ನವದೆಹಲಿ: ದೆಹಲಿಯ ವಾಯುಮಾಲಿನ್ಯವು (Delhi Air Pollution) ಸರ್ಕಾರದ ಕ್ರಮಗಳ ಹೊರತಾಗಿಯೂ ಹೆಚ್ಚಾಗಿದೆ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ. ಕಳೆದ ಕೆಲವು ವಾರಗಳಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ನ್ಯಾಯಾಲಯವು ಅತೃಪ್ತಿ ವ್ಯಕ್ತಪಡಿಸಿದೆ.
"ಏನೂ ಆಗುತ್ತಿಲ್ಲ ಮತ್ತು ಮಾಲಿನ್ಯವು ಹೆಚ್ಚುತ್ತಿದೆ ಎಂದು ನಾವು ಭಾವಿಸುತ್ತೇವೆ. ಸಮಯ ಮಾತ್ರ ವ್ಯರ್ಥವಾಗುತ್ತಿದೆ" ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ವಿಚಾರಣೆಯ ಸಂದರ್ಭದಲ್ಲಿ ಹೇಳಿದರು. ಇದು ರಾಷ್ಟ್ರ ರಾಜಧಾನಿಯಲ್ಲಿನ ವಾಯು ಬಿಕ್ಕಟ್ಟಿನ (Delhi Pollution)ಕುರಿತು ನ್ಯಾಯಾಲಯವು ವಾದಗಳನ್ನು ಆಲಿಸಿದ ಸತತ ನಾಲ್ಕನೇ ವಾರವಾಗಿದೆ.
ಕೈಗಾರಿಕಾ ಮತ್ತು ವಾಹನ ಮಾಲಿನ್ಯದ ವಿರುದ್ಧ ಕ್ರಮಕೈಗೊಳ್ಳಲು ಕೇಂದ್ರ, ದೆಹಲಿ ಮತ್ತು ನೆರೆಯ ರಾಜ್ಯಗಳಿಗೆ ನ್ಯಾಯಾಲಯವು (supreme court) 24 ಗಂಟೆಗಳ ಗಡುವು ನೀಡಿತು.
ಕಳೆದ ತಿಂಗಳು ದೀಪಾವಳಿಯ ನಂತರ ದೆಹಲಿಯ ಗಾಳಿಯ ಗುಣಮಟ್ಟ ತೀವ್ರವಾಗಿ ಹದಗೆಟ್ಟಿದೆ. ಕೃಷಿ ತ್ಯಾಜ್ಯದ ಸುಡುವುದನ್ನು ಸಹ ಒಂದು ಮೂಲವಾಗಿ ಉಲ್ಲೇಖಿಸಲಾಗಿದೆ. ಆದರೆ ಇದು ಚರ್ಚೆಗಳಿಗೆ ಕಾರಣವಾಯಿತು. ಒಂದು ತಿಂಗಳು ಕಳೆದರೂ ನಗರವು ವಾಯುಮಾಲಿನ್ಯದಿಂದ ಮುಕ್ತಿಕಂಡಿಲ್ಲ.
ಇದನ್ನೂ ಓದಿ: ನೋಡ ನೋಡುತ್ತಿದ್ದಂತೆಯೇ ನುಂಗಿಯೇ ಬಿಟ್ಟಿತು ಇಡೀ ಮೊಟ್ಟೆ, ಹಾವಿನ ಈ ಭಯಾನಕ ವಿಡಿಯೋವನ್ನೊಮ್ಮೆ ನೋಡಿ
ಶಾಲೆಗಳ ಪುನರಾರಂಭದ ಕುರಿತು ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ (Aravind Kejrival) ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಮೂರು ವರ್ಷದ ಮಕ್ಕಳು ಮತ್ತು ನಾಲ್ಕು ವರ್ಷದ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಆದರೆ ವಯಸ್ಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಸರ್ಕಾರ ಆಡಳಿತ ನಡೆಸಲು ನಾವು ಯಾರನ್ನಾದರೂ ನೇಮಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ರಮಣ (Chief Justice Ramana) ಹೇಳಿದರು.
ದೆಹಲಿ ಸರ್ಕಾರವನ್ನು (Delhi government) ಪ್ರತಿನಿಧಿಸುವ ವಕೀಲ ಅಭಿಷೇಕ್ ಮನು ಸಿಂಘ್ವಿ ಪ್ರತಿಕ್ರಿಯಿಸಿ, "ಶಾಲೆಗಳಲ್ಲಿ, 'ಕಲಿಕೆ ನಷ್ಟ' ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ನಾವು ಆನ್‌ಲೈನ್‌ನ ಆಯ್ಕೆಯನ್ನು ಒಳಗೊಂಡಂತೆ ಷರತ್ತಿನೊಂದಿಗೆ ಮತ್ತೆ ತೆರೆದಿದ್ದೇವೆ." ಎಂದು ತಿಳಿಸಿದರು.
ಇದನ್ನೂ ಓದಿ: ಐಸ್ಕ್ರೀಂ ಕಪ್, ಸ್ಪೂನ್ ಸೇರಿ ಹಸುವಿನ ಹೊಟ್ಟೆಯೊಳಗಿತ್ತು ಬರೋಬ್ಬರಿ 77 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ.!
"ನೀವು ಅದನ್ನು ಐಚ್ಛಿಕವಾಗಿ ಬಿಟ್ಟಿದ್ದೀರಿ ಎಂದು ನೀವು ಹೇಳುತ್ತಿದ್ದೀರಿ, ಆದರೆ ಮನೆಯಲ್ಲಿ ಕುಳಿತುಕೊಳ್ಳಲು ಯಾರು ಬಯಸುತ್ತಾರೆ? ನಮಗೂ ಮಕ್ಕಳು ಮತ್ತು ಮೊಮ್ಮಕ್ಕಳು ಇದ್ದಾರೆ. ಸಾಂಕ್ರಾಮಿಕ ರೋಗದಿಂದ ಅವರು ಎದುರಿಸುತ್ತಿರುವ ಸಮಸ್ಯೆಗಳು ನಮಗೆ ತಿಳಿದಿದೆ. ನೀವು ಕ್ರಮ ತೆಗೆದುಕೊಳ್ಳದಿದ್ದರೆ ನಾವು ನಾಳೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ನಾವು ನಿಮಗೆ 24 ಗಂಟೆಗಳ ಕಾಲಾವಕಾಶ ನೀಡುತ್ತಿದ್ದೇವೆ" ಎಂದು ಮುಖ್ಯ ನ್ಯಾಯಮೂರ್ತಿ ಎಚ್ಚರಿಕೆ ನೀಡಿದರು.