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಬೇಕು. ರೈತರಿಗೆ ಪೂರಕವಾಗಿಲ್ಲದ ವಿದ್ಯುತ್ ಕಾಯಿದೆಯನ್ನು ಹಿಂಪಡೆಯಬೇಕು ಎಂಬವು ರೈತರ ಪ್ರಮುಖ ಹಕ್ಕೊತ್ತಾಯಗಳು.


ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸಲಾಗುವುದು. ಎಪಿಎಂಸಿ ಮಂಡಿಗಳ ಬಗೆಗಿನ ಕಳವಳವನ್ನು ಹೋಗಲಾಡಿಸಲು ಪ್ರಯತ್ನಿಸಲಾಗುವುದು. ಕನಿಷ್ಠ ಬೆಂಬಲ ಬೆಲೆ (MSP) ಪದ್ಧತಿ ಮುಂದುವರೆಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.‌ ಸಚಿವತ್ರಯರ ಪ್ರಸ್ತಾಪವನ್ನು ರೈತರು ಒಪ್ಪಿಕೊಳ್ಳಲಿಲ್ಲ. ರೈತರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪೊಕೊಂಡಿಲ್ಲ.‌ ಇದರಿಂದ ಈವರೆಗೆ ನಡೆದ 4 ಸಭೆಗಳೂ ವಿಫಲವಾಗಿವೆ. ಡಿಸೆಂಬರ್ 9ಕ್ಕೆ ಮತ್ತೊಂದು ಸಭೆ ಕರೆಯಲಾಗಿದೆ.