ನವದೆಹಲಿ: 2018 ರ ಕೊರೆಗಾಂವ್-ಭೀಮಾ ಹಿಂಸಾಚಾರದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು ವಹಿಸಿಕೊಂಡಿದೆ, ಮಹಾರಾಷ್ಟ್ರ ಸರ್ಕಾರವು ಪುಣೆಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ಒಂದು ದಿನದ ನಂತರ ಈ ವಿಷಯವನ್ನು ಮುಂದುವರಿಸಲು ಕರೆ ನೀಡಿತು.


COMMERCIAL BREAK
SCROLL TO CONTINUE READING

ಒಂದೆಡೆ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎಲ್ಲ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಸಿದ್ದತೆ ನಡೆಸುತ್ತಿರುವ ಬೆನ್ನಲ್ಲೇ ಈಗ ಕೇಂದ್ರದ ನಿರ್ಧಾರ ಬಂದಿದೆ.ಈ ನಡೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ "ಕೋರೆಗಾಂವ್-ಭೀಮಾ ತನಿಖೆಯನ್ನು ಎನ್ಐಎಗೆ ಹಸ್ತಾಂತರಿಸುವುದು ಸಂವಿಧಾನಕ್ಕೆ ವಿರುದ್ಧವಾಗಿದೆ, ಮತ್ತು ನಾನು ಅದನ್ನು ಖಂಡಿಸುತ್ತೇನೆ" ಎಂದು ಹೇಳಿದರು, ಈ ನಿರ್ಧಾರವನ್ನು ರಾಜ್ಯ ಸರ್ಕಾರದ ಒಪ್ಪಿಗೆಯಿಲ್ಲದೆ ತೆಗೆದುಕೊಳ್ಳಲಾಗಿದೆ ಎಂದು ಅವರು ಆರೋಪಿಸಿದರು.



ಕೊರೆಗಾಂವ್-ಭೀಮಾ ಪ್ರಕರಣವು ರಾಜಕೀಯವಾಗಿ ಸದ್ದು ಹೆಚ್ಚು ಮಾಡಿದ ಪ್ರಕರಣವಾಗಿದ್ದು , ಬಿಜೆಪಿ ತನ್ನ ಸಿದ್ಧಾಂತವನ್ನು ವಿರೋಧಿಸುವ ಕಾರ್ಯಕರ್ತರನ್ನು ಜೈಲಿಗೆ ತಳ್ಳುತ್ತಿದೆ ಮತ್ತು ನಗರ ನಕ್ಸಲ್ ಎಂದು ಬ್ರಾಂಡ್ ಮಾಡುತ್ತಿದೆ ಎನ್ನುವ ಆರೋಪವನ್ನು ಪ್ರತಿಪಕ್ಷಗಳಿಂದ ಎದುರಿಸುತ್ತಿದೆ.ಈಗ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ನಿರ್ಧಾರವನ್ನು ಬೆಂಬಲಿಸಿದ್ದು, ಉದ್ಧವ್ ಠಾಕ್ರೆ ಅವರು ಈ ಪ್ರಕರಣದ ಆರೋಪಿಗಳಾದ ನಗರ ನಕ್ಸಲರನ್ನು ರಾಜಕೀಯ ಕಾರಣಗಳಿಗಾಗಿ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ಆರೋಪಿಸಿದರು.


'ಮಹಾರಾಷ್ಟ್ರ ಪೊಲೀಸರು ತನಿಖೆ ನಡೆಸಿ ನಗರ ನಕ್ಸಲರನ್ನು ಬಹಿರಂಗಪಡಿಸಿದ್ದು, ಸುಪ್ರೀಂ ಕೋರ್ಟ್ ಕೂಡ ಮಹಾರಾಷ್ಟ್ರ ಪೊಲೀಸರ ಪರವಾಗಿ ತೀರ್ಪು ನೀಡಿತು. ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ, ಕೆಲವರು - ಮತಗಳ ಸಲುವಾಗಿ - ಪೊಲೀಸರನ್ನು ನಿರಾಶೆಗೊಳಿಸುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಚಾರ್ಜ್‌ಶೀಟ್‌ಗಳನ್ನು ಸಹ ಸಲ್ಲಿಸಲಾಗಿತ್ತು, ಆದರೆ ಮತಗಳ ಸಲುವಾಗಿ ಅವರು ಆರೋಪಗಳನ್ನು ಬದಲಾಯಿಸಲು ಪ್ರಯತ್ನಿಸಿದರು, "ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.