ನವದೆಹಲಿ: ದೇಶದಲ್ಲಿ ಒಮಿಕ್ರಾನ್ ರೂಪಾಂತರದ ಎರಡು ಪ್ರಕರಣಗಳು ಇಲ್ಲಿಯವರೆಗೆ ವರದಿಯಾಗಿದೆ.ಅದರಲ್ಲೂ ಈ ಎರಡೂ ಪ್ರಕರಣಗಳು ಕರ್ನಾಟಕದಿಂದಲೇ ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:"ನಿಮಗೆ 24 ಗಂಟೆಗಳನ್ನು ನೀಡುತ್ತಿದ್ದೇವೆ": ದೆಹಲಿ ಮಾಲಿನ್ಯದ ಕುರಿತು ಸರ್ಕಾರಕ್ಕೆ ಸುಪ್ರೀಂ ಕಠಿಣ ಎಚ್ಚರಿಕೆ


ಸೊಂಕಿತರು ಇಬ್ಬರು ಪುರುಷರಾಗಿದ್ದು, ಒಬ್ಬರಿಗೆ 66 ವರ್ಷ ಮತ್ತೊಬ್ಬರಿಗೆ 46 ವರ್ಷ ವಯಸ್ಸು ಎಂದು ತಿಳಿದುಬಂದಿದೆ.'ಆರೋಗ್ಯ ಸಚಿವಾಲಯ ಸ್ಥಾಪಿಸಿದ 37 ಪ್ರಯೋಗಾಲಯಗಳ INSACOG ಒಕ್ಕೂಟದ ಜೀನೋಮ್ ಸೀಕ್ವೆನ್ಸಿಂಗ್ ಪ್ರಯತ್ನದ ಮೂಲಕ ಕರ್ನಾಟಕದಲ್ಲಿ ಇದುವರೆಗೆ ಒಮಿರ್ಕ್ರಾನ್‌ನ ಎರಡು ಪ್ರಕರಣಗಳು ಪತ್ತೆಯಾಗಿವೆ, ನಾವು ಭಯಪಡುವ ಅಗತ್ಯವಿಲ್ಲ, ಆದರೆ ಜಾಗೃತಿ ಮೂಡಿಸಬೇಕು. ಸಂಪೂರ್ಣವಾಗಿ ಅತ್ಯಗತ್ಯ.COVID ಸೂಕ್ತವಾದ ನಡವಳಿಕೆಯ ಅಗತ್ಯವಿದೆ" ಎಂದು ಐಸಿಎಂಆರ್ ಡಿಜಿ ಬಲರಾಮ್ ಭಾರ್ಗವ ಈ ಕುರಿತು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ : Viral Video: ಸಮುದ್ರದಲ್ಲಿ ದೈತ್ಯ ಹಾವಿನ ಜಲಕ್ರೀಡೆ, ನೋಡಿ ವೈರಲ್ ವಿಡಿಯೋ


-ಕರ್ನಾಟಕದಲ್ಲಿ ಪತ್ತೆಯಾದ ಎರಡೂ ಓಮಿಕ್ರಾನ್ ಪ್ರಕರಣಗಳ ಎಲ್ಲಾ ಪ್ರಾಥಮಿಕ, ದ್ವಿತೀಯ ಸಂಪರ್ಕಗಳನ್ನು ಪತ್ತೆಹಚ್ಚಲಾಗಿದೆ ಮತ್ತು ಪರೀಕ್ಷಿಸಲಾಗುತ್ತಿದೆ.


-ಜನರು ಓಮಿಕ್ರಾನ್ ಪತ್ತೆಹಚ್ಚುವಿಕೆಯ ಬಗ್ಗೆ ಭಯಪಡುವ ಅಗತ್ಯವಿಲ್ಲ, ಆದರೆ ಅರಿವು ಸಂಪೂರ್ಣವಾಗಿ ಅವಶ್ಯಕವಾಗಿದೆ; Coivd-ಸೂಕ್ತ ನಡವಳಿಕೆಯನ್ನು ಅನುಸರಿಸುವುದು ಮತ್ತು ಸಭೆ ಕೂಟಗಳನ್ನು ತಪ್ಪಿಸಬೇಕಾಗಿದೆ.


ಇದನ್ನೂ ಓದಿ : Viral Video: ಸಮುದ್ರದಲ್ಲಿ ದೈತ್ಯ ಹಾವಿನ ಜಲಕ್ರೀಡೆ, ನೋಡಿ ವೈರಲ್ ವಿಡಿಯೋ


-ಈ ಸಮಯದಲ್ಲಿ ಹೆಚ್ಚಿದ COVID-19 ಲಸಿಕೆ ತೆಗೆದುಕೊಳ್ಳುವ ಅಗತ್ಯತೆ ಇದೆ, ಆದ್ದರಿಂದಾಗಿ ನೀವು ಸಂಪೂರ್ಣ ಲಸಿಕೆಯನ್ನು ಪಡೆಯಲು ವಿಳಂಬ ಮಾಡಬೇಡಿ.


-ಇಲ್ಲಿಯವರೆಗೆ 29 ರಾಷ್ಟ್ರಗಳಲ್ಲಿ SARS-CoV-2 ನ ಓಮಿಕ್ರಾನ್ ರೂಪಾಂತರದ 373 ಪ್ರಕರಣಗಳು ಪತ್ತೆಯಾಗಿವೆ; ಈ ಹಿನ್ನಲೆಯಲ್ಲಿ ಭಾರತದಲ್ಲಿಯೂ ವೈರಸ್ ಬಗ್ಗೆ ಜಾಗೃತಿವಹಿಸಲಾಗುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.