ಮುಂಬೈ: ದೀಪಾವಳಿ ಎಂದೊಡನೆ ಎಲ್ಲರಿಗೂ ಮೊದಲು ನೆನಪಾಗುವುದು ಪಟಾಕಿ. ಆದರೆ ಈ ವರ್ಷ ಪರಿಸ್ಥಿತಿ ಮೊದಲಿನಂತೆ ಇಲ್ಲ. ದಿನದಿಂದ ದಿನಕ್ಕೆ ಕರೋನಾ ಕಾಳಗ ಹೆಚ್ಚಾಗುತ್ತಲೇ ಇದೆ. ಅಷ್ಟೇ ಅಲ್ಲದೆ ವಾಯುಮಾಲಿನ್ಯ ಕೂಡ ಹೆಚ್ಚಾಗಿದೆ. ಪಟಾಕಿಯಿಂದ ವಾಯುಮಾಲಿನ್ಯ (Air Pollution) ಇನ್ನೂ ಹೆಚ್ಚಾಗಲಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ. ಈ ಹಿನ್ನಲೆಯಲ್ಲಿ ಮಾಲಿನ್ಯವನ್ನು ತಡೆಗಟ್ಟಲು ಮುಂಬೈನಲ್ಲಿ  ದೀಪಾವಳಿಯವರೆಗೆ ಪಟಾಕಿಗಳನ್ನು ನಿಷೇಧಿಸಲಾಗಿದೆ. ಶಿವಸೇನೆ ನೇತೃತ್ವದ ಬಿಎಂಸಿ (BMC) ಸುತ್ತೋಲೆ ಹೊರಡಿಸುವ ಮೂಲಕ ಈ ವಿಷಯ ತಿಳಿಸಿದೆ.


COMMERCIAL BREAK
SCROLL TO CONTINUE READING

ಮಾಲಿನ್ಯ ಮತ್ತು ಕರೋನಾ ಪರಿಸ್ಥಿತಿ ಪರಿಗಣಿಸಿ ನಿರ್ಧಾರ: BMC
ಕರೋನಾ ಮತ್ತು ಮಾಲಿನ್ಯದ ಅಪಾಯವು ಮುಂಬೈ ಸೇರಿದಂತೆ ದೇಶಾದ್ಯಂತ ಹರಡಿದೆ. ಆದ್ದರಿಂದ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ ಎಂದು ಬಿಎಂಸಿ ತಿಳಿಸಿದೆ.


Diwali)ಯ ತನಕ ಎಲ್ಲಿಯೂ ಜೋರಾಗಿ ಅಥವಾ ಮಾಲಿನ್ಯ ಉಂಟುಮಾಡುವಂತಹ ಪಟಾಕಿಗಳನ್ನೂ ಸಿಡಿಸಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ರಸ್ತೆಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ  ಯಾವುದೇ ರೀತಿಯ ಪಟಾಕಿಗಳನ್ನು ಹೊಡೆಯುವಂತಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದೆ.


ಈ ಬಾರಿಯ ದೀಪಾವಳಿಗೆ ರಾಜ್ಯದಲ್ಲೂ ಪಟಾಕಿ ಬ್ಯಾನ್..!


ದೀಪಾವಳಿಯ ಸಂಜೆ ಸೂಸರಬತ್ತಿ, ಹೂಕುಂಡ ಹಚ್ಚಲು ಅನುಮತಿ: 
ದೀಪಾವಳಿಯ ಸಂಜೆ ಲಕ್ಷ್ಮಿ ಪೂಜನ್ ನಂತರ ಮನೆಯ ಅಂಗಳದಲ್ಲಿ ಅಥವಾ ಸೊಸೈಟಿ ಕಾಂಪೌಂಡ್‌ನಲ್ಲಿ ಸೂಸರಬತ್ತಿ, ಹೂಕುಂಡ ರೀತಿಯ ಸದ್ದಿಲ್ಲದ ಪಟಾಕಿ ಸಿಡಿಸಲು ಬಿಎಂಸಿ ಜನರಿಗೆ ರಿಯಾಯಿತಿ ನೀಡಿತು. ಆದರೆ ಯಾವುದೇ ಸ್ಥಿತಿಯಲ್ಲಿ ದೊಡ್ಡ ಶಬ್ದ ಅಥವಾ ಭಾರೀ ಹೊಗೆ ಉಂಟುಮಾಡುವ ಪಟಾಕಿಗಳನ್ನು ಸಿಡಿಸಲು ಅನುಮತಿಸುವುದಿಲ್ಲ ಎಂದು ಬಿಎಂಸಿ ಸ್ಪಷ್ಪಪಡಿಸಿದೆ. ಈ ನಿಯಮಗಳನ್ನು ಪಾಲಿಸದವರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಎಂಸಿ ಎಚ್ಚರಿಸಿದೆ.


ದೆಹಲಿ-ಎನ್‌ಸಿಆರ್‌ನಲ್ಲಿ ನವೆಂಬರ್ 30ರವರೆಗೆ ಪಟಾಕಿ ನಿಷೇಧಿಸಿ NGT ಆದೇಶ


ದೆಹಲಿ ಸರ್ಕಾರ ಮತ್ತು ಎನ್‌ಜಿಟಿ ಕೂಡ ಕ್ರಮ ಕೈಗೊಂಡಿದೆ:
ಇದಕ್ಕೂ ಮುನ್ನ ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರವು ನವೆಂಬರ್ 30 ರವರೆಗೆ ನಗರದಲ್ಲಿ ಪಟಾಕಿ ಮಾರಾಟ, ಸಂಗ್ರಹಣೆ ನಿಷೇಧಿಸಿದೆ. ಅದೇ ಸಮಯದಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ನವೆಂಬರ್ 30 ರವರೆಗೆ ಪಟಾಕಿ ಸಿಡಿಸುವಿಕೆಗೆ ಸಂಪೂರ್ಣ ನಿಷೇಧ ಹೇರಿ ಎನ್‌ಜಿಟಿ ಶುಕ್ರವಾರ ತೀರ್ಪು ನೀಡಿದೆ. ಎನ್‌ಜಿಟಿಯ ಈ ಆದೇಶದಿಂದಾಗಿ ನೋಯ್ಡಾ, ಗಾಜಿಯಾಬಾದ್, ಫರಿದಾಬಾದ್, ಗುರುಗ್ರಾಮ್ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಪಟಾಕಿ ನಿಷೇಧಿಸಲಾಗಿದೆ.