ನವದೆಹಲಿ: ಉತ್ತರಖಂಡ್ ದ ರುದ್ರಾಪುರ್ ಕ್ಷೇತ್ರದ ಬಿಜೆಪಿ ಶಾಸಕ ರಾಜಕುಮಾರ್ ತುಕ್ರಲ್ ಮಹಿಳಾ ಪೋಲಿಸ್ ಅಧಿಕಾರಿಗೆ ವಾಗ್ವಾದದಲ್ಲಿ ಧಮ್ಕಿ ಹಾಕುತ್ತಿರುವ ಚಿತ್ರಣ ಸೆರೆಯಾಗಿದೆ.


COMMERCIAL BREAK
SCROLL TO CONTINUE READING

ಈಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಶಾಸಕ ಮಹಿಳಾ ಸಬ್ ಇನ್ಸ್ಪೆಕ್ಟರ್ ಅನಿತಾ ಗೈರಾಲ್ ಅವರತ್ತ ನುಗ್ಗಿ ಧಮ್ಕಿ ಹಾಕುತ್ತಿರುವ ದೃಶ್ಯ ಸೆರೆಯಾಗಿದೆ.ಟ್ರಾಪಿಕ್ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಇಬ್ಬರನ್ನು ಬಂಧಿಸಿದ ವಿಚಾರವಾಗಿ ಶಾಸಕ ತುಕ್ರುಲ್ ಮತ್ತು ಮಹಿಳಾ ಪೋಲೀಸ ಅಧಿಕಾರಿ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.



 ಈ ಹಿಂದೆ ಮಾರ್ಚ್ 9 ರಂದು ರಾಜ್ಕುಮಾರ್ ತ್ರುಕ್ರಲ್ ಉತ್ತರಖಂಡದ ರುದ್ರಾಪುರ್ ನಲ್ಲಿ ತಮ್ಮ ಮನೆಯ ಮುಂಬಾಗದಲ್ಲಿ ಮೂವರು ದಲಿತ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಅವರನ್ನು ಥಳಿಸಿದ್ದರು ಆ ವೀಡಿಯೋ ಸಹಿತ ಆಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.