ರೈಲ್ವೆ ಟಿಕೆಟ್ ಬುಕಿಂಗ್‌ನಲ್ಲಿ ಮಹತ್ವದ ಬದಲಾವಣೆ, ಈ ವಿವರ ನೀಡಿದರಷ್ಟೇ ಬುಕಿಂಗ್ ಸಾಧ್ಯ
ವಾಸ್ತವವಾಗಿ, ಟಿಕೆಟ್ ಕಾಯ್ದಿರಿಸುವ ನಿಯಮಗಳನ್ನು ಬದಲಾಯಿಸಲಾಗಿದೆ. ಈಗ ಟಿಕೆಟ್ ಕಾಯ್ದಿರಿಸುವಾಗ ಈ ಮಾಹಿತಿಗಳನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ.
ನವದೆಹಲಿ: ಲಾಕ್‌ಡೌನ್ ಮಧ್ಯೆ ಭಾರತೀಯ ರೈಲ್ವೆ (INDIAN RAILWAYS) ರೈಲುಗಳಿಗೆ ಆನ್‌ಲೈನ್ ಬುಕಿಂಗ್ ಪ್ರಾರಂಭಿಸಿದೆ. ನೀವೂ ಸಹ ರೈಲ್ವೆಯ ವಿಶೇಷ ರೈಲಿನಲ್ಲಿ ಪ್ರಯಾಣಿಸಲು ಹೋಗುತ್ತಿದ್ದರೆ ರೈಲ್ವೆ ಬುಕಿಂಗ್‌ನಲ್ಲಿ ಮಾಡಲಾಗಿರುವ ಈ ಮಹತ್ವದ ಬದಲಾವಣೆಗಳ ಬಗ್ಗೆ ಮೊದಲು ತಿಳಿಯಿರಿ.
ವಾಸ್ತವವಾಗಿ ಟಿಕೆಟ್ ಕಾಯ್ದಿರಿಸುವ ನಿಯಮಗಳನ್ನು ಬದಲಾಯಿಸಲಾಗಿದೆ. ಈಗ ಟಿಕೆಟ್ ಕಾಯ್ದಿರಿಸುವಾಗ ಈ ಮಾಹಿತಿಗಳನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಭಾರತೀಯ ರೈಲ್ವೆಯೊಂದಿಗೆ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ತಮ್ಮ ಗಮ್ಯಸ್ಥಾನದ ಸಂಪೂರ್ಣ ವಿಳಾಸವನ್ನು ನೀಡಬೇಕಾಗುತ್ತದೆ. ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ ನೀವು ಎಲ್ಲಿಗೆ ಹೋಗುತ್ತಿದ್ದೀರಿ ಎಂಬುದರ ಸಂಪೂರ್ಣ ವಿವರವನ್ನು ಒದಗಿಸಬೇಕು.
ಈ ಕ್ರಮವನ್ನು ಏಕೆ ತೆಗೆದುಕೊಳ್ಳಲಾಗಿದೆ?
ಕರೋನಾ ವಿರುದ್ಧದ ಯುದ್ಧವನ್ನು ಸುಲಭವಾಗಿಸಲು ಭಾರತೀಯ ರೈಲ್ವೆ ಈ ಕ್ರಮವನ್ನು ಕೈಗೊಂಡಿದೆ. ಟಿಕೆಟ್ ಬುಕಿಂಗ್‌ನಲ್ಲಿ ಹೊಸ ವೈಶಿಷ್ಟ್ಯಗಳನ್ನು ಸೇರಿಸುವುದರೊಂದಿಗೆ ಅಗತ್ಯವಿದ್ದರೆ ಪ್ರಯಾಣಿಕರನ್ನು ಸುಲಭವಾಗಿ ಕಂಡುಹಿಡಿಯಬಹುದು. ಅಲ್ಲದೆ ಕರೋನಾಗೆ ಸಂಬಂಧಿಸಿದ ಮಾಹಿತಿಯನ್ನು ಅವನಿಂದ ಪಡೆಯಬಹುದು. ಇದನ್ನು 13 ಮೇ 2020 ರಿಂದ ಪ್ರಾರಂಭಿಸಲಾಗಿದೆ. ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ, ಪ್ರಯಾಣಿಕರು ತಮ್ಮ ಮನೆಯ ಸಂಪೂರ್ಣ ವಿಳಾಸವನ್ನು / ಅಥವಾ ಅವರು ಹೋಗುವ ಸ್ಥಳದ ವಿಳಾಸವನ್ನು ಒದಗಿಸಬೇಕಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಅಂಕಣವನ್ನು ನೀಡಲಾಗಿದೆ.
