ನವದೆಹಲಿ: Stock Limit on Pulses - ಕೊರೊನಾ ಕಾಲದಲ್ಲಿ (Corona Pandemic)ಜನಸಾಮಾನ್ಯರಿಗೆ ಭಾರಿ ಪರಿಹಾರ ಒದಗಿಸಲು ಕೇಂದ್ರ ಮೋದಿ ನೇತೃತ್ವದ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ದ್ವಿದಳ ಧಾನ್ಯಗಳ ಹಣದುಬ್ಬರಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ (Modi Government) ದ್ವಿದಳ ಧಾನ್ಯಗಳ ಮೇಲೆ ಸ್ಟಾಕ್ ಮಿತಿಯನ್ನು (Stock Limit) ವಿಧಿಸಿದೆ. ಈ ಆದೇಶವನ್ನು ತಕ್ಷಣದಿಂದ ಜಾರಿಗೆ ಬಂದಿದ್ದು, ಇದನ್ನು ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ಗಿರಣಿ ಮಾಲೀಕರು ಮತ್ತು ಆಮದುದಾರರಿಗೆ ಇದು ಅನ್ವಯಿಸಲಿದೆ.


COMMERCIAL BREAK
SCROLL TO CONTINUE READING

ಅಕ್ಟೋಬರ್ 31ರವರೆಗೆ ಸ್ಟಾಕ್ ಲಿಮಿಟ್
ದ್ವಿದಳ ಧಾನ್ಯಗಳ ಬೆಲೆ ಏರುತ್ತಿರುವ ದೃಷ್ಟಿಯಿಂದ, ಅಕ್ಟೋಬರ್ 31 ರವರೆಗೆ ಹೆಸರು ಬೆಲೆ ಹೊರತುಪಡಿಸಿ ಎಲ್ಲಾ ದ್ವಿದಳ ಧಾನ್ಯಗಳಿಗೆ ಸರ್ಕಾರ ಸ್ಟಾಕ್ ಮಿತಿಯನ್ನು ವಿಧಿಸಿದೆ. ಸರ್ಕಾರವು ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನದನ್ನು ಯಾವುದೇ ದ್ವಿದಳ ಧಾನ್ಯಗಳು ಅಥವಾ ದ್ವಿದಳ ಧಾನ್ಯಗಳ ದಾಸ್ತಾನು ಇಡಲು ವ್ಯಾಪಾರಿಗಳಿಗೆ ಇದರಿಂದ ಸಾಧ್ಯವಾಗುವುದಿಲ್ಲ.


ಇದನ್ನೂ ಓದಿ- ಅತೀ ಹೆಚ್ಚು ಕೋವಿಡ್ ಪ್ರಕರಣಗಳಿರುವ 6 ರಾಜ್ಯಗಳಿಗೆ ಕೇಂದ್ರ ತಂಡಗಳ ಭೇಟಿ!


ಚಿಲ್ಲರೆ ವ್ಯಾಪಾರಿಗಳಿಗೆ (Retail Business) 5 ಟನ್ ಸ್ಟಾಕ್ ಮಿತಿಯನ್ನು ಸರ್ಕಾರ ನಿಗದಿಪಡಿಸಿದ್ದಾರೆ, ಸಗಟು ವ್ಯಾಪಾರಿಗಳು (Wholeselers) ಮತ್ತು ಆಮದುದಾರರಿಗೆ  (Stockists)200 ಟನ್ ಮಿತಿಯನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಯಾವುದೇ ಒಂದು ವಿಧದ ಸ್ಟಾಕ್ 100 ಟನ್ ಮೀರಬಾರದು. ಸರ್ಕಾರದ ಈ ಮಿತಿಯಿಂದ ದ್ವಿದಳ ಧಾನ್ಯ ಗಿರಣಿಗಳು ತಮ್ಮ ಒಟ್ಟು ವಾರ್ಷಿಕ ಸಾಮರ್ಥ್ಯದ ಶೇಕಡಾ 25 ಕ್ಕಿಂತ ಹೆಚ್ಚು ಸ್ಟಾಕ್ ನಿರ್ವಹಿಸಲು ಸಾಧ್ಯವಾಗುವುದಿಲ್ಲ.


ಇದನ್ನೂ ಓದಿ- MSME ಅಡಿ ಚಿಲ್ಲರೆ ಮತ್ತು ಸಗಟು ವ್ಯಾಪಾರ, ಮೋದಿ ಸರ್ಕಾರದ ಮಹತ್ವದ ನಿರ್ಧಾರ


ಹೆಚ್ಚಿನ ಸ್ಟಾಕ್ ಸಂಗ್ರಹಿಸಿದರೆ ವಿವರಣೆ ಕೇಳಲಾಗುವುದು
ಒಂದು ವೇಳೆ ಸ್ಟಾಕ್ ನಿಗದಿತ ಮಿತಿಯನ್ನು ಮೀರಿದರೆ, ಅವುಗಳನ್ನು ಗ್ರಾಹಕ ವ್ಯವಹಾರಗಳ ಇಲಾಖೆಯ ಆನ್‌ಲೈನ್ ಪೋರ್ಟಲ್‌ನಲ್ಲಿ ಘೋಷಿಸಬೇಕು ಮತ್ತು ಆದೇಶದ ಅಧಿಸೂಚನೆಯ ದಿನಾಂಕದಿಂದ 30 ದಿನಗಳ ಒಳಗೆ ಸ್ಟಾಕ್ ಅನ್ನು ತರಬೇಕು. ಮಾರ್ಚ್-ಏಪ್ರಿಲ್ನಲ್ಲಿ ದ್ವಿದಳ ಧಾನ್ಯಗಳ ಬೆಲೆಯಲ್ಲಿ ಸ್ಥಿರ ಏರಿಕೆ ಕಂಡುಬಂದಿದೆ.


ಇದನ್ನೂ ಓದಿ- ಪ್ರತಿ ತಿಂಗಳು ಸರ್ಕಾರಿ ನೌಕರರ ವೇತನದಲ್ಲಿ ರೂ.7750 ವೃದ್ಧಿ, ಏನಿದು ಲೆಕ್ಕಾಚಾರ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.