ಗುವಾಹಟಿ: ಇತ್ತೀಚೆಗಷ್ಟೇ ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಬಿಜೆಪಿ ಶಾಸಕ ಕ್ರುಪಾನಾಥ ಮಲ್ಲಾ ಆನೆಯಿಂದ ಕೆಳಗೆ ಬೀಳುವ ದೃಶ್ಯ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಅಸ್ಸಾಂನ ಕರೀಂಗಂಜ್ ಜಿಲ್ಲೆಯ ಮಲ್ಲಾಹ್ ಕ್ಷೇತ್ರದ ರತಬರಿಯಲ್ಲಿ ಶನಿವಾರ ಈ ಘಟನೆ ಸಂಭವಿಸಿದೆ. 


ಇತ್ತೀಚೆಗಷ್ಟೇ ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಬಿಜೆಪಿ ಶಾಸಕ ಕ್ರುಪಾನಾಥ ಮಲ್ಲಾ ಅವರ ಅಭಿಮಾನಿಗಳು ನೆಚ್ಚಿನ್ಬ ನಾಯಕನನ್ನು ಆನೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಲು ಯತ್ನಿಸಿದ ಸಮಯದಲ್ಲಿ ಈ ಅವಘಡ ಸಂಭವಿಸಿದ್ದು, ಈ ಘಟನೆಯಲ್ಲಿ ಅಸ್ಸಾಂ ಉಪಸಭಾಧ್ಯಕ್ಷ ಗಾಯಗೊಂಡಿದ್ದಾರೆ. 


ಈ ದೃಶ್ಯ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.