ಬಿಜೆಪಿ ಪ್ರಗ್ಯಾ ಠಾಕೂರ್ ನ್ನು ಪಕ್ಷದಿಂದ ಹೊರಹಾಕಬೇಕು- ಬಿಹಾರ್ ಸಿಎಂ ನಿತೀಶ್ ಕುಮಾರ್
ಮಹಾತ್ಮ ಗಾಂಧಿಯವರ ಹತ್ಯೆಗೈದ ನಾಥುರಾಮ್ ಗೋಡ್ಸೆ ಅವರನ್ನು ದೇಶಭಕ್ತ ಎಂದು ಹೇಳಿದ ಬಿಜೆಪಿ ಭೋಪಾಲ್ ಲೋಕಸಭಾ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಪಕ್ಷದಿಂದ ಹೊರಹಾಕಬೇಕೆಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ನವದೆಹಲಿ: ಮಹಾತ್ಮ ಗಾಂಧಿಯವರ ಹತ್ಯೆಗೈದ ನಾಥುರಾಮ್ ಗೋಡ್ಸೆ ಅವರನ್ನು ದೇಶಭಕ್ತ ಎಂದು ಹೇಳಿದ ಬಿಜೆಪಿ ಭೋಪಾಲ್ ಲೋಕಸಭಾ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಪಕ್ಷದಿಂದ ಹೊರಹಾಕಬೇಕೆಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಪ್ರಗ್ಯಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ನಿತೀಶ್ ಕುಮಾರ್ ತಮ್ಮ ಪಕ್ಷ ಇಂತಹ ಹೇಳಿಕೆಗಳನ್ನು ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ. "ಇದು ಅತ್ಯಂತ ಖಂಡನೀಯ. ಈ ಎಲ್ಲ ವಿಷಯಗಳನ್ನೂ ನಾವು ಸಹಿಸುವುದಿಲ್ಲ. ಬಾಪೂ ರಾಷ್ಟ್ರದ ಪಿತಾಮಹರಾಗಿದ್ದಾರೆ ಮತ್ತು ಗೋಡ್ಸೆ ಬಗ್ಗೆ ಯಾರಾದರೂ ಮಾತಾಡುತ್ತಿದ್ದರೆ ಜನರು ಇಷ್ಟಪಡುವುದಿಲ್ಲ "ಎಂದು ನಿತೀಶ್ ಕುಮಾರ್ ಪಾಟ್ನಾದಲ್ಲಿ ರಾಜ್ ಭವನ ಬಳಿ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಇದೇ ವೇಳೆ ಬಿಜೆಪಿ ಪಕ್ಷವು ಠಾಕೂರ್ ಅವರನ್ನು ಪಕ್ಷದಿಂದ ಹೊರಹಾಕಬೇಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ನಿತೀಶ್ ಕುಮಾರ್ "ಇದು ಬಿಜೆಪಿಯ ಆಂತರಿಕ ವಿಷಯವಾಗಿದ್ದರೂ ಕೂಡ ದೇಶ ಅಥವಾ ಸಿದ್ಧಾಂತದ ವಿಚಾರದಲ್ಲಿ ಇಂತಹ ವಿಷಯಗಳನ್ನು ಸಹಿಸಿಕೊಳ್ಳುವ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ" ಎಂದು ಅವರು ಹೇಳಿದರು.
ಕೆಲವು ದಿನಗಳ ಹಿಂದೆ ಗೋಡ್ಸೆಯನ್ನು ಸ್ವತಂತ್ರ ಭಾರತದ ಮೊದಲ ಭಯೋತ್ಪಾಧಕ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಬಿಜೆಪಿ ಅಭ್ಯರ್ಥಿ ಹಾಗೂ ಮಾಲೆಗಾಂ ಸ್ಪೋಟದ ಆರೋಪಿ ಪ್ರಗ್ಯಾ ಸಿಂಗ್ ಗೋಡ್ಸೆಯವರನ್ನು ದೇಶ ಭಕ್ತ ಎಂದು ಕರೆದಿದ್ದರು.ಈ ಹೇಳಿಕೆಗೆ ವ್ಯಾಪಕವಾಗಿ ವಿರೋಧ ವ್ಯಕ್ತವಾಗಿತ್ತು.