ಬಿಹಾರ ವಿಧಾನಸಭಾ ಚುನಾವಣೆ 2020: ಅಕ್ಟೋಬರ್ 28 ರಿಂದ ಮೂರು ಹಂತಗಳಲ್ಲಿ ಚುನಾವಣೆ
ಚುನಾವಣಾ ಆಯೋಗವು ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಶುಕ್ರವಾರ ಪ್ರಕಟಿಸಬಹುದು.
ನವದೆಹಲಿ: ಚುನಾವಣಾ ಆಯೋಗ ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದ್ದು ಅಕ್ಟೋಬರ್ 28 ರಿಂದ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಘೋಷಿಸಿದೆ. ಈ ಪ್ರಕಟಣೆಯೊಂದಿಗೆ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಾಗಿದೆ. ಎಂಸಿಸಿ ಮಾರ್ಗಸೂಚಿಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಆಯೋಗವು ಈಗಾಗಲೇ ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ ಎಂದು ಸಿಇಸಿ ಸುನಿಲ್ ಅರೋರಾ (Sunil Arora) ತಿಳಿಸಿದ್ದಾರೆ.
ಚುನಾವಣಾ ಆಯೋಗ ಇಂದು ಮಧ್ಯಾಹ್ನ 12: 30ಕ್ಕೆ ಪತ್ರಿಕಾಗೋಷ್ಠಿ ನಡೆಸಿ ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದರು. ಬಿಹಾರ ವಿಧಾನಸಭಾ ಚುನಾವಣೆ (Bihar assembly elections) ಯ ವಿವರವಾದ ಘೋಷಣೆ ಮಾಡಿದ್ದು ಮೂರು ಹಂತಗಳಲ್ಲಿ ಬಿಹಾರದಲ್ಲಿ ಚುನಾವಣೆ ನಡೆಸಿದ್ದಾರೆ. ಆದರೆ ಕಳೆದ ಬಾರಿ ಐದು ಹಂತಗಳಲ್ಲಿ ಚುನಾವಣೆ ನಡೆದಿತ್ತು.
ಬಿಹಾರ ವಿಧಾನಸಭಾ ಚುನಾವಣೆ 2020 ವಿವರಗಳು:
ಮೊದಲ ಹಂತ: 71 ವಿಧಾನಸಭಾ ಕ್ಷೇತ್ರ, 31,000 ಮತಗಟ್ಟೆ
ಎರಡನೇ ಹಂತ: 94 ವಿಧಾನಸಭಾ ಕ್ಷೇತ್ರ, 42,000 ಮತಗಟ್ಟೆ
ಮೂರನೇ ಹಂತ: 78 ವಿಧಾನಸಭಾ ಕ್ಷೇತ್ರ, 33.5 ಸಾವಿರ ಮತಗಟ್ಟೆ
ಬಿಹಾರದ 243 ಸದಸ್ಯರ ವಿಧಾನ ಸಭೆಯ ಅವಧಿ ನವೆಂಬರ್ 29ಕ್ಕೆ ಮುಕ್ತಾಯಗೊಳ್ಳಲಿದೆ.
ಚುನಾವಣಾ ಆಯೋಗದ ಹೊಸ ಮಾರ್ಗಸೂಚಿ: ಅಪರಾಧ ಪ್ರಕರಣಗಳನ್ನು ಪತ್ರಿಕೆಗಳಲ್ಲಿ 3 ಬಾರಿ ಮುದ್ರಿಸುವುದು ಕಡ್ಡಾಯ
ಈ ಮೊದಲು ಕರೋನಾ ಬಿಕ್ಕಟ್ಟಿನಿಂದಾಗಿ ಎಲ್ಲಾ ವಿರೋಧ ಪಕ್ಷಗಳು ವಿಧಾನಸಭಾ ಚುನಾವಣೆಯನ್ನು ವಿರೋಧಿಸಿದ್ದವು, ಆದರೆ ಚುನಾವಣಾ ಆಯೋಗವು ಚುನಾವಣೆಯನ್ನು ಸಮಯಕ್ಕೆ ಸರಿಯಾಗಿ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ ಬಳಿಕ ಎಲ್ಲಾ ಪಕ್ಷಗಳೂ ಚುನಾವಣಾ ಸಿದ್ಧತೆಯಲ್ಲಿ ನಿರತರಾಗಿದ್ದಾರೆ.
ಕೋವಿಡ್ -19 (Covid-19) ರ ಬಿಕ್ಕಟ್ಟಿನ ನಂತರದ ಮೊದಲ ಚುನಾವಣೆ ಇದಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ದೂರವನ್ನು ಉಳಿಸಿಕೊಳ್ಳುವುದು ಮತ್ತು ಮತದಾನವನ್ನು ಸುಗಮವಾಗಿ ಪೂರ್ಣಗೊಳಿಸುವುದು ಚುನಾವಣಾ ಆಯೋಗಕ್ಕೆ (Election Commission) ದೊಡ್ಡ ಸವಾಲಾಗಿದೆ.