ನವದೆಹಲಿ: ಬಿಹಾರದ ಉಪಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ತಮ್ಮ ಮೊದಲ ಮಗುವನ್ನು ಖುಷಿಯಿಂದ ಸ್ವಾಗತಿಸಿರುವ ಅವರು ಸೋಮವಾರ ತಮ್ಮತೋಳುಗಳಲ್ಲಿ ನವಜಾತ ಶಿಶು ಹಿಡಿದುಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಪುಟ್ಟ ಕಂದಮ್ಮನ ಬಗ್ಗೆ ಟ್ವೀಟ್ ಮಾಡಿರುವ ತೇಜಸ್ವಿ ಯಾದವ್, ‘ದೇವರು ನಮಗೆ ಮಗಳ ರೂಪದಲ್ಲಿ ಉಡುಗೊರೆ ಕಳುಹಿಸಿದ್ದಾರೆ’ ಎಂದು ಹಿಂದಿಯಲ್ಲಿ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ರಾಷ್ಟ್ರೀಯ ಜನತಾ ದಳದ ಅಧಿಕೃತ ಟ್ವಿಟರ್ ಖಾತೆಯು ಪುತ್ರಿ ಜನಿಸಿದ್ದಕ್ಕೆ ತೇಜಸ್ವಿ ಯಾದವ್ ಅವರಿಗೆ ಅಭಿನಂದನೆ ಸಲ್ಲಿಸಿದೆ.


ಸಾವರ್ಕರ್ ಅವಮಾನಿಸಿದ್ರೆ ಪರಿಸ್ಥಿತಿ ನೆಟ್ಟಗಿರಲ್ಲ: ರಾಹುಲ್ ಗಾಂಧಿಗೆ ಉದ್ಧವ್ ಠಾಕ್ರೆ ತಿರುಗೇಟು!


ಭೂ ಹಗರಣದಲ್ಲಿ ಇಡಿ ದಾಳಿ ವೇಳೆ ಗರ್ಭಿಣಿಯಾಗಿದ್ದ ರಾಜಶ್ರೀ ಯಾದವ್ ಅವರು ದೈಹಿಕ ಅಸ್ವಸ್ಥತೆ ಅನುಭವಿಸಿದ್ದರು. ಗರ್ಭಧಾರಣೆ ಮತ್ತು ಅಧಿಕ ರಕ್ತದೊತ್ತಡದ ಹೊರತಾಗಿಯೂ ಇಡಿ ಅಧಿಕಾರಿಗಳು ಅವರನ್ನು 15 ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದರು ಎಂದು ಆರೋಪಿಸಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಸಿದ್ದರು.  


ಇದನ್ನೂ ಓದಿ: ಆಸ್ಪತ್ರೆಯಲ್ಲಿ ಸ್ಟ್ರೆಚರ್ ಸಿಗದಕ್ಕೆ ಹಾಳೆಯಲ್ಲಿ ಮಾವನನ್ನು ಎಳೆದೊಯ್ದ ಸೊಸೆ : Video ವೈರಲ್‌


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.