ಮಧ್ಯ ಪ್ರದೇಶ: ಅನಾರೋಗ್ಯಕ್ಕೆ ಒಳಗಾದ ರೋಗಿಯನ್ನು ಆಸ್ಪತ್ರೆಗೆ ತೋರಿಸಲು ಹೋದ ಮಾವನಿಗೆ ಸ್ಟ್ರೆಚರ್ ಸಿಗದಕ್ಕೆ ಸೊಸೆ ಹಾಳೆಯಲ್ಲಿ ಎಳೆದೊಯ್ದಿರುವ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಈ ಸದ್ಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಘಟನೆಯು ಗ್ವಾಲಿಯರ್ ನ ಹೊರ ವಲಯದಲ್ಲಿ ನಡೆದಿದೆ. ಮಾವ ವಿಪಿನ್ ಓಜಾ ಸೈಕಲ್ ಸವಾರಿ ಮಾಡುವಾಗ ಕೆಳಗೆ ಬಿದ್ದು ಆತನ ಬಲಗಾಲು ಮುರಿದಿತ್ತು ಹೀಗಾಗಿ ಆತನ ಸೊಸೆಯು ಮಾವನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾಳೆ. ಆ ವೇಳೆ ಅವಳು ತನ್ನ ಮಾವನನ್ನು ಮತ್ತೊಂದು ಕಟ್ಟಡಕ್ಕೆ ಸಾಗಿಸಬೇಕಾಗಿತ್ತು ಆ ವೇಳೆ ಆಕೆಗೆ ಆಸ್ಪತ್ರೆ ಸ್ಟ್ರೆಚರ್ ಸಿಗದ ಕಾರಣ ಚೀಲದಂಹ ಹಾಳೆಯಲ್ಲಿ ಮಾವನನ್ನು ಎಳೆದಿರುವ ವಿಡೀಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Flying Snake : ಗಾಳಿಯಲ್ಲಿ ಹಾರಾಡುವ ಹಾವು! ಮೈನವಿರೇಳಿಸುವ ವಿಡಿಯೋ ವೈರಲ್
ಘಟನೆ ನಡೆದಿರುವ ಈ ಆಸ್ಪತ್ರೆಯು ಗ್ವಾಲಿಯರ್ ವಲಯದಲ್ಲಿ ಹೊಸದಾಗಿ 397 ಕೋಟಿ ವೆಚ್ಚ ನಿರ್ಮಾಣವಾಗಿರುವ ಈ ಆಸ್ಪತ್ರೆ ತುರ್ತ ಪರಿಸ್ಥಿತಿಗೆ ಸ್ಟ್ರೆಚರ್ ವ್ಯವಸ್ಥೆ ಸಿಗದಿರುವುದು ದುಸ್ಥಿತಿಗೆ ಕಾರಣವಾಗಿದೆ. ಆಸ್ಪತ್ರೆ ದುಸ್ಥಿತಿ ಬಗ್ಗೆ ಹಂಚಿಕೊಂಡಿರುವ ಮಧ್ಯಪ್ರದೇಶದ ಕಾಂಗ್ರೇಸ್ ಎಂಪಿಯಾಗಿರುವ ಶ್ರೀ ಶಿವರಾಜ್, ಮಧ್ಯಪ್ರದೇಶದ ಆಡಳಿತದ ಮುಜುಗರಕ್ಕೆ ಈ ದೃಶ್ಯ ಸಾಕ್ಷಿಯಾಗಿದೆ. ನಿಮ್ಮ ದುರಾಡಳಿತದಿಂದ ರಾಜ್ಯವೇ ನಾಚಿಕೆಪಡುವಂತೆ ಮಾಡಿದೆ ಎಂದು ಕಾಂಗ್ರೇಸ್ ಅಲ್ಲಿನ ಸರ್ಕಾರದ ಬಗ್ಗೆ ಕಿಡಿಕಾರಿದ್ಧಾರೆ.
मध्यप्रदेश की शर्मसार करती तस्वीर,
— स्ट्रेचर के अभाव में एक बहू अपने ससुर को ज़मीन पर घसीटकर ले जाती हुई;शिवराज जी,
प्रदेश आपके कुकर्मों से शर्मिंदा है। pic.twitter.com/MdaLj9HmOQ— MP Congress (@INCMP) March 27, 2023
ಇದನ್ನೂ ಓದಿ: ಶಾಲಾ ತಪಾಸಣೆ ವೇಳೆ ಸಾರಾಯಿ, ಕಾಂಡೋಮ್ ಪತ್ತೆ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.