ರೈಲಿನಲ್ಲಿ ಸಂಪರ್ಕಕ್ಕೆ ಬರುವವರನ್ನು ಪತ್ತೆ ಹಚ್ಚಲು ಪರಿಣಾಮಕಾರಿ ಮಾರ್ಗ ಕಂಡು ಹಿಡಿದ ರೈಲ್ವೆ
ಜೂನ್ 30 ರವರೆಗೆ ಬುಕಿಂಗ್ ರದ್ದು:
ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮತ್ತೊಂದು ಮಾಹಿತಿಯನ್ನು ಭಾರತೀಯ ರೈಲ್ವೆ ಬಿಡುಗಡೆ ಮಾಡಿದೆ. ಅದರಂತೆ ಜೂನ್ 30 ರವರೆಗೆ ಕಾಯ್ದಿರಿಸಿದ ಎಲ್ಲಾ ಟಿಕೆಟ್‌ಗಳನ್ನು ರದ್ದುಪಡಿಸಲಾಗಿದೆ. ಸಾಮಾನ್ಯ ರೈಲುಗಳು ಜೂನ್ 30ರವರೆಗೆ ಓಡುವುದಿಲ್ಲ ಎಂದು ಹೇಳಲಾಗಿದ್ದು ಟಿಕೆಟ್ ಕಾಯ್ದಿರಿಸಿದ ಎಲ್ಲ ಪ್ರಯಾಣಿಕರಿಗೆ ಶೀಘ್ರದಲ್ಲೇ ಮರುಪಾವತಿ ನೀಡಲಾಗುವುದು. ಈ ಸಮಯದಲ್ಲಿ ಕಾರ್ಮಿಕ ರೈಲುಗಳು ಮತ್ತು ವಿಶೇಷ ರೈಲುಗಳು ಓಡುತ್ತಲೇ ಇರುತ್ತವೆ.
ಈ ರೈಲುಗಳಲ್ಲಿ ಬುಕಿಂಗ್ ಲಭ್ಯ:
ಪ್ರಸ್ತುತ 15 ಮಾರ್ಗಗಳಲ್ಲಿ ರಾಜಧಾನಿ ವಿಶೇಷ ರೈಲುಗಳು ಮಾತ್ರ ಓಡುತ್ತಿದ್ದು, ಇದರಲ್ಲಿ 7 ದಿನಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬಹುದು. ಈ ರೈಲುಗಳು ಮೇ 22ರಿಂದ ಓಡಲಿದ್ದು ಮೇ 15 ರಿಂದ ಬುಕಿಂಗ್ ಪ್ರಾರಂಭವಾಗಲಿದೆ. ಇವುಗಳಲ್ಲಿ ಐಆರ್‌ಸಿಟಿಸಿ (IRCTC) ವೆಬ್‌ಸೈಟ್ ಮೂಲಕ ಮಾತ್ರ ಬುಕಿಂಗ್ ಮಾಡಲಾಗುತ್ತದೆ. ಪ್ರಸ್ತುತ ಆರ್‌ಎಸಿ ಟಿಕೆಟ್‌ಗಳು ರೈಲುಗಳಲ್ಲಿ ಲಭ್ಯವಿರುವುದಿಲ್ಲ, ಆದರೆ ವೈಟಿಂಗ್ ಲಿಸ್ಟ್ ನಲ್ಲಿ ಟಿಕೆಟ್‌ಗಳು ಲಭ್ಯವಿರುತ್ತವೆ.