ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ಸಮಾಜ ಸೇವಕ ನಾನಾಜಿ ದೇಶಮುಖ್‌ ಮತ್ತು ಗಾಯಕ ಭೂಪೇನ್‌ ಹಜಾರಿಕಾ ಅವರಿಗೆ ದೇಶದ ಪ್ರತಿಷ್ಠಿತ ಪ್ರಶಸ್ತಿ 'ಭಾರತ ರತ್ನ' ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ. ಭೂಪೇನ್‌ ದಾ ಹಾಗೂ ನಾನಾಜಿಯವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿ ಪುರಸ್ಕರಿಸಲಾಗಿದೆ. 


COMMERCIAL BREAK
SCROLL TO CONTINUE READING

ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.


ಭಾರತ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಷಯ ಕೋರಿದ್ದಾರೆ. ಅಪ್ರತಿಮ ಸಂಸದೀಯ ಪಟುವಾಗಿದ್ದ ಪ್ರಣವ್ ಮುಖರ್ಜಿ, ದೇಶಕ್ಕಾಗಿ  ಹಲವು ದಶಕಗಳ ಕಾಲ ಸ್ವಾರ್ಥ ಇಲ್ಲದೆ ಶ್ರಮಿಸಿದ್ದಾರೆ. ಅವರ ಬುದ್ಧಿವಂತಿಕೆ, ದೂರದೃಷ್ಟಿ ಹೋಲಿಸಲಾಗದಂತಹುದು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.



ಭೂಪನ್ ಹಜಾರಿಕಾ ಅವರ ಹಾಡುಗಳು ಮತ್ತು ಸಂಗೀತ ಎಲ್ಲಾ  ಪೀಳಿಗೆಯ ಜನರು ಪ್ರಶಂಸಿವಂತಿವೆ. ಅವರು ನ್ಯಾಯ, ಸೌಹಾರ್ದತೆ ಹಾಗೂ ಸಹೋದರ ಗುಣವನ್ನು ಹೊರಸೂಸುತ್ತಿದ್ದರಲ್ಲದೇ, ಸಂಗೀತ ಮತ್ತು ಸಾಹಿತ್ಯದ ಮೂಲಕ ಭಾರತೀಯ ಸಂಗೀತ ಸಂಪ್ರದಾಯವನ್ನು ವಿಶ್ವ ಮಟ್ಟದ ಪ್ರಸಿದ್ಧಿ ಪಡಿಸಿದ್ದರು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.



ನಾನಾಜಿ ದೇಶ್ ಮುಖ್ ಗ್ರಾಮೀಣಾಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಗ್ರಾಮವಾಸಿಗಳಿಗೆ ಅಧಿಕಾರ ನೀಡುವ ಹೊಸ ಮಾದರಿಯನ್ನು ಜಾರಿಗೆ ತಂದ ಅವರು, ಹಿಂದುಳಿದ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ನಿಜ ಹೇಳಬೇಕೆಂದರೆ ಅವರೇ ಒಂದು ಭಾರತ ರತ್ನ ಎಂದು ಪ್ರಧಾನಿ ಹೇಳಿದ್ದಾರೆ